Advertisement

ನಗರ ಭಾಗದ ಸಹಕಾರ ಬ್ಯಾಂಕ್‌ಗಳಲ್ಲಿ 1,000 ವಂಚನೆ ಪ್ರಕರಣ!

09:59 AM Jan 29, 2020 | Hari Prasad |

ಹೊಸದಿಲ್ಲಿ: ನಗರ ಭಾಗದ ಸಹಕಾರ ಬ್ಯಾಂಕ್‌ಗಳಲ್ಲಿ ಕಳೆದ ಐದು ವಿತ್ತೀಯ ವರ್ಷಗಳಲ್ಲಿ ಸುಮಾರು 1,000 ವಂಚನೆ ಪ್ರಕರಣಗಳು ನಡೆದಿವೆ. 221 ಕೋಟಿ ರೂ. ವಂಚನೆಯಾ ಗಿದೆ ಎಂದು ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ (ಆರ್‌ಬಿಐ) ಮಾಹಿತಿ ನೀಡಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾಗಿದ್ದ ಅರ್ಜಿಯೊಂದಕ್ಕೆ ಆರ್‌ಬಿಐ ಮೇಲಿ ನಂತೆ ಉತ್ತರಿಸಿದೆ.

Advertisement

2018-19ರಲ್ಲಿ 181 ಪ್ರಕರಣಗಳು ನಡೆದಿದ್ದು, ಗರಿಷ್ಠ 127.7 ಕೋಟಿ ರೂ. ವಂಚನೆ ನಡೆದಿದೆ. 2015-16ರಲ್ಲಿ 187 ಪ್ರಕರಣ(17.3 ಕೋಟಿ), 2014ರಲ್ಲಿ ಗರಿಷ್ಠ ಅಂದರೆ 478 ಪ್ರಕರಣಗಳು ನಡೆದಿದ್ದು, 19.8 ಕೋಟಿ ರೂ. ದೋಖಾ ಆಗಿದೆ ಎಂದು ಆರ್‌ಬಿಐ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next