ಹಾಗೂ ಯಾದಗಿರಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಎಸ್. ಸುನೀಲದತ್ ಯಾದವ ಹೇಳಿದರು.
Advertisement
ನಗರದ ಹೊರವಲಯದಲ್ಲಿರುವ ಜಿಲ್ಲಾಡಳಿತ ಭವನದ ಹಿಂಬದಿಯಲ್ಲಿ ಕಾಮಗಾರಿ ನಿರ್ಮಾಣದ ಸ್ಥಳ, ನೀಲ ನಕ್ಷೆಪರಿಶೀಲಿಸಿ ಅವರು ಮಾತನಾಡಿದರು. ಅತಿ ಶೀಘ್ರದಲ್ಲಿ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಲಾಗುವುದು. ಬೇಕಿರುವ
ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲು ಸರಕಾರದೊಂದಿಗೆ ಸಮಾಲೋಚನೆ ನಡೆಸಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು. ಈಗಾಗಲೇ ಈ ಕಟ್ಟಡದ
ನೀಲಿನಕ್ಷೆ ವೀಕ್ಷಿಸಿದ್ದು, ಶೀಘ್ರದಲ್ಲೆ ಯಾದಗಿರಿ ಜಿಲ್ಲಾ ನ್ಯಾಯಾಲಯದ ಕಟ್ಟಡ ನಿರ್ಮಾಣವಾಗಲಿದೆ ಎಂದು ಹೇಳಿದರು.
ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ನ್ಯಾಯಾಲಯ ಮತ್ತು ಹಿರಿಯ ಸಿವಿಲ್ ನ್ಯಾಯಾಲಯ ಹಾಗೂ ಕಿರಿಯ ಸಿವಿಲ್
ನ್ಯಾಯಾಲಯ, ಹೆಚ್ಚುವರಿ ಸಿವಿಲ್ ನ್ಯಾಯಾಲಯಗಳ ಕಚೇರಿಗೆ ಭೇಟಿ ನೀಡಿ ಆಡಳಿತಾತ್ಮಕ ದಾಖಲೆ ಪತ್ರ
ಪರಿಶೀಲಿಸಿದರು. ರಾಷ್ಟ್ರೀಯ ಲೋಕ ಅದಾಲತ್‌ದಲ್ಲಿ ಪಾಲ್ಗೊಂಡು ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುತ್ತಿರುವ ಕೆಲವು ಪ್ರಕರಣಗಲ್ಲಿ ಭಾಗಿಯಾಗಿ ಸಲಹೆ ಸೂಚನೆ ನೀಡಿದರು. ಯಾದಗಿರಿ, ಶಹಾಪುರ, ಸುರಪುರರಲ್ಲಿ ಒಟ್ಟು ರಾಜಿ ಸಂಧಾನದ ಮೂಲಕ ಒಟ್ಟು 223 ಪ್ರಕರಣಗಳು ಇತ್ಯರ್ಥಗೊಂಡಿದೆ ಎಂದು ಹೇಳಿದರು.
Related Articles
Advertisement
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶ್ರೀನಿವಾಸರಾವ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಶಾಂತಪ್ಪ ಖಾನಳ್ಳಿ, ಜಂಟಿ ಕಾರ್ಯದರ್ಶಿ ಭೀಮರೆಡ್ಡಿ ಅಚೋಲಾ, ಖಜಾಂಚಿ ರಾಜು ಸಜ್ಜನ, ಸರ್ಕಾರಿ ವಿಶೇಷ ಅಭಿಯೋಜಕ ಪಿ. ಶಿವರಾಜ, ಡಿ.ಜಿ. ಪಿ ಜಗನ್ನಾಥರೆಡ್ಡಿ, ಎಡಿಜಿಪಿ ನಿಂಗಪ್ಪ ಬಂದಳ್ಳಿ, ಎಸ್.ಎಂ. ಪಾಟೀಲ, ಎಂ. ವಿಜಯಕುಮಾರ, ಜಿ. ನಾರಾಯಣರಾವ್, ಬಿ. ಜಯಚಾರಿ, ಕಾರ್ಯನಿರ್ವಾಹಕ ಅಭಿಯಂತರ ಚನ್ನಬಸಪ್ಪ ಮರೋಳೆ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ನಾಗಪ್ಪ ಪಾತ್ರಪಳ್ಳಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸಿದ್ದಪ್ಪಗೌಡ, ಗುರುರಾಜ ಕುಲಕರ್ಣಿ,ದೇವಿಂದ್ರಪ್ಪ ಹುಲಸೂರ ಸೇರಿದಂತೆ ಅನೇಕ ವಕೀಲರು ಹಾಜರಿದ್ದರು. ಅಮೃತ ಶೆಟ್ಟಿ ಪ್ರಾರ್ಥನೆ ಗೀತೆ ಹಾಡಿದರು. ಹಿರಿಯ ವಕೀಲ ನರಸಿಂಗರಾವ ಕುಲಕರ್ಣಿ ಸ್ವಾಗತಿಸಿದರು. ಗಂಗಾಧರ ಆವಂತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಪಿ. ನಾಡೇಕರ್ ನಿರೂಪಿಸಿದರು.