Advertisement

ಬ್ಯಾಂಕ್‌ ಮ್ಯಾನೇಜರ್‌ಗೆ ವಿಷ ಹಾಕಿ ಕೊಂದಿದ್ದ  ಸಾಲಗಾರರ  ಸೆರೆ

06:15 PM Aug 31, 2017 | Sharanya Alva |

ಬೆಂಗಳೂರು: ಕೆಲ ದಿನಗಳ ಹಿಂದೆ ನಿಗೂಢವಾಗಿ ಕೊಲೆಯಾಗಿದ್ದ ಸುಧಾ ಕೋ-ಆಪರೇಟಿವ್‌ ಸೊಸೈಟಿ ಮ್ಯಾನೇಜರ್‌ ಮುನಿಯಪ್ಪ ಕೊಲೆ ಪ್ರಕರಣವನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬೇಧಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ನಡೆದ ತನಿಖೆಯಲ್ಲಿ ಆರೋಪಿಗಳು ಪತ್ತೆಯಾಗಿದ್ದಾರೆ.

Advertisement

ಮುನಿಯಪ್ಪ ಅವರಿಂದ 1.05 ಕೋಟಿ ರೂ. ಸಾಲ ಪಡೆದಿದ್ದ ತಿಲಕ್‌ (34) ಆತನ ಸಹಚರ  ರಾದ ಪ್ರದೀಪ್‌ ಅಲಿಯಾಸ್‌ ಬರ್ಲಿ(25), ಮಹೇಶ್‌ ಅಲಿಯಾಸ್‌ ವಂಡ್ರೆ (24), ಅಭಿಲಾಷ್‌  ಗೌಡ ಅಲಿಯಾಸ್‌ ಆದಿ (21) ಬಂಧಿತರು.

ಅಮೃತಹಳ್ಳಿಯಲ್ಲಿರುವ ಸುಧಾ ಕೋ-  ಆಪರೇ ಟಿವ್‌ ಬ್ಯಾಂಕ್‌ ಶಾಖೆಯ ವ್ಯವಸ್ಥಾಪಕ  ರಾಗಿದ್ದ ಮುನಿಯಪ್ಪ ಬಡ್ಡಿ ವ್ಯವಹಾರವನ್ನೂ ನಡೆಸುತ್ತಿದ್ದರು. ಕಡಿಮೆ ಬಡ್ಡಿಗೆ ವ್ಯಾಪಾರಸ್ಥರಿಂದ ಹಣ ಪಡೆದು ಅದನ್ನು ಅಧಿಕ ಬಡ್ಡಿಗೆ ಸಾಲ ಕೊಡುತ್ತಿದ್ದರು. 2016ರ ನವೆಂಬರ್‌ನಲ್ಲಿ ಮುನಿಯಪ್ಪ ಅವರು ಪ್ರಮುಖ ಆರೋಪಿ ತಿಲಕ್‌ಗೆ 1.05 ಕೋಟಿ ರೂ. ಸಾಲ ನೀಡಿ ದ್ದರು. ಆದರೆ, ಅಸಲು ಹಣ ಹಾಗೂ ಬಡ್ಡಿ ನೀಡಿರಲಿಲ್ಲ. ಇದೇ ವಿಚಾರವಾಗಿ 15 ದಿನಗಳ ಹಿಂದೆ ಇಬ್ಬರ ನಡುವೆ ಗಲಾಟೆಯಾಗಿತ್ತು.

ಗಲಾಟೆ ವೇಳೆ ಸ್ವಲ್ಪ ಜೋರಾಗಿಯೇ ಮಾತನಾಡಿದ ಮುನಿಯಪ್ಪ, “ನಿನಗೆ ಕೊಟ್ಟಿರುವ ಸಾಲದ ಬಡ್ಡಿ ಬಾಬ್ತು ಸೇರಿ ಒಟ್ಟು 22 ಲಕ್ಷ ರೂ.ಗಳನ್ನು ಪ್ರತಿ ತಿಂಗಳು ನಾನು ಪಾವತಿಸಬೇಕಿದೆ. ನೀನು ಹಣ ಕೊಡದಿದ್ದರೆ ನಾನು ವಿಷ ಕುಡಿಯಬೇಕಿದೆ,’ ಎಂದು ಎಚ್ಚರಿಕೆ ನೀಡಿದ್ದರು. ಮುನಿಯಪ್ಪ ಅವರು ವಿಷ ಕುಡಿಯುವುದಾಗಿ ಹೇಳಿದ್ದ ಮಾತನ್ನೇ ನೆನಪಿನಲ್ಲಿಟ್ಟುಕೊಂಡಿದ್ದ ತಿಲಕ್‌, ವಿಷ ಹಾಕಿಯೇ ಕೊಲ್ಲುವ ಯೋಜನೆ ರೂಪಿಸಿದ್ದ. ಅದರಂತೆ ತಿಲಕ್‌ ತನ್ನ ಫಾರಂ ಹೌಸ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಪ್ರದೀಪ್‌ಗೆ ಹೇಳಿ
ರಸಗೊಬ್ಬರ ಅಂಗಡಿಯೊಂದರಲ್ಲಿ ವಿಷದ ಬಾಟಲಿ ಖರೀದಿಸಿಟ್ಟುಕೊಂಡಿದ್ದ.

ಆ.14ರಂದು ಬೆಳಗ್ಗೆ ತಿಲಕ್‌ ತನ್ನ ಕೋಳಿ  ಫಾರಂನಲ್ಲಿ ಕೆಲಸ ಮಾಡುತ್ತಿದ್ದ ಮಹೇಶ್‌ ಮತ್ತು ಆಟೋ ಚಾಲಕ, ಸ್ಥಳೀಯ ನಿವಾಸಿ ಅಭಿಲಾಷ್‌ ಗೆ ಕರೆ ಮಾಡಿ, ಆ.15ರಂದು ಪ್ರದೀಪ್‌ ಜತೆ ಮನಿಯಪ್ಪನನ್ನು ಬ್ಯಾಟರಾಯನ ದೊಡ್ಡಿಯಲ್ಲಿರುವ ಗೆಸ್ಟ್‌ಹೌಸ್‌ಗೆ ಕಳುಹಿಸುತ್ತೇನೆ. ಅಲ್ಲಿ ಮುನಿಯಪ್ಪನಿಗೆ ವಿಷ ಹಾಕಿ ಕೊಂದು, ಬಳಿಕ ಆತ್ಮಹತ್ಯೆ ಎಂದು ಬಿಂಬಿಸಬೇಕು ಎಂದು ಸೂಚಿಸಿದ್ದ.

Advertisement

ಆ.15ರಂದು ಮುನಿಯಪ್ಪ ಅವರಿಗೆ ಕರೆ ಮಾಡಿದ್ದ ತಿಲಕ್‌, ಹಣ ಕೊಡುವುದಾಗಿ ಹೇಳಿ ಮರಿಯಪ್ಪನಪಾಳ್ಯಕ್ಕೆ ಕರೆಸಿಕೊಂಡಿದ್ದ. ಬಳಿಕ ಪ್ರದೀಪ್‌ ಜತೆ ಬ್ಯಾಟರಾಯನದೊಡ್ಡಿಯಲ್ಲಿರುವ ಗೆಸ್ಟ್‌ಹೌಸ್‌ಗೆ ಕಳುಹಿಸಿದ್ದಾನೆ. ಅಲ್ಲಿ ಆರೋಪಿ  ಗಳೆಲ್ಲರೂ ಬಲವಂತವಾಗಿ ವಿಷಪ್ರಾಶನ ಮಾಡಿಸಿದ್ದಾರೆ. ಆದರೆ, ವಿಷ ಕುಡಿದರೂ ಮುನಿಯಪ್ಪ ಸತ್ತಿರಲಿಲ್ಲ. ಕೊನೆಗೆ ಕುತ್ತಿಗೆಗೆ ಹಗ್ಗ
ಬಿಗಿದು ಕೊಲೆಗೈದಿದ್ದಾರೆ. ನಂತರ ಮೃತ ದೇಹವನ್ನು ವಿಷದ ಬಾಟಲಿಯೊಂದಿಗೆ ಮಾಳಗಾಳದ ಕೆಳಸೇತುವೆ ಬಳಿ ಆಲ್ಟೋ ಕಾರು ಬಿಟ್ಟು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದರು.

ಸಿಸಿಟಿವಿ ದೃಶ್ಯಾವಳಿ ನೀಡಿತು ಸುಳಿವು:
ಮುನಿಯಪ್ಪ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಕೊಲೆ ಕೇಸು ದಾಖಲಿಸಿದ್ದರು. ತನಿಖೆ ಆರಂಭಿಸಿದ ಇನ್‌ಸ್ಪೆಕ್ಟರ್‌ ಹರೀಶ್‌, ಮೊಬೈಲ್‌ ಕರೆಗಳ ಆಧಾರದಲ್ಲಿ ಅಂದು ಮುನಿಯಪ್ಪ ಅವರು
ಸುತ್ತಾಡಿದ ಎಲ್ಲ ಜಾಗಗಳ ಹಲವು ಪ್ರದೇಶಗಳ ಸುಮಾರು 100 ಸಿಸಿಟಿವಿಗಳ 600 ಜಿಬಿಯಷ್ಟು ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು. ಆಗ, ಆಗ ಮುನಿಯಪ್ಪ ಅವರು ಜಿಗಣಿಗೆ ಹೋಗಿರುವುದು ಗೊತ್ತಾಗಿದೆ. ಇಲ್ಲಿ ಸಿಕ್ಕ ಸೂಕ್ಷ್ಮ ಸುಳಿವನ್ನು
ಆಧರಿಸಿ ತನಿಖೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. 

ಪ್ರವಾಸ ಹೋಗಿದ್ದ
ಪ್ರಕರಣದಲ್ಲಿ ತಿಲಕ್‌ ಕೈವಾಡ ಖಚಿತವಾ ಗುತ್ತಿದ್ದಂತೆ ಈತನ ಚಲನವಲನಗಳ ಬಗ್ಗೆ ಪೊಲೀಸರು ನಿಗಾವಹಿಸಿದ್ದರು. ಇದನ್ನರಿತ ತಿಲಕ್‌ ಮಡಿಕೇರಿ, ಮಂಗಳೂರು, ಗೋವಾ ಮತ್ತು ತಮಿಳುನಾಡಿನಲ್ಲಿ ಸುತ್ತಾಡಿದ್ದಾನೆ. ಬಳಿಕ ಪೊಲೀಸರು ತನ್ನ ಹಿಂದೆ ಬಿದಿದ್ದನ್ನು ಗಮನಿಸಿ ಏಕಾಏಕಿ ಕೋರ್ಟ್‌ಗೆ ಹಾಜರಾ  ಗಿದ್ದ. ಬಳಿಕ ನ್ಯಾಯಾಲಯಕ್ಕೆ ಮನವಿ ಮಾಡಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇತರೆ ಆರೋಪಿಗಳ ಬಗ್ಗೆ ಬಾಯಿ  ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಮಾಡಿ ದೇವರ ಮೊರೆ ಹೋಗಿದ್ದರು
ಮತ್ತೂಂದೆಡೆ ಪ್ರದೀಪ್‌, ಮಹೇಶ್‌, ಅಭಿಲಾಷ್‌ ಕೃತ್ಯವೆಸಗಿದ ಬಳಿಕ ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ  ದಲ್ಲಿ ದೇವರ ದರ್ಶನಕ್ಕೆ ತೆರಳಿದ್ದರು. ಅಂತಿಮವಾಗಿ ಚಾಮರಾಜನಗರದ ಮಲೇಮಹದೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಾಪಸ್‌ ಬರುತ್ತಿದ್ದರು. ಈ ಮಾಹಿತಿ ಸಂಗ್ರಹಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮೂವರ ಪೈಕಿ ಪ್ರದೀಪ್‌ ಮತ್ತು ಮಹೇಶ್‌ 2012ರಲ್ಲಿ ವೈಯಕ್ತಿಕ ದ್ವೇಷಕ್ಕೆ ತಮ್ಮ ಸ್ನೇಹಿತ ರಾಕೇಶ್‌ ಎಂಬಾತನನ್ನು ಕೊಲೆಗೈದಿದ್ದರು. ವಿಶೇಷವೆಂದರೆ ಈ ಪ್ರಕರಣದಲ್ಲಿ ಆರೋಪಿ ತಿಲಕ್‌ ಈ ಇಬ್ಬರ ವಿರುದ್ಧ ದೂರು ನೀಡಿದ್ದ. ಇವರು ಜೈಲಿನಿಂದ ಬಿಡುಗಡೆಯಾಗಿ ಬರುತ್ತಿದ್ದಂತೆ ಆನೇಕಲ್‌ನ ಬಗನದೊಡ್ಡಿಯಲ್ಲಿದ್ದ ತನ್ನ ಕೋಳಿಫಾರಂ ಮತ್ತು ಫಾರಂಹೌಸ್‌ನಲ್ಲಿ ಇಬ್ಬರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next