ಸಮಿತಿಯ ಅಧ್ಯಕ್ಷ ಎಚ್.ವಿ. ಅನಂತ ಸುಬ್ಬರಾವ್ ಈ ಕುರಿತು ಪತ್ರಿಕಾ ಪ್ರಕಟನೆ ಹೊರಡಿಸಿದ್ದು, ಅನಿರ್ಧಿಷ್ಟಾ ವಧಿ ಮುಷ್ಕರ ಮುಂದೂಡಿರುವ ಹಿನ್ನೆಲೆಯಲ್ಲಿ ಸಾರಿಗೆ ನಿಗಮಗಳ ಎಲ್ಲ ನೌಕರರೂ ಡಿ. 31ರಂದು ಕೆಲಸಕ್ಕೆ ಹಾಜರಾಗಬೇಕು ಎಂದು ವಿನಂತಿಸಿದ್ದಾರೆ.
Advertisement
ಸಂಕ್ರಾಂತಿಯ ಅನಂತರ ಸಭೆರವಿವಾರ ಸಂಜೆ ಮುಖ್ಯಮಂತ್ರಿಗಳ ಜತೆ ಸಾರಿಗೆ ಸಚಿವರು, ನಿಗಮಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಸಾರಿಗೆ ನಿಗಮಗಳ ಹಿರಿಯ ಅಧಿಕಾರಿಗಳು ನಡೆಸಿದ ಸಭೆಯ ಫಲಶ್ರುತಿಯಾಗಿ ಸಾರಿಗೆ ಸಚಿವರು ಜಂಟಿ ಕ್ರಿಯಾ ಸಮಿತಿಗೆ ಲಿಖೀತವಾಗಿ ಮನವಿ ಮಾಡಿದರು. ಉದ್ದೇಶಿತ ಮುಷ್ಕರವನ್ನು ಹಿಂಪಡೆಯಬೇಕು, ಸಂಕ್ರಾಂತಿ ಹಬ್ಬದ ಅನಂತರ ಸಾರಿಗೆ ನೌಕರರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿಗಳ ಜತೆ ಸಭೆ ಏರ್ಪಡಿಸುವುದಾಗಿ ಕೋರಿದರು. ಈ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿ ಮುಷ್ಕರವನ್ನು ಮುಂದೂಡಲು ಜಂಟಿ ಕ್ರಿಯಾ ಸಮಿತಿ ಒಮ್ಮತದಿಂದ ತೀರ್ಮಾನಿಸಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
– ರಾಮಲಿಂಗಾರೆಡ್ಡಿ,ಸಾರಿಗೆ ಸಚಿವ