Advertisement

ನಮ್ಮೂರ ಯುವ ಶಕ್ತಿ ಊರಲ್ಲೇ ಉಳಿಯಲು ಸಹಕಾರಿ ಸಂಘಗಳು ನೇತೃತ್ವ‌ ಕೊಡಬೇಕಿದೆ: ಕಾಗೇರಿ

02:38 PM May 10, 2022 | Team Udayavani |

ಶಿರಸಿ: ನಮ್ಮೂರಿನ ಯುವಕರು ನಮ್ಮೂರಲ್ಲಿ ಉಳಿಯುವಂತೆ ಆಗಬೇಕು. ಸಹಕಾರಿ ಸಂಘಗಳು ಈ ಬಗ್ಗೆ ಮುಂಚೂಣಿಯಲ್ಲಿ ಕೆಲಸ ಸಾಧಿಸಬೇಕು. ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆಶಿಸಿದರು.
ಮಂಗಳವಾರ ತಾಲೂಕಿನ ಬಿಸಲಕೊಪ್ಪದ ವ್ಯವಸಾಯ ಸೇವಾ ಸಹಕಾರಿ ಸಂಘದ ಶತಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಲಸೆ ಹೋಗದಂತೆ ಗುಡಿಕೈಗಾರಿಕೆಗೆ ಪ್ರೋತ್ಸಾಹಿಸಬೇಕು. ಹಲಸಿನಕಾಯಿ ಹಪ್ಪಳದಿಂದ ಇತರ ಉತ್ಪನ್ನ ಗುಣಮಟ್ಟಕೆ ಯಂತ್ರೋಪಕರಣಗಳ ಕೊಡುಗೆ‌ ಕೊಡುವಲ್ಲೂ ನೆರವಾಗಬೇಕು. ನಮ್ಮ ಸೊಸೈಟಿ ವ್ಯಾಪ್ತಿಯಲ್ಲಿ ಸ್ವದೇಶಿ ವಸ್ತು ಬಳಕೆಗೆ‌ ಪ್ರೇರಣೆ, ಸರಳ ಜೀವನ ನಡೆಸಲು ಸಾಧ್ಯವಾ, ಸ್ವಚ್ಛತೆ ಆದ್ಯತೆ‌ ಕೊಡಬಹುದಾ ಎಂದೂ ಆಲೋಚಿಸಬೇಕು. ಸಹಕಾರಿ ಸಂಘಗಳು ಆಯಾ ಭಾಗದ ಜವಬ್ದಾರಿ, ನೇತೃತ್ವ ವಹಿಸಬೇಕು. ನಮ್ಮೂರಿಗೆ ಬೇಕಾದ ಕಾರ್ಯಕ್ಕೆ‌ ನಾವು ಸ್ವಾವಲಂಬಿ, ರಾಷ್ಟ್ರಾಭಿಮಾನ‌ ಕಾರ್ಯಕ್ಕೆ‌ ಮುಂದಾಗಿದೆ ಎಂದೂ ಆಶಿಸಿದರು.
ಕಾರ್ಮಿಕ ಸಚಿವ ಶಿವಾರಾಮ ಮಾತನಾಡಿದರು.
ಅತಿಥಿ ವಾಯುವ್ಯ ಸಾರಿಗೆ ಅಧ್ಯಕ್ಷ ವಿ.ಎಸ್.ಪಾಟೀಲ,
ಎಪಿಎಂಸಿ ಅಧ್ಯಕ್ಷ ಶಿವಕುಮಾರ ದೇಸಾಯಿ ಗೌಡ, ಎಪಿಎಂಸಿ ಸದಸ್ಯ ಸುನೀಲ‌ ನಾಯ್ಕ, ಬಿಸಲಕೊಪ್ಪ ಗ್ರಾ.ಪಂ. ಅಧ್ಯಕ್ಷ ರಾಘವೇಂದ್ರ ನಾಯ್ಕ ಆನಗೋಡಕೊಪ್ಪ, ಸಹಾಯಕ ನಿಬಂಧಕ ನಿಂಗರಾಜು ಎಸ್,
ಉಪಾಧ್ಯಕ್ಷ ಟಿ.ಎಂ.ಅಶೋಕ ಕುಪ್ಪಳ್ಳಿ, ನಿರ್ದೇಶಕರಾದ ವಿ.ಎಂ.ಹೆಗಡೆ ಬಿಸಲಕೊಪ್ಪ, ಸತೀಶ ಹೆಗಡೆ, ತಾರಾ ಹೆಗಡೆ ಉಲ್ಲಾಳ, ಪದ್ಮನಾಭ ಭಟ್ಟ, ಅನಂದ ನಾಯ್ಕ, ಪ್ರಭಾವತಿ ಬೀಳೂರು, ತಿಮ್ಮಪ್ಪ ಹೆಗಡೆ, ಹೂವಾ ಗಿರಗಿ, ಮಹೇಂದ್ರ ಭಟ್ಟ ಸಾಲೆಕೊಪ್ಪ, ಪರಶುರಾಮ ಹಸ್ಲರ್ ಇತರರು ಇದ್ದರು‌.
ಅಧ್ಯಕ್ಷತೆಯನ್ನು ವಹಿಸಿದ ಸೊಸೈಟಿ ಅಧ್ಯಕ್ಷ ಎಸ್.ಎನ್.ಭಟ್ಟ ಕ ವರ್ಗದ ಸೊಸೈಟಿ ಈಗ ಅ ವರ್ಗಕ್ಕೆ ಬಂದಿದೆ.‌ ಸದಸ್ಯರ ಜೊತೆ ಸಂಘವೂ ಬೆಳೆದಿದೆ. ಅನೇಕ ಹೊಸ ಯೋಜನೆ ಕೂಡ ಮಾಡುತ್ತಿದ್ದೇವೆ ಎಂದರು.
ಪ್ರಣತಿ ಸಂಗಡಿಗರು ಪ್ರಾರ್ಥಿಸಿದರು.
ಪ್ರಕಾಶ ಭಾಗವತ ನಿರ್ವಹಿಸಿದರು. ಕಾರ್ಯದರ್ಶಿ ಅಭಿಷೇಕ ಎನ್.ಹೆಗಡೆ ಕಾಟಿಮನೆ ಸ್ವಾಗತಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next