Advertisement
ಜಿಲ್ಲಾ ಸ್ವಚ್ಛತಾ ರಾಯಭಾರಿ ಎನ್. ಶೀನ ಶೆಟ್ಟಿ ಸ್ವಚ್ಛತಾ ಶ್ರಮದಾನಕ್ಕೆ ಚಾಲನೆ ನೀಡಿ ಜೂ. 5ರಂದು ನಡೆಯುವ ವಿಶ್ವ ಪರಿಸರ ದಿನಾಚರಣೆಗೆ ಬಾಳೆಪುಣಿ ಗ್ರಾಮ ಪಂಚಾಯತ್ ಕಚೇರಿ ವಠಾರ ಮತ್ತು ಪಂಚಾಯತ್‌ಗೆ ಸೇರಿದ 10 ಎಕ್ರೆ ಪ್ರದೇಶವನ್ನು ಬಯಲು ಕಸ ಮುಕ್ತ ಪ್ರದೇಶವನ್ನಾಗಿಸಿ ಆ ಮೂಲಕ ಗ್ರಾಮದ ಎಲ್ಲ ಮನೆ, ಶಾಲೆ, ಅಂಗನ ವಾಡಿ ಮತ್ತಿತರ ಸಾರ್ವಜನಿಕ ಪ್ರದೇಶ ವನ್ನು ತ್ಯಾಜ್ಯ ಮುಕ್ತಗೊಳಿಸಲು ಪಂಚಾ ಯತ್‌ನೊಂದಿಗೆ ನಾಗರೀಕರು ಕೈ ಜೋಡಿ ಸಬೇಕು ಎಂದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುನಿಲ್ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣಾ ಕೇಂದ್ರಕ್ಕೆ ಗ್ರಾಮಸ್ಥರು ಸ್ವತ್ಛ ಶುದ್ಧ ಪ್ಲಾಸ್ಟಿಕ್‌ನ್ನು ನೀಡಿ ಸಮರ್ಪಕ ನಿರ್ವಹಣೆಗೆ ಸಹಕರಿಸಬೇಕು ಎಂದರು. ಕಾರ್ಯದರ್ಶಿ ರುಕ್ಮಯದಾಸ್, ಜನ ಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಕೃಷ್ಣಮೂಲ್ಯ, ಸಿಬಂದಿ ಸದಾನಂದ, ಪ್ರೇರಕಿ ಜಯಾ, ಬೆಳ್ಳಾರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿದ್ಯಾರ್ಥಿಗಳಾದ ಅಶ್ವಿನಿ, ಅಂಜಲಿ, ಘನ ತ್ಯಾಜ್ಯ ವ್ಯಾಪಾರಿ ಇಸ್ಮಾಯಿಲ್ ಮೊದಲಾದವರು ಶ್ರಮದಾನದಲ್ಲಿ ಭಾಗವಹಿಸಿದ್ದರು.