Advertisement

ವಾಲ್ಮೀಕಿ ಸಮುದಾಯದ ಎಸ್ ಟಿ ಮೀಸಲಾತಿ ಹೆಚ್ಚಳಕ್ಕೆ ಶೀಘ್ರ ಕ್ರಮ: ಸಿಎಂ ಯಡಿಯೂರಪ್ಪ

03:32 PM Feb 09, 2021 | Team Udayavani |

ದಾವಣಗೆರೆ: ವಾಲ್ಮೀಕಿ ಸಮುದಾಯದ ಎಸ್ ಟಿ ಮೀಸಲಾತಿ ಹೆಚ್ಚಳ ಬೇಡಿಕೆ ಶೀಘ್ರ ಈಡೇರಿಸದಿದ್ದರೆ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿಯವರು ಸಿಎಂ ಬಿಎಸ್ ವೈ ಎದುರೇ ವೇದಿಕೆಯಲ್ಲಿ ಘೋಷಿಸಿ, ಸಿಎಂ ಅವರಿಂದ ಬೇಡಿಕೆ ಈಡೇರಿಸುವ ಭರವಸೆ ಸಿಕ್ಕ ಮೇಲೆ ತಮ್ಮ ಹೇಳಿಕೆ ವಾಪಸ್ ಪಡೆದ ಘಟನೆಗೆ ಹರಿಹರ ತಾಲೂಕು ರಾಜನ ಹಳ್ಳಿಯಲ್ಲಿ ಮಂಗಳವಾರ ನಡೆದ ವಾಲ್ಮೀಕಿ ಜಾತ್ರೆ ಸಾಕ್ಷಿಯಾಯಿತು.

Advertisement

“ವಾಲ್ಮೀಕಿ ಸಮುದಾಯಕ್ಕೆ ಎಸ್ ಟಿ ಮೀಸಲಾತಿಯನ್ನು 7.5‌ಗೆ ಹೆಚ್ಚಿಸಲು ಮಾರ್ಚ್ 9ರೊಳಗೆ ಕ್ರಮ ಕೈಗೊಳ್ಳದಿದ್ದರೆ ಮಠದ ಆವರಣದಲ್ಲಿಯೇ ಆಮರಣಾಂತ ಉಪವಾಸ ಆರಂಭಿಸುತ್ತೇನೆ. ಈ ವೇಳೆ ನಾನು ಸತ್ತರೆ…”ಎಂದು ವಾಲ್ಮೀಕಿ ಮಠದ ಪ್ರಸನ್ನಾನಂದ ಸ್ವಾಮೀಜಿ ಬಹಿರಂಗ ಹೇಳಿಕೆ ನೀಡುತ್ತಿದ್ದಂತೆ ಸಿಎಂ ಬಿಎಸ್ ವೈ “ಹಾಗೆಲ್ಲ ಮಾತಾಡಬೇಡಿ. ಶೀಘ್ರ ಮೀಸಲಾತಿ ಹೆಚ್ಚಳ ಮಾಡಿ ಕೊಡುತ್ತೇನೆ “ಎಂದು ಹೇಳುವ ಮೂಲಕ ಶ್ರೀಗಳು‌ ಮಾತು ಮುಂದುವರಿಸಲು ಆಸ್ಪದ ನೀಡಲಿಲ್ಲ.

ಇದನ್ನೂ ಓದಿ:ಭಾರತದಲ್ಲಿ ಎಷ್ಟು ಚೀನಾ ಕಂಪನಿ ವ್ಯವಹಾರ ನಡೆಸುತ್ತಿದೆ? ಕೇಂದ್ರದ ಮಾಹಿತಿಯಲ್ಲೇನಿದೆ

ಆಗ ಸ್ವಾಮೀಜಿ, ಉಪವಾಸ ಸತ್ಯಾಗ್ರಹ ಕುರಿತ ತಮ್ಮ ಮಾತನ್ನು ಈಗಲೇ ವಾಪಸ್ ಪಡೆಯುವುದಾಗಿ ಸಭಿಕರಿಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ಶ್ರೀಗಳು ತಮ್ಮ ಮಾತಿನಿಂದ ಮುಖ್ಯಮಂತ್ರಿಗಳ ಮನಸ್ಸಿಗೆ ನೋವಾದರೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದರು.

Advertisement

ಬಳಿಕ ಸಿಎಂ ಯಡಿಯೂರಪ್ಪ ಮಾತನಾಡಿ, ಶ್ರೀಗಳು ಇನ್ನು‌ಮುಂದೆ ಮತ್ತೆ ಹೋರಾಟಕ್ಕೆ ಇಳಿಯಲು ಆಸ್ಪದ ನೀಡುವುದಿಲ್ಲ. ಆದಷ್ಟು ಬೇಗ ಮೀಸಲಾತಿ ಹೆಚ್ಚಿಸಲಾಗುವುದು. ಶ್ರೀಗಳ ಮಾತಿನಿಂದ ನನಗೆ ನೋವಾಗಿಲ್ಲ. ಶ್ರೀಗಳು ಸಮಾಜದ ಮೇಲಿರುವ ತಮ್ಮ ಕಾಳಜಿ ವ್ಯಕ್ತಪಡಿಸಿದ್ದಾರೆ. ಸಮುದಾಯದ ಸಚಿವರೊಂದಿಗೆ ಚರ್ಚಿಸಿ ಶೀಘ್ರ ಮೀಸಲಾತಿ ಹೆಚ್ಚಳಕ್ಕೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next