Advertisement

ಸಹಕಾರಿ ಸಂಘ ರೈತರ ಸಂಜೀವಿನಿ

04:56 PM Nov 17, 2018 | |

ಕಡೂರು: ಸಹಕಾರ ಕ್ಷೇತ್ರ ಮಾತ್ರ ರೈತಾಪಿ, ಕೃಷಿಕರ ಪರ ಕಾರ್ಯನಿರ್ವಹಿಸುತ್ತಿರುವ ಕ್ಷೇತ್ರವಾಗಿದೆ. ಆದ್ದರಿಂದ ಸಹಕಾರಿ ಸಂಘಗಳು ರೈತರ ಸಂಜೀವಿನಿಯಂತೆ ಎಂದು ವಿಧಾನ ಪರಿಷತ್‌ ಸದಸ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಅಧ್ಯಕ್ಷ ಎಸ್‌. ಎಲ್‌. ಧರ್ಮೇಗೌಡ ತಿಳಿಸಿದರು.

Advertisement

ಅವರು ಶುಕ್ರವಾರ ಪಟ್ಟಣದ ಪಿರ್ಕಾಡ್‌ ಬ್ಯಾಂಕ್‌ ಸಭಾಂಗಣದಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್‌, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಸಹಕಾರ ಇಲಾಖೆ ಹಾಗೂ ತಾಲೂಕಿನ ಎಲ್ಲಾ ಸಹಕಾರ ಸಂಘ ಮತ್ತು ಬ್ಯಾಂಕ್‌ಗಳ ಸಹಯೋಗದಲ್ಲಿ ನಡೆದ 65ನೇ ಅಖೀಲ ಭಾರತ ಸಹಕಾರ ಸಪ್ತಾಹದ ಆಚರಣೆ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು.

ಸಹಕಾರ ಸಪ್ತಾಹ ಎಂದರೆ ಸಹಕಾರ ಸಂಘಗಳ ಪ್ರಗತಿ, ಅಭಿವೃದ್ಧಿ, ಲಾಭ ನಷ್ಟಗಳ ಕುರಿತು ಆತ್ಮಾವಲೋಕನ
ಮಾಡುವ ಸಭೆಯಾಗಿದೆ. ಯಾವುದೇ ವ್ಯಕ್ತಿ ಸಹಕಾರ ಸಂಘಗಳ ಬಗ್ಗೆ ನಂಬಿಕೆ, ವಿಶ್ವಾಸ ಇಟ್ಟುಕೊಂಡು ವ್ಯವಹರಿಸಿದರೆ ಸಹಕಾರ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಲಿದೆ. 

ನಗರ, ಪಟ್ಟಣಗಳಲ್ಲಿ ತಲೆ ಎತ್ತುತ್ತಿರುವ ಸುಪರ್‌ ಬಜಾರ್‌ನಲ್ಲಿ ಮಾರಾಟ ಮಾಡುವ ವಸ್ತುಗಳನ್ನು ಸಹ ಸಹಕಾರ ಸಂಘಗಳ
ಮೂಲಕ ಮಾರಾಟ ಮಾಡುವುದನ್ನು ಬೆಳೆಸಿಕೊಂಡರೆ ಉತ್ತಮ ಲಾಭ ಗಳಿಸಲು ಸಾಧ್ಯ. ಇದಕ್ಕೆ ಜಿಲ್ಲೆಯ ಸೀತೂರಿನ ಸಹಕಾರ ಸಂಘ ಮತ್ತು ಮೂಡಿಗೆರೆಯ ಬಣಕಲ್ಲಿನ ಸಹಕಾರ ಸಂಘಗಳೆ ನಿದರ್ಶನವಾಗಿವೆ ಎಂದರು.

ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘಗಳು ಆರ್ಥಿಕವಾಗಿ ಪ್ರಬಲವಾಲಗಲು ಸಹಕಾರ ಸಂಘಗಳಲ್ಲಿನ ಪ್ರಾಮಾಣಿಕತೆಯೇ ಕಾರಣವಾಗಿದೆ. ಸಹಕಾರ ಕ್ಷೇತ್ರಕ್ಕೆ 104 ವರ್ಷಗಳ ಇತಿಹಾಸವಿದೆ. ಇದನ್ನು ಉಳಿಸಿ ಬೆಳೆಸಲು ಯುವಕರು ಮುಂದಾಗಬೇಕು ಎಂದರು.

Advertisement

ಸಹಕಾರ ರಂಗದಲ್ಲಿ ರಾಜಕೀಯ ಬೆರೆಸಬಾರದು. ಜನರ ಪರಿವರ್ತನೆ ಸಹಕಾರ ಬ್ಯಾಂಕುಗಳಿಂದ ಮಾತ್ರ ಸಾಧ್ಯ. ಯಾವುದೇ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾಧ್ಯವಿಲ್ಲ, ಸಹಕಾರ ಸಂಘ ಜನರ ಅವಿಭಾಜ್ಯ ಎಂದರು.
 
ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿಂದ ತಾಲೂಕಿನ ವ್ಯವಸಾಯ ಸಹಕಾರ ಸಂಘಗಳಿಗೆ 80 ಕೋಟಿ ರೂ. ಸಾಲ
ವಿತರಿಸಲಾಗಿದೆ. ಸಹಕಾರಿ ಸಂಘಗಳಲ್ಲಿ ತಮ್ಮ ಖಾತೆಗಳನ್ನು ತೆರೆದು ವ್ಯವಹಾರ ನಡೆಸಿ ಎಂದು ಸಲಹೆ ನೀಡಿದರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಟಿ.ಡಿ. ಸತ್ಯನ್‌ ಮಾತನಾಡಿ, ರಾಜ್ಯದಲ್ಲಿಯೇ ಚಿಕ್ಕಮಗಳೂರು ಜಿಲ್ಲಾ ಸಹಕಾರ ಬ್ಯಾಂಕ್‌
ದ್ವಿತೀಯ ಸ್ಥಾನ ಪಡೆಯುವ ಮೂಲಕ ಪ್ರಶಸ್ತಿ ಗಳಿಸಿದೆ. ಇದಕ್ಕೆ ಕಾರಣ ನಿಮ್ಮೆಲ್ಲರ ಸಹಕಾರ ಎಂದರು. ನಿರ್ದೇಶಕ ಎಸ್‌.ಜಿ.ರಾಮಪ್ಪ ಮಾತನಾಡಿದರು. ಅಧ್ಯಕ್ಷತೆಯನ್ನು ಸಹಕಾರ ಯೂನಿಯನ್‌ ಅಧ್ಯಕ್ಷ ಕೆ.ಎ.ವಿವೇಕ್‌ ವಹಿಸಿದ್ದರು. ಉಪಾಧ್ಯಕ್ಷ ಪಿ. ರವಿ, ನಾಗೇಶ್‌ ಎಸ್‌. ಡೋಂಗೆರೆ, ಟಿ.ಎಚ್‌. ರಾಮಾಂಜನೇಯ, ಕೆ. ಗೋಪಾಲಗೌಡ, ಮೋಹನ್‌ ಕುಮಾರ್‌, ಪರಮೇಶ್ವರಪ್ಪ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next