Advertisement

ಜಿಪಂ ಸಿಇಒಗಳಿಗೆ ಸಿಎಂ ಕಣ್ಗಾವಲು; ಬಜೆಟ್‌ ಯೋಜನೆಗಳ ಬಗ್ಗೆ ಮುಂದುವರಿದ ಪರಾಮರ್ಶೆ

02:16 AM May 10, 2022 | Team Udayavani |

ಬೆಂಗಳೂರು: ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ, ಭ್ರಷ್ಟಾಚಾರ ಸಹಿಸುವುದಿಲ್ಲ. ನೀವೆಲ್ಲರೂ ನನ್ನ ಕಣ್ಗಾವಲಿನಲ್ಲಿ ಇದ್ದೀರಿ. ಎಲ್ಲರನ್ನೂ ಗಮನಿಸುತ್ತಿದ್ದೇನೆ. ಕರ್ತವ್ಯ ವೈಫ‌ಲ್ಯಕ್ಕೆ ಸೂಕ್ತ ಕ್ರಮ ಕೈಗೊಳ್ಳ ಬೇಕಾಗುತ್ತದೆ…

Advertisement

-ಹೀಗೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದ ಎಲ್ಲ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ಸೋಮವಾರ ಜಿ.ಪಂ.ಗಳ ಸಿಇಒಗಳ ಜತೆಗೆ ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಸಭೆ ನಡೆಸಿದ ಸಂದರ್ಭದಲ್ಲಿ ಈ ಎಚ್ಚರಿಕೆ ನೀಡಿದ್ದಾರೆ.

ಯೋಜನೆಗಳು ಸಕಾಲದಲ್ಲಿ ಜಾರಿಯಾಗಬೇಕು. ನವ ಭಾರತಕ್ಕಾಗಿ ನವ ಕರ್ನಾಟಕ ನಿರ್ಮಾಣದಲ್ಲಿ ನಿಮ್ಮ ಕೊಡುಗೆ ನೀಡಿ. ನಾನು ನಿಮ್ಮ ಜತೆ ಇದ್ದೇನೆ. ಶಾಲಾ ಮಕ್ಕಳು, ಮಹಿಳಾ ಸಶಕ್ತೀಕರಣ -ಇವೆಲ್ಲ ಮುಖ್ಯ. ಜನಹಿತದ ನಿರ್ಧಾರಗಳನ್ನು ಧೈರ್ಯವಾಗಿ ತೆಗೆದುಕೊಳ್ಳಿ. ಸಾರ್ವಜನಿಕರ ಅರ್ಜಿಗಳಿಗೆ ಪರಿಹಾರ ಒದಗಿಸಿ. ನಿಮ್ಮ ಕೆಲಸದಲ್ಲಿ ನಿಖರತೆ ಇರಲಿ ಎಂದು ತಾಕೀತು ಮಾಡಿದರು.

ಹದ್ದುಬಸ್ತಿನಲ್ಲಿಡಿ
ಸಿಇಒಗಳು ತಮ್ಮ ಹಂತದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು. ಪಿಡಿಒಗಳನ್ನು ಶಿಸ್ತಿನಲ್ಲಿರಿಸಬೇಕು. ಬಜೆಟ್‌ನ
ಬಹುತೇಕ ಕಾರ್ಯಕ್ರಮಗಳ ಅನುಷ್ಠಾನ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದರು.

ಆಯಾ ವರ್ಷ ಕ್ರಿಯಾ ಯೋಜನೆಗಳು ಅದೇ ವರ್ಷದಲ್ಲಿ ಅನುಷ್ಠಾನವಾಗುವುದಿಲ್ಲ. ಆದರೆ ಕಾಲಮಿತಿಯೊಳಗೆ ಅನುಷ್ಠಾನವಾಗ ಬೇಕೆಂಬ ಧ್ಯೇಯವಿರಬೇಕು. ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ ಇಲಾಖೆಯ ಯೋಜನೆಗಳೇ ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿಗೆ ಕಾರಣ. ಇವುಗಳ ಶೀಘ್ರ ಅನುಷ್ಠಾನಕ್ಕೆ ಗಮನಹರಿಸಿ ಎಂದರು.

Advertisement

ಇದೇ ಸಂದರ್ಭದಲ್ಲಿ ಕೆಲವು ತೀರ್ಮಾನ ಪ್ರಕಟಿಸಿದ ಮುಖ್ಯಮಂತ್ರಿಯವರು, 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಸಮಾಜ ಕಲ್ಯಾಣ ಇಲಾಖೆಯಡಿ 100 ವಸತಿ ನಿಲಯಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ 50 ವಸತಿ ನಿಲಯಗಳ ನಿರ್ಮಾಣ ಆದ್ಯತೆ ಮೇರೆಗೆ ಕೈಗೊಳ್ಳಲಾಗುವುದು ಎಂದರು.

ಅಮೃತ ಗ್ರಾ.ಪಂ. ಯೋಜನೆಯಡಿ ಜೂ. 30ರೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು. ಘನತ್ಯಾಜ್ಯ ನಿರ್ವಹಣೆಯಿಂದ ಹಿಡಿದು ಗ್ರಂಥಾಲಯದ ವರೆಗೆ ನಗರ ಪ್ರದೇಶದ ಎಲ್ಲ ಸೌಲಭ್ಯಗಳು ಯೋಜನೆಯಡಿ ಬರುವ 750 ಗ್ರಾಮಗಳಲ್ಲಿ ದೊರೆಯಲಿವೆ ಎಂದರು.

ಬದಲಾವಣೆ
ಎಲ್ಲರಿಂದಲೂ ಆಗಬೇಕು. ಜನರಿಗೆ ವ್ಯವಸ್ಥೆಯ ಮೇಲೆ ವಿಶ್ವಾಸ ಮೂಡುವಂತೆ ಕೆಲಸ ಮಾಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next