ಶಿವಮೊಗ್ಗ: ಸಂಕ್ರಾಂತಿ ಹಬ್ಬದ ಹಿನ್ನಲೆಯಲ್ಲಿ ಸಿಎಂ ಯಡಿಯೂರಪ್ಪ ಶಿಕಾರಿಪುರದ ಶ್ರೀ ಹುಚ್ಚರಾಯ ಸ್ವಾಮಿ ದೇವಾಲಯ, ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿದ ವಿಶೇಷ ಪೂಜೆ ಸಲ್ಲಿಸಿದರು. ಮಾತ್ರವಲ್ಲದೆ ತಮ್ಮ ಸ್ವಗೃಹದಲ್ಲಿ ಸಂಕ್ರಾಂತಿ ವಿಶೇಷ ಪೂಜೆ ನೆರವೇರಿಸಿ ನಾಡಿನ ಜನತೆಗೆ ಶುಭ ಕೋರಿದರು.
ಆ ಬಳಿಕ ತಮ್ಮ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿ, ಮಲೆನಾಡಿನಲ್ಲಿ ಮಂಗನಕಾಯಿಲೆ ಮತ್ತೆ ಉಲ್ಬಣಗೊಂಡಿದೆ. ಸರಕಾರ ಈಗಾಗಲೇ ಎಲ್ಲಾ ರೀತಿ ಮುನ್ನೇಚ್ಚರಿಕಾ ಕ್ರಮ ಕೈಗೊಂಡಿದೆ. ಕಳೆದ ಬಾರಿ ಕಾಯಿಲೆಯಿಂದ ಮೃತಪಟ್ಟ ಕುಟುಂಬದವರಿಗೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು. ಮೊನ್ನೆಯಷ್ಟೇ ವೃದ್ಧೆ ಹೂವಮ್ಮ ಎಂಬುವವರು ಕೆಎಫ್ ಡಿ (Kyasanur Forest disease) ಯಿಂದ ಸಾವನ್ನಪ್ಪಿದ್ದರು.
Advertisement
ಸಂಕ್ರಾಂತಿ ಸಂಭ್ರಮ: ಸ್ವಗ್ರಾಮ ಶಿಕಾರಿಪುರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಿಎಂ ಯಡಿಯೂರಪ್ಪ
05:58 PM Feb 18, 2020 | Mithun PG |
Advertisement
ಪ್ರೊಪೋಸಲ್ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !
Advertisement
Udayavani is now on Telegram. Click here to join our channel and stay updated with the latest news.