Advertisement

Nandini Milk ಮತ್ತಷ್ಟು ತುಟ್ಟಿ? ಶೀಘ್ರವೇ ದರ ಪರಿಷ್ಕರಣೆ: ಸಿದ್ದರಾಮಯ್ಯ ಸುಳಿವು

12:22 AM Sep 14, 2024 | Team Udayavani |

ರಾಮನಗರ: ನಂದಿನಿ ಹಾಲಿನ ದರವನ್ನು ಮತ್ತೆ ಹೆಚ್ಚಿಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳಿವು ನೀಡಿದ್ದಾರೆ. ಮಾಗಡಿಯಲ್ಲಿ ಶುಕ್ರವಾರ ನಡೆದ ವಿವಿಧಅಭಿವೃದ್ಧಿ ಕಾಮಗಾರಿ ಗಳ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಹಾಲಿನ ದರ ಏರಿಸುತ್ತೇವೆ.

Advertisement

ಹೆಚ್ಚಾದ ಹಣ ರೈತರಿಗೆ ಹೋಗಬೇಕು. ನಾವು ಹಾಲು ಉತ್ಪಾದಕರು,ರೈತರ ಪರವಾಗಿರುತ್ತೇವೆ. ಹಾಲಿನ ದರ ಹೆಚ್ಚಳ ಸಂಬಂಧ ಸದ್ಯದಲ್ಲೇ ಕೆಎಂಎಫ್‌ ಹಾಗೂ ಸಂಬಂಧಿಸಿದ ಅಧಿಕಾರಿ ಗಳ ಜತೆ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

ಬಿಜೆಪಿ ಹಾಗೂ ವಿಪಕ್ಷಗಳು ಹಾಲಿನ ಬೆಲೆ ಹೆಚ್ಚಳ ಮಾಡುವುದನ್ನು ವಿರೋಧಿಸುವುದರ ಕುರಿತು ತಮ್ಮ ಭಾಷಣದಲ್ಲಿ ಪ್ರಸ್ತಾವಿಸಿದ ಸಿಎಂ ಸಿದ್ದರಾಮಯ್ಯ, ರೈತರು ಸಂಕಷ್ಟದಲ್ಲಿ ಇರುವ ಬಗ್ಗೆ ನನಗೆ ಅರಿವಿದೆ. ಹಾಲಿನ ಬೆಲೆ ಹೆಚ್ಚಿಸಿದರೆ ಬಿಜೆಪಿಯವರು ವಿರೋಧಿಸುತ್ತಾರೆ. ರೈತರಿಗೆ ಸಿಗುತ್ತಿರುವ ಬೆಲೆ ಏನೇನೂ ಸಾಲದು. ರೈತರಿಗೆ ಹಣ ನೀಡಬೇಕೋ, ಬೇಡವೋ? ರೈತರಿಗೆ 5 ರೂ. ಹಾಲಿನ ದರ ಹೆಚ್ಚಿಗೆ ನೀಡುವುದು ನನಗೆ ಕಷ್ಟವಲ್ಲ. 3 ರೂ. ಹೆಚ್ಚಳ ಮಾಡಿದರೆ ಬಿಜೆಪಿಯವರು ವಿರೋಧ ಮಾಡುತ್ತಾರೆ. ಬಿಜೆಪಿಯವರಿಗೆ ನೀವೇ ಹೇಳಬೇಕು ಎಂದು ರೈತರಿಗೆ ಕರೆ ನೀಡಿದರು.

ಸಿಎಂ ಹೇಳಿದ್ದೇನು?
-ನನಗೆ ರೈತರ ಸಂಕಷ್ಟದ ಬಗ್ಗೆ ಅರಿವಿದೆ
-ಹಾಲಿನ ದರ ಹೆಚ್ಚಳ ಮಾಡುತ್ತೇವೆ
-ಹೆಚ್ಚಾದ ಹಣ ರೈತರಿಗೆ ಹೋಗಬೇಕು
-ಶೀಘ್ರದಲ್ಲೇ ಕೆಎಂಎಫ್‌ ಹಾಗೂ ಇತರ ಅಧಿಕಾರಿಗಳ ಜತೆ ಸಭೆ
-ದರ ಹೆಚ್ಚಳ ಸಂಬಂಧ ಚರ್ಚಿಸಿ ತೀರ್ಮಾನ ಕೈಗೊಳ್ಳುವೆ

5 ರೂ. ಹೆಚ್ಚಳ ಮಾಡಿ
ಸಮಾರಂಭದಲ್ಲಿ ಹಾಲು ಬೆಲೆ ಹೆಚ್ಚಳ ಸಂಬಂಧ ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಪಶು ಆಹಾರ, ಹಸುಗಳ ಬೆಲೆ ಹೆಚ್ಚಳದಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ರೈತರಿಗೆ ನೆರವಾಗುವ ಉದ್ದೇಶದಿಂದ ಹಾಲಿನ ಬೆಲೆಯನ್ನು 5 ರೂ.ಹೆಚ್ಚಳ ಮಾಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು. ಕಳೆದ ಜೂ. 25ರಂದು ಕೆಎಂಎಫ್ ಪ್ರತೀ ಲೀಟರ್‌ ಹಾಲಿಗೆ 2 ರೂ. ಹೆಚ್ಚಳ ಮಾಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.