Advertisement

Bhagwant Khooba: ವೈಫಲ್ಯ ಮುಚ್ಚಿಕೊಳ್ಳಲು ಸಿಎಂ ಯತ್ನ- ಭಗವಂತ ಖೂಬಾ

10:00 PM Jun 19, 2023 | Pranav MS |

ಬೀದರ್‌: ಅಕ್ಕಿ ವಿತರಣೆ ಗ್ಯಾರಂಟಿ ಯೋಜನೆ ಜಾರಿ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರಕಾರದತ್ತ ಬೊಟ್ಟು ಮಾಡಿ ತಮ್ಮ ಸರಕಾರದ ವೈಫಲ್ಯವನ್ನು ಮುಚ್ಚಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಆರೋಪಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 2013ರಲ್ಲಿ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರಿಗೆ ಕೇಂದ್ರದಲ್ಲಿದ್ದ ತಮ್ಮದೇ ಯುಪಿಎ ಸರಕಾರ ಅಕ್ಕಿ ಪೂರೈಕೆಗೆ ನಿರಾಕರಿಸಿತ್ತು ಎಂಬುದನ್ನು ಅವರು ಮರೆತಿದ್ದಾರೆ. ಐದು ಗ್ಯಾರಂಟಿಗಳ ಹೆಸರಿನಲ್ಲಿ ಜನರಿಗೆ ಮೋಸ ಮಾಡಿ ಮತ ಪಡೆದು ಅ ಧಿಕಾರಕ್ಕೆ ಬಂದಿದ್ದೇವೆ ಹಾಗೂ ಷರತ್ತು ರಹಿತವಾಗಿ ಯೋಜನೆಗಳನ್ನು ಜಾರಿಗೊಳಿಸಲು ಆಗುವುದಿಲ್ಲ ಎಂಬುದು ಸಿಎಂಗೆ ಗೊತ್ತಾಗಿದೆ. ಹಾಗಾಗಿ ನಿತ್ಯ ಹೊಸ ಸಬೂಬು ಹೇಳುತ್ತಿದ್ದಾರೆ. ಕೇಂದ್ರ ಸರಕಾರ ಈಗಾಗಲೇ 5 ಕೆ.ಜಿ. ಅಕ್ಕಿ ಪೂರೈಸುತ್ತಿದ್ದು, ಈಗ ಕಾಂಗ್ರೆಸ್‌ ಸರಕಾರ ನೀಡಿದ ಆಶ್ವಾಸನೆಯಂತೆ ಹೆಚ್ಚುವರಿ 10 ಕೆ.ಜಿ. ಅಕ್ಕಿಯನ್ನು ನೀಡಬೇಕು ಎಂದರು.

ದ್ವೇಷ ಭಾವನೆ ಮತ್ತು ರಾಜಕೀಯ ಉದ್ದೇಶದಿಂದ ಹಿಂದೆ ಬಿಜೆಪಿ ಸರಕಾರ ಜಾರಿಗೆ ತಂದಿದ್ದ ಮತಾಂತರ ನಿಷೇಧ ಕಾಯ್ದೆ, ಗೋ ಹತ್ಯೆ ತಡೆ ಕಾಯ್ದೆ ರದ್ದು ಹಾಗೂ ಪಠ್ಯಕ್ರಮ ಪರಿಷ್ಕರಣೆಗೆ ಕಾಂಗ್ರೆಸ್‌ ಸರಕಾರ ಮುಂದಾಗಿದೆ. ಮುಂದಿನ ದಿನಗಳಲ್ಲಿ ಸರಕಾರಕ್ಕೆ ಜನರೇ ಛೀಮಾರಿ ಹಾಕುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next