Advertisement
ಪಟ್ಟಣದ ಈಶ್ವರ ದೇವಸ್ಥಾನ ಸಮಿತಿ ವತಿಯಿಂದ ರವಿವಾರ ಈಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. 1994ರ ಚುನಾವಣೆಗೂ 2018ರ ಚುನಾವಣೆಗೂ ಅಜಗಜಾಂತರ ವ್ಯತ್ಯಾಸವಾಗಿದೆ. ಜನರ ಭಾವನೆ ಬದಲಾವಣೆಯಾಗಿದೆ. ಚುನಾವಣೆ ಪೂರ್ವ ಪಕ್ಷ, ಚುನಾವಣೆಯಲ್ಲಿ ಗೆದ್ದ ನಂತರ ಅಭ್ಯರ್ಥಿ ಇಡೀ ಕ್ಷೇತ್ರದ ಶಾಸಕರಾಗುತ್ತಾರೆ. ಯಾರೊಂದಿಗೆ ಹಗೆತನ ಸಾಧಿಸಬಾರದು ಎಂದರು.
ಪಟ್ಟಣಕ್ಕೆ ಒಳಚರಂಡಿ ಯೋಜನೆಗೆ 85 ಕೋಟಿ ರೂ.ವೆಚ್ಚಕ್ಕೆ ಅಂದಾಜು ವೆಚ್ಚ ಸಿದ್ಧಪಡಿಸಲಾಗಿದೆ. ಆದರೆ ಮಂಜೂರಾತಿ ದೊರೆಯಲಿಲ್ಲ. ಮಂಜೂರಾತಿಗೆ ಮತ್ತೂಮ್ಮೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
Related Articles
Advertisement
ದಿನದ 24 ಗಂಟೆಯೂ ನಿರಂತರ ಜನ ಸೇವೆಯೇ ಅವರ ಮೂಲ ಉದ್ದೇಶವಾಗಿದೆ. ಪಟ್ಟಣದ ಕರಡಕಲ್ ಕೆರೆಗೆ ಬಿಲ್ಲಮರಾಯನ ಕೆರೆ ಎಂದು ನಾಮಕರಣ ಮಾಡಿ ಅದನ್ನು ಅಭಿವೃದ್ಧಿಗೊಳಿಸಬೇಕು ಹಾಗೂ ಒಳಚರಂಡಿ ಯೋಜನೆ ಜಾರಿಗೆ ಲಿಂಗಸುಗೂರು ಶಾಸಕರಿಗೆ ಸಹಕಾರ ನೀಡಬೇಕು ಎಂದು ಕೋರಿದರು.
ಸಂತೆಕೆಲ್ಲೂರು ಶ್ರೀ ಗುರುಬಸವ ಸ್ವಾಮೀಜಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಪ್ಪ ಮೇಟಿ, ಅಮರಗುಂಡಪ್ಪ ಮೇಟಿ, ಭೂಪನಗೌಡ ಕರಡಕಲ್, ಪುರಸಭೆ ಅಧ್ಯಕ್ಷ ಖಾದರ ಪಾಷಾ, ದೇವಸ್ಥಾನ ಸಮಿತಿ ಪದಾಧಿಕಾರಿಗಳಾದ ಡಾ| ಶರಣಗೌಡ, ಮಲ್ಲಿಕಾರ್ಜುನ ವಾರದ, ವೀರೇಶ ಐದನಾಳ, ಮಳೆಪ್ಪ ಉಮ್ಮಗೋಳ ಇತರರು ಇದ್ದರು.