Advertisement
ನಗರದ ಡಿಸಿಸಿ ಬ್ಯಾಂಕ್‌ನಲ್ಲಿ ಮಂಗಳವಾರ ಆಯೋಜಿಸಿದ್ದ 64ನೇ ಅಖೀಲ ಭಾರತ ಸಹಕಾರ ಸಪ್ತಾಹದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸುವ ಅಗತ್ಯ ಇದೆ. ಸಹಕಾರ ಸಂಘಗಳನ್ನು ಎತ್ತರಕ್ಕೆ ಒಯ್ಯುವಲ್ಲಿ ಆಡಳಿತ ಮಂಡಳಿಗಳ ಪಾತ್ರ ಬಹುಮುಖ್ಯವಾಗಿದೆ ಎಂದರು.
Related Articles
Advertisement
ಸಹಕಾರ ಯೂನಿಯನ್ ಸಿಇಒ ಮಂಜುಳಾ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಭೀಮರಾವ್ ಪಾಟೀಲ, ನಿರ್ದೇಶಕರಾದ ಮಹ್ಮದ್ ಸಲಿಮೊದ್ದೀನ್, ವಿಜಯಕುಮಾರ ಪಾಟೀಲ ಗಾದಗಿ, ಸಂಗಮೇಶ ಪಾಟೀಲ, ಗಾಂಧಿಗಂಜ್ ಬ್ಯಾಂಕ್ ಅಧ್ಯಕ್ಷ ವಿಜಯಕುಮಾರ ಪಾಟೀಲ, ಹೊಸಪೇಟೆಯ ಇಫೂಕಮುಖ್ಯ ಪ್ರಾದೇಶಿಕ ವ್ಯವಸ್ಥಾಪಕ ಬಿ.ಜಿ. ಹಿರೇಮಠ, ಕಲ್ಲಪ್ಪ ಮಾಳಗೆ, ಬ್ಯಾಂಕ್‌ನ ಸಿಇಒ ಮಲ್ಲಿಕಾರ್ಜುನ ಮಹಾಜನ್, ಎಂಡಿ ಚಂದ್ರಶೇಖರ ಹತ್ತಿ, ಉಪ ಪ್ರಧಾನ ವ್ಯವಸ್ಥಾಪಕರಾದ ವಿಠuಲರೆಡ್ಡಿ ಯಡಮಲ್ಲೆ, ರಾಜಕುಮಾರ ಆಣದೂರೆ, ಪಂಡರಿರೆಡ್ಡಿ, ಅನಿಲ ಪಾಟೀಲ, ಸದಾಶಿವ ಪಾಟೀಲ ಮುಂತಾದವರು ಇದ್ದರು. ಬಸವರಾಜ ಕಲ್ಯಾಣ ನಿರೂಪಿಸಿದರು. ಚನ್ನಬಸಯ್ಯ ಸ್ವಾಮಿ ಸ್ವಾಗತಿಸಿದರು. ಸಪ್ತಾಹ ಅಂಗವಾಗಿ ನ.20ರ ವರೆಗೆ ವಿವಿಧ ಕಾರ್ಯಕ್ರಮ
ನಡೆಯಲಿವೆ ಮೊದಲು ಬ್ಯಾಂಕ್‌ನಿಂದ ರೂ. 8ರಿಂದ 9 ಕೋಟಿ ಸಾಲ ಕೊಡಲಾಗುತ್ತಿತ್ತು. ಇದೀಗ 1,938 ಕೋಟಿ ಸಾಲ ವಿತರಿಸಲಾಗಿದೆ. ಸಾಲ ನೀಡಿ ಜನರನ್ನು ಸಾಲಗಾರರನ್ನಾಗಿ ಮಾಡುವುದು ಬ್ಯಾಂಕ್ ಉದ್ದೇಶ ಅಲ್ಲ. ಸಕಾಲಕ್ಕೆ ನೆರವಾಗಿ ಅವರನ್ನು ಸಶಕ್ತಗೊಳಿಸುವುದೇ ಬ್ಯಾಂಕ್‌ನ ಧ್ಯೇಯವಾಗಿದೆ. ಹಿಂದೆ 75,000 ರೂ. ಬಂಡವಾಳ ಹೊಂದಿದ್ದ ಜಿಲ್ಲೆಯ ಸ್ವಸಹಾಯ ಗುಂಪುಗಳು ಈಗ ರೂ. 626 ಕೋಟಿ ಬಂಡವಾಳ ಹೊಂದಿವೆ. ರೂ. 107 ಕೋಟಿ ಠೇವಣಿ ಹೊಂದಿವೆ. ಇಂಥ ಕ್ರಾಂತಿ ದೇಶದ ಬೇರೆಲ್ಲೂ ಕಾಣಸಿಗದು. ಉಮಾಕಾಂತ ನಾಗಮಾರಪಳ್ಳಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ