Advertisement

ಪ್ರತಿ ಕುಟುಂಬಕ್ಕೂ ಸಹಕಾರ ಸಂಸ್ಥೆ ಸದಸ್ಯತ್ವ

03:18 PM Nov 16, 2019 | Suhan S |

ಕೋಲಾರ: ಬಡ್ಡಿರಹಿತ ಸುಲಭ ಕಂತುಗಳಲ್ಲಿ ಗೃಹೋಪಯೋಗಿ ಉಪಕರಣಗಳನ್ನು ಸಹಕಾರ ಸಂಘಗಳ ಮೂಲಕ ಒದಗಿಸಲು ಡಿಸಿಸಿ ಬ್ಯಾಂಕ್‌ ಮುಂದಾಗಿದ್ದು, ರೈತರು, ಮಹಿಳೆಯರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸಲಹೆ ನೀಡಿದರು.

Advertisement

ಜಿಲ್ಲಾ ಸಹಕಾರ ಒಕ್ಕೂಟದಿಂದ ನಗರದಲ್ಲಿ ಆಯೋಜಿಸಿದ್ದ 66ನೇ ಅಖೀಲ ಭಾರತ ಸಹಕಾರ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್‌ ವ್ಯಾಪ್ತಿಯಲ್ಲಿ ಬರುವ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಎಲ್ಲಾ ಸಹಕಾರ ಸಂಘಗಳ ಮೂಲಕ ಪ್ರತಿಷ್ಠಿತ ಕಂಪನಿಗಳ ಗೃಹೋಪಯೋಗಿ ಉಪಕರಣಗಳನ್ನು ಬಡ್ಡಿರಹಿತ ಸುಲಭ ಕಂತುಗಳಲ್ಲಿ ಒದಗಿಸಲು ಕ್ರಮ ಕೈಗೊಳ್ಳಲಾಗಿದ್ದು, ಈಗಾಗಲೇ ಅಣ್ಣಿಹಳ್ಳಿ ಸೊಸೈಟಿಯಿಂದ ಈ ಕಾರ್ಯ ಆರಂಭವಾಗಿದೆ ಎಂದು ತಿಳಿಸಿದರು.

ಪ್ರತಿಕುಟುಂಬಕ್ಕೂ ಸಹಕಾರಿ ಸದಸ್ವತ್ವ: ಗೃಹೋಪಯೋಗಿ ಉಪಕರಣಗಳನ್ನು ಬಡ್ಡಿರಹಿತ ಕಂತುಗಳಲ್ಲಿ ಪಡೆದುಕೊಳ್ಳಲು ಸಹಕಾರಿ ಸಂಘದ ಸದಸ್ಯತ್ವ ಪಡೆದಿರಬೇಕು ಎಂಬ ನಿಯಮ ಮಾಡುವುದರಿಂದ ಇಡೀ ಜಿಲ್ಲೆಯಲ್ಲಿ ಸದಸ್ಯತ್ವ ಹೆಚ್ಚಿಸಲು ಸಹಕಾರಿಯೂ ಆಗಲಿದೆ ಎಂದು ವಿವರಿಸಿದರು.

ರೈತ, ಮಹಿಳೆಯರ ಸಬಲೀಕರಣ ಸಾಧ್ಯ: ರಾಜ್ಯ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್‌ ನಿರ್ದೇಶಕ ಯಲವಾರ ಸೊಣ್ಣೇಗೌಡ ರೈತರು, ಮಹಿಳೆಯರ ಸಬಲೀಕರಣ ಸಹಕಾರಿ ಸಂಸ್ಥೆಗಳಿಂದ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ವಲಸೆ ಹೋಗುತ್ತಿಲ್ಲ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಎಂ.ವೆಂಕಟಸ್ವಾಮಿ, ಜಿಲ್ಲೆಯಲ್ಲಿ ಹೈನೋದ್ಯಮದಿಂದಲೇ ರೈತರ ಆತ್ಮಹತ್ಯೆಗಳು ನಡೆಯುತ್ತಿಲ್ಲ, ನಮ್ಮ ಜಿಲ್ಲೆಯ ರೈತರು ವಲಸೆ ಹೋಗುತ್ತಿಲ್ಲ ಎಂದರು. ಸಹಕಾರ ಸಂಘಗಳ ಲೆಕ್ಕಪರಿಶೋಧ ಕರಾದ ಜಿ.ಬಿ.ಶಾಂತಕುಮಾರಿ, ಸಹಕಾರ ರಂಗದ ಅಭಿವೃದ್ಧಿಗೆ ಸಂಘಗಳ ಲೆಕ್ಕಪರಿಶೋಧನೆ ಅತಿ ಮುಖ್ಯ, ಪಾರದರ್ಶಕತೆ ಹಾಗೂ ಆರ್ಥಿಕ ತಪ್ಪುಗಳು ನಡೆಯುವುದನ್ನು ತಡೆಯಲು ಲೆಕ್ಕಪರಿಶೋಧನೆ ಕಡ್ಡಾಯ ಎಂದು ತಿಳಿಸಿದರು.

Advertisement

ಕಾರ್ಯಕ್ರಮಕ್ಕೂ ಮುನ್ನಾ ಸಹಕಾರ ಒಕ್ಕೂಟ ಮತ್ತು ಡಿಸಿಸಿ ಬ್ಯಾಂಕ್‌ ಕಚೇರಿ ಆವರಣದಲ್ಲಿ ಸಹಕಾರಿ ಧ್ವಜಾರೋಹಣ ನೆರವೇರಿಸಲಾಯಿತು. ಯೂನಿಯನ್‌ ಮುಖ್ಯ ಕಾರ್ಯ ನಿರ್ವಹಣಾಕಾರಿ ಭಾರತಿ ಕಾರ್ಯಕ್ರಮ ನಿರೂಪಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾಸರಬರಾಜು, ಮಾರಾಟ ಸಹಕಾರ ಸಂಘದ ಅಧ್ಯಕ್ಷೆ ಶಾಂತಮ್ಮ, ಸಹಕಾರಿ ಯೂನಿಯನ್‌ ಅಧ್ಯಕ್ಷ ಎಂ.ಕೃಷ್ಣೇಗೌಡ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಕೆ.ವಿ.ದಯಾನಂದ್‌, ಎಂ.ಎಲ್‌.ಅನಿಲ್‌ಕುಮಾರ್‌, ಯೂನಿಯನ್‌ ನಿರ್ದೇಶಕರಾದ ಉಗಿಣಿ ಆರ್‌ .ನಾರಾಯಣಗೌಡ, ಪಿಎನ್‌.ಕೃಷ್ಣಾರೆಡ್ಡಿ, ಕೆ.ಎಂ. ವೆಂಕಟೇಶಪ್ಪ, ಉರಗಿಲಿ ರುದ್ರಸ್ವಾಮಿ, ಎ.ಸಿ.ಭಾಸ್ಕರ್‌,ಅರಹಳ್ಳಿ ಅಶ್ವತ್ಥನಾರಾಯಣ, ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರ ಸಂಘದ ಅಧ್ಯಕ್ಷ ವಿ.ಎಂ. ವೆಂಕಟೇಶ್‌, ಯೂನಿಯನ್‌ ಸಿಬ್ಬಂದಿ ರವಿ, ಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next