Advertisement
ದ.ಕ. ಜನತೆ ಬಹುತೇಕ ಕೃಷಿ ಅವಲಂಬಿತರು. ಅದರಲ್ಲೂ ಅಡಿಕೆ ಕೃಷಿಯೇ ಪ್ರಧಾನ. ಸ್ವಾವಲಂಬನೆಯ ಅನಿವಾರ್ಯತೆಯಲ್ಲಿ ಅಡಿಕೆ ಒಂದು ಕಾಲದಲ್ಲಿ ಒಳ್ಳೆಯ ಬೆಳೆಯೇನೋ ಹೌದು. ಈಗಿನ ಸದ್ಯದ ಪರಿಸ್ಥಿತಿಯಲ್ಲಿ ಯಾಕಪ್ಪ ಕೃಷಿ ಬೇಕು ಅಂತ ಅನಿಸದಿರದು. ಇದಕ್ಕೆ ಕಾರಣ ಅಡಿಕೆಗೆ ತಗಲುವ ರೋಗ, ಧಾರಣೆ, ಕಾರ್ಮಿಕರ ಕೊರತೆ ಜತೆ ಮುಖ್ಯವಾಗಿ ಯಾಂತ್ರಿಕವಾಗುತ್ತಿರುವ ಬದುಕು. ಕೃಷಿಯಿಂದ ಸ್ವೂದ್ಯೋಗದಿಂದ ವಿಮುಖರಾಗುತ್ತಿದ್ದಾರೆ ಜಿಲ್ಲೆಯ ಜನತೆ.
ಗ್ರಾಮೀಣ ಭಾಗದಲ್ಲಿ ನುರಿತ ಕಾರ್ಮಿಕರ ತಯಾರಿ ಮಾಡುವುದು, ಸ್ವೂದ್ಯೋಗಕ್ಕೆ ಅವಕಾಶ ನೀಡುವುದು, ಹೊಸ ಯಂತ್ರಗಳ ಪರಿಚಯ ಮತ್ತು ಬಳಸುವ ವಿಧಾನ, ಇವೆಲ್ಲವನ್ನು ನೀಡುವುದು ತರಬೇತಿಯ ಉದ್ದೇಶ. ಇದರ ಬೆನ್ನಲ್ಲೆ ಸಹಕಾರಿ ಸಂಘಗಳ ಮೂಲಕ ಜಿಲ್ಲೆಯಲ್ಲಿ ಇಂತಹ ಶಿಬಿರಗಳು ಇನ್ನಷ್ಟು ನಡೆಯವ ಯೋಚನೆಗೆ ಮೂಲ ಆರಂಭಗೊಂಡಿದೆ. ಅಡಿಕೆ ಕೃಷಿಯಲ್ಲಿ ಅಡಿಕೆ ಮರ ಏರುವುದು. ಔಷಧಿ ಸಿಂಪಡಣೆ. ಇದು ಒಂದು ಸಾಹಸದ ಕೆಲಸ. ಇದಕ್ಕೆ ಬೇಕಾಗಿರುವುದು ಕೌಶಲ. ಇಂತಹ ಕೌಶಲವನ್ನು ಯುವಜನತೆ ಸಹಿತ ಅಡಕೆ ಬೆಳೆಗಾರರಲ್ಲಿ ತುಂಬುವ ಮೂಲಕ ಸ್ವೂದ್ಯೋಗ, ಕೃಷಿ ರಕ್ಷಣೆಗೆ ಒತ್ತು ನೀಡುವುದು ಸಹಕಾರಿ ಸಂಘಗಳ ಬಯಕೆ. ದಿಟ್ಟ ಹೆಜ್ಜೆಯಾಗಿದೆ
ಯುವ ಪೀಳಿಗೆಯಲ್ಲಿ ಕೃಷಿ ಕುರಿತು ಅರಿವು ಮೂಡಿಸುವ, ಕೃಷಿ ಪದ್ಧತಿ ಉಳಿಸಿ ಬೆಳೆಸುವ ಜತೆಗೆ ಆಧುನಿಕ ಯಂತ್ರಗಳ ಬಳಕೆ ಕುರಿತು ತರಬೇತಿ, ಕೃಷಿ ಚಟುವಟಿಕೆ ಸಾಹಸ ವೃತ್ತಿಗಳಲ್ಲಿ ತೆಗೆದುಕೊಳ್ಳಬೇಕಾದ ಎಚ್ಚರ. ರಕ್ಷಣೆ ಹಾಗೂ ಕೃಷಿಕನ ಬದುಕಿಗೆ, ಕುಟುಂಬಕ್ಕೆ ಭದ್ರತೆ ಒದಗಿಸುವ ಮೂಲಕ ಅಡಿಕೆ ಕೃಷಿಕನ ತೋಟಕ್ಕೆ ಸಹಕಾರಿ ಸಂಘ ಗಳು ಹೆಜ್ಜೆ ಇಡುತ್ತಿರುವುದು ನಿಜಕ್ಕೂ ಕೃಷಿ ಕ್ಷೇತ್ರದಲ್ಲಿ ಒಂದು ದಿಟ್ಟ ಹೆಜ್ಜೆಯೇ ಆಗಿದೆ.
Related Articles
ಪಂಜ ಪ್ರಾ.ಕೃ.ಪ.ಸ. ಸಂಘ, ಗುತ್ತಿಗಾರು ಮತ್ತು ಕಡಬ ಪ್ರಾ. ಸಹಕಾರ ಸಂಘಗಳ ಆಶ್ರಯದಲ್ಲಿ ಜೇಸಿಐ ಪಂಜ ಪಂಚಶ್ರೀ ಮತ್ತು ಲಯನ್ಸ್ ಪಂಜ ಸಹಕಾರದಿಂದ ನಡೆದ ಅಡಿಕೆ ಕೌಶಲ ಸ್ವೂದ್ಯೋಗ ತರಬೇತಿ ಶಿಬಿರ ಕೃಷಿ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿತು. ಅಡಿಕೆಗೆ ಭವಿಷ್ಯವನ್ನು ಸಹಕಾರಿ ಸಂಘಗಳೇ ರೂಪಿಸುತ್ತಿವೆ ಎನ್ನುವ ಮುನ್ಸೂಚನೆಯನ್ನು ದೊರಕಿಸಿಕೊಟ್ಟಿತು.
Advertisement
ಕೌಶಲ ಪಡೆಭವಿಷ್ಯದ ಆತಂಕದ ದಿನಗಳ ಮುನ್ಸೂಚನೆ ಅರಿತ ಕೆಲ ಸಹಕಾರಿ ಸಂಸ್ಥೆಗಳು ಅಡಿಕೆ ಬೆಳೆಗಾರರ ಹಿತ ಕಾಪಾಡಲು ಮುಂದಾಗಿವೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಕ್ಯಾಂಪ್ಕೋ ನೇತೃತ್ವದಲ್ಲಿ ವಿಟ್ಲ ಸಿಪಿಸಿಆರ್‌ಐ ವಠಾರದಲ್ಲಿ ಅಡಿಕೆ ಮರ ಏರುವ ತರಬೇತಿ ಶಿಬಿರ ನಡೆದಿತ್ತು. 53 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಅಡಿಕೆ ಕೌಶಲ ಪಡೆ ರಚನೆಯಾಗಿತ್ತು. ಬಳಿಕ ಪೆರ್ಲದಲ್ಲಿ ಅಡಿಕೆ ಮರ ಏರುವ ತರಬೇತಿ ಶಿಬಿರ ಸಹಕಾರಿ ಸಂಘದ ಮೂಲಕ ನಡೆದಿತ್ತು. ಇದೀಗ ಪ್ರೇರಣೆ ಪಡೆದ ಅದೇ ಹುಮ್ಮಸ್ಸಿನಲ್ಲಿ ಮತ್ತೂಂದು ಶಿಬಿರ ಪಂಜದಲ್ಲಿ ಮೇ 5ರಿಂದ 10ರ ತನಕ ನಡೆಯಿತು. ನಲವತ್ತಕ್ಕೂ ಅಧಿಕ ಮಂದಿ ಶಿಬಿರಾರ್ಥಿಗಳಾಗಿ ಪಾಲ್ಗೊಂಡಿದ್ದರು. ಕೃಷಿ ಬೆಳೆಸಲು ಸಾಧ್ಯವಿದೆ
ಕೃಷಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಕಾರಿ ಕ್ಷೇತ್ರದಿಂದಲೂ ಸಾಧ್ಯವಿದೆ. ಈಗ ಅಡಿಕೆ ಮರ ಏರುವ ಕಾರ್ಮಿಕರ ಕೊರತೆ ನೀಗಿಸಲು ಸ್ವೂದ್ಯೋಗ ಮೂಲಕವೂ ಕೃಷಿ ಬೆಳೆಸಲು ಸಾಧ್ಯವಿದೆ.
-ಚಂದ್ರಶೇಖರ ಶಾಸ್ತ್ರಿ ಅಧ್ಯಕ್ಷರು, ಪಂಜ.ಪ್ರಾ.ಕೃ.ಪ.ಸ. ಸಂಘ ಕೌಶಲ ತರಬೇತಿ ಹೊಂದಬೇಕಿದೆ
ಕೃಷಿ ಕ್ಷೇತ್ರಕ್ಕೆ ಸಹಕಾರಿ ಸಂಘಗಳ ಕೊಡುಗೆ ಅಧಿಕವಿದೆ. ಆಧುನಿಕ ಕೃಷಿ ಯಂತ್ರಗಳು ಅಡಿಕೆ ಕೃಷಿಕನ ಬಾಗಿಲು ತಟ್ಟಿವೆ. ಪರಿಣಾಮ ಇನ್ನು ಮುಂದೆ ಕೃಷಿ ಉಳಿಯಬೇಕಾದರೆ ಯಂತ್ರದ ಬಳಕೆ ಅನಿವಾರ್ಯ. ಇಷ್ಟಿದ್ದರೆ ಸಾಲದು ಇವುಗಳ ಬಳಕೆಗೆ ಕೌಶಲ ಅತ್ಯಗತ್ಯ. ಇದಕ್ಕೆ ಬೇಕಾಗಿರುವುದು ಕೇವಲ ತರಬೇತಿಯಲ್ಲ ಕೌಶಲಯುತ ತರಬೇತಿ ಹೊಂದಬೇಕಿದೆ.
– ಜಾಕೆ ಮಾಧವ ಗೌಡ , ಸಹಕಾರಿ ಧುರೀಣ ಬಾಲಕೃಷ್ಣ ಭೀಮಗುಳಿ