Advertisement

ಸಿಎಂ ಹುದ್ದೆ ಕೊಟ್ಟರೆ ಸಮರ್ಥ ನಿರ್ವಹಣೆ : ಯತ್ನಾಳ್‌

09:28 PM Dec 20, 2021 | Team Udayavani |

ಬೆಳಗಾವಿ: ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ಪಕ್ಷ ಅವಕಾಶ ನೀಡಿದರೆ ಸಮರ್ಥವಾಗಿ ನಿಭಾಯಿಸಿ ತೋರಿಸುತ್ತೇನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದಾರೆ.

Advertisement

ರವಿವಾರ ಶಿಗ್ಗಾವಿಯಲ್ಲಿ ಸಿಎಂ ಬೊಮ್ಮಾಯಿ ಭಾವನಾತ್ಮಕವಾಗಿ ಭಾಷಣ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಯತ್ನಾಳ್‌, ನಾವು ಹೇಳಿದ ಭವಿಷ್ಯ ಸುಳ್ಳಾಗಿಲ್ಲ. ಅಧಿಕಾರ ಶಾಶ್ವತ ಅಲ್ಲ ಅಂತ ಅವರು ಹೇಳಿದ್ದಾರೆ. ಅದು ಸಹಜವಾಗಿ ಬಂದ ಮಾತು. ಬದಲಾವಣೆ ಅನ್ನೋದು ಸಹಜ. ಪ್ರಕ್ರಿಯೆಗಳು ನಡೆಯುತ್ತಲೇ ಇರುತ್ತವೆ ಎಂದರು.

ಪಕ್ಷ ಸಿಎಂ ಸ್ಥಾನ ನೀಡಿದರೆ ಉತ್ತಮ ಕೆಲಸ ಮಾಡಿ ತೋರಿಸುತ್ತೇನೆ. ಕೆಲಸಕ್ಕೆ ಬಾರದವರನ್ನ ಸಿಎಂ ಮಾಡಿದರೆ ಏನೂ ಮಾಡಲಾಗುವುದಿಲ್ಲ. ಪ್ರಾಮಾಣಿಕ ನಿರ್ಣಯ ತೆಗೆದುಕೊಳ್ಳುವವರಾಗಬೇಕು. ಬಾಲಂಗೋಚಿಗಳಿಗೆ ಕೊಟ್ಟರೆ ಕಷ್ಟ ಎಂದು ಹೇಳಿದರು.

ಇದನ್ನೂ ಓದಿ:ಹಿಂದಿ ವಿರೋಧಿಸುವವರು, ಉರ್ದು ಬರೆದರೆ ಪ್ರಶ್ನಿಸಲ್ಲ: ಬಸನಗೌಡ ಪಾಟೀಲ್‌ ಯತ್ನಾಳ್‌

ಈಗ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆ ಉದ್ಭವ ಆಗಲ್ಲ. ಯಾರೂ ಕನಸು ಕಾಣುವುದು ಬೇಡ. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಮುಖ್ಯಮಂತ್ರಿ ಬದಲಾವಣೆ ಅನ್ನುವುದು ಗಾಳಿ ಸುದ್ದಿ.
-ಆರ್‌.ಅಶೋಕ್‌, ಕಂದಾಯ ಸಚಿವ

Advertisement

ಜೀವನವೇ ಶಾಶ್ವತವಲ್ಲ, ಕುರ್ಚಿ ಯಾವಾಗ ಶಾಶ್ವತ ಹೇಳಿ ಎಂದಿದ್ದಾರೆ. ಇದೆಲ್ಲ ನೋಡಿದರೆ ಬಸವ ಕೃಪಾದವರು ಬಸವ ಕೃಪಾದಲ್ಲೇ ಇರಿ, ಕೇಶವ ಕೃಪಾ ನಂಬಿ ಹೋದರೆ ಅಲ್ಲೂ ಇಲ್ಲ, ಇಲ್ಲೂ ಇಲ್ಲ. ನಾ ಘರ್‌ಕಾ, ನಾ ಘಾಟ್‌ ಕಾ. ಬಸ್‌ ಸ್ಟಾಂಡ್‌ ಕಾ ಆಗುತ್ತದೆ.
-ಸಿ.ಎಂ.ಇಬ್ರಾಹಿಂ, ಕಾಂಗ್ರೆಸ್‌ ಶಾಸಕ

ಮುಖ್ಯಮಂತ್ರಿಯವರು ತಮ್ಮ ಜಿಲ್ಲೆಯಲ್ಲಿ ಮಾತನಾಡುವಾಗ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಕ್ಷೇತ್ರದಲ್ಲಿ ಕುಟುಂಬದ ಸದಸ್ಯ ಅಂತ ಹೇಳಿದ್ದಾರೆ. ಇದಕ್ಕೆ ರಾಜಕೀಯ ಸ್ವರೂಪ ಕೊಡುವುದು ಅನಗತ್ಯ.
-ಕೋಟ ಶ್ರೀನಿವಾಸ ಪೂಜಾರಿ, ಸಚಿವ

 

Advertisement

Udayavani is now on Telegram. Click here to join our channel and stay updated with the latest news.

Next