Advertisement
ಜಯಪುರ ಹೋಬಳಿಯ ಕೆಲ್ಲಹಳ್ಳಿಯಿಂದ ಮತಬೇಟೆ ಆರಂಭಿಸಿದ ಅವರು, ದಾರಿಪುರ, ಬರಡನಪುರ, ಮಾವಿನಹಳ್ಳಿ, ಜಯಪುರ, ಹಾರೋಹಳ್ಳಿ (ಜಯಪುರ), ಸೋಲಿಗರ ಕಾಲೋನಿ, ಗುಮಚನಹಳ್ಳಿ, ಎಸ್.ಕಲ್ಲಹಳ್ಳಿ, ಚುಂಚರಾಯನ ಹುಂಡಿ, ಮದ್ದೂರು, ಮದ್ದೂರು ಹುಂಡಿ, ಮಂಡನಹಳ್ಳಿ, ಗುಜ್ಜೆàಗೌಡನಪುರ, ಅರಸನಕೆರೆ, ಮಾರ್ಬಳ್ಳಿ ಹುಂಡಿ, ಮಾರ್ಬಳ್ಳಿ ಹಾಗೂ ಟಿ.ಕಾಟೂರು ಗ್ರಾಮಗಳಲ್ಲಿ ಸ್ಥಳೀಯ ಮುಖಂಡರೊಂದಿಗೆ ರೋಡ್ ಶೋ ನಡೆಸಿ ಮತಯಾಚಿಸಿದರು.
Related Articles
Advertisement
ಆದರೆ, ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವೈಯಕ್ತಿಕವಾಗಿ ಸಹಾಯ ಮಾಡಲಾಗಲ್ಲ. ಅಂಗವಿಕಲ ಪ್ರಮಾಣಪತ್ರ ಮಾಡಿಸಿಕೊಂಡು ಬಂದರೆ, ಸರ್ಕಾರದ ಯೋಜನೆಗಳಲ್ಲಿ ನೆರವುಕೊಡಿಸುವುದಾಗಿ ಹೇಳಿ ಮುನ್ನಡೆದರು. ಇತ್ತ ಗ್ರಾಮದ ಕೆಲವರು ದೇವಸ್ಥಾನಕ್ಕೆ ಭೇಟಿ ನೀಡದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಅಲ್ಲಿಂದ ಮಾವಿನಹಳ್ಳಿಗೆ ಭೇಟಿ ನೀಡಿದ ಸಿದ್ದರಾಮಯ್ಯ ಅವರು, ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮತಯಾಚನೆ ಮಾಡಿದ ನಂತರ ಗ್ರಾಮದ ಮುಖಂಡ ರಾಮೇಗೌಡರ ತೋಟದ ಮನೆಗೆ ತೆರಳಿ ಮಧ್ಯಾಹ್ನದ ಊಟ ಮುಗಿಸಿದರು.
ನಂತರ ಜಯಪುರಕ್ಕೆ ಆಗಮಿಸಿದ ಅವರನ್ನು ಹೂ ಮಳೆಗರೆದು ಬರಮಾಡಿಕೊಳ್ಳಲಾಯಿತು. ಎಚ್.ಡಿ.ಕೋಟೆ ರಸ್ತೆ ಜಂಕ್ಷನ್‌ನಲ್ಲಿ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿ, ಗ್ರಾಮಸ್ಥರನ್ನು ಉದ್ದೇಶಿಸಿ ಭಾಷಣ ಮಾಡಿ ಮತಯಾಚಿಸಿದರು. ಅಲ್ಲಿಂದ ಹೊರಟ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಮುಖಂಡರ ದಂಡು ಜಯಪುರದ ದಿ.ಪಂಡಿತರ ಮನೆಗೆ ಭೇಟಿ ನೀಡಿ, ಫೂ›ಟ್ ಸಲಾಡ್ ಸೇವಿಸಿ ಬಂದರು.
ನಂತರ ಹಾರೋಹಳ್ಳಿಗೆ ಭೇಟಿ ನೀಡಿದ ಮುಖ್ಯಮಂತ್ರಿಯವರು ಗ್ರಾಮದ ಆರಂಭದಲ್ಲೇ ಇರುವ ಲಿಂಗಾಯತ ಸಮಾಜದ ಮುಖಂಡ ನಂಜಪ್ಪ ಅವರ ಮನೆಗೆ ತೆರಳಿ ತಂಪು ಪಾನೀಯ ಸೇವಿಸಿದರು. ಅಲ್ಲಿಂದ ಹಾರೋಹಳ್ಳಿ (ಜಯಪುರ)ಗೆ ಬಂದ ಮುಖ್ಯಮಂತ್ರಿ ಅವರನ್ನು ಛತ್ರಿ, ಛಾಮರದೊಂದಿಗೆ ಮೆರವಣಿಗೆಯಲ್ಲಿ ಗ್ರಾಮದ ರಾಮಮಂದಿರಕ್ಕೆ ಕರೆದೊಯ್ದು ಮಂಗಳಾರತಿ ಮಾಡಿಸಲಾಯಿತು. ರಾಮಮಂದಿರ ಮುಂಭಾಗದಲ್ಲೇ ಇರುವ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಅಲ್ಲಿಂದ ಬಂದ ಸಿದ್ದರಾಮಯ್ಯ ಅವರು, ಗ್ರಾಮದ ಮಾರಮ್ಮದೇವಿ ದೇವಸ್ಥಾನದ ಆವರಣದಲ್ಲಿ ತೆರೆದ ವಾಹನದಲ್ಲಿ ನಿಂತು ಭಾಷಣ ಮಾಡಿ ಮತಯಾಚಿಸಿ, ನಂತರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಮಾಜಿ ಸಂಸದ ಸಿ.ಎಚ್.ವಿಜಯಶಂಕರ್, ಮಾಜಿ ಶಾಸಕ ಸತ್ಯನಾರಾಯಣ, ಜಿಪಂ ಮಾಜಿ ಅಧ್ಯಕ್ಷ ಕೆ.ಮರಿಗೌಡ, ಡಾ.ಯತೀಂದ್ರ ಸಿದ್ದರಾಮಯ್ಯ, ಮಾವಿನಹಳ್ಳಿ ಸಿದ್ದೇಗೌಡ ಜತೆಗಿದ್ದರು.
* ಗಿರೀಶ್ ಹುಣಸೂರು