Advertisement
ನಗರದಲ್ಲಿ ಉದಯವಾಣಿಯೊಂದಿಗೆ ಅವರು ಮಾತನಾಡಿ, ರಾಜ್ಯದಲ್ಲಿನ ಕೋಟ್ಯಂತರ ಕುಟುಂಬಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ತಲುಪುತ್ತಿದ್ದು, ಇದರಿಂದ ಪ್ರತಿ ಕುಟುಂಬಗಳಿಗೆ ವಾರ್ಷಿಕ ತಲಾ 40 ರಿಂದ 50 ಸಾವಿರ ರೂಗಳ ಅನುಕೂಲವಾಗುತ್ತಿದೆ, ಇದರಿಂದ ರಾಜ್ಯ ಆರ್ಥಿಕ ದಿವಾಳಿ ಆಗುತ್ತದೆ ಎನ್ನುತ್ತಿದ್ದ ಪ್ರತಿಪಕ್ಷಗಳ ಲೆಕ್ಕಾಚಾರ ತಲೆಕೆಳಗಾಗಿದೆ. ಪರಿಣಾಮ ಹೊಟ್ಟೆ ಉರಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಮುಡಾ ನಿವೇಶನಗಳ ಗೂಬೆ ಕೂರಿಸುವ ಮೂಲಕ ಅವರ ತೇಜೋವಧೆಯನ್ನು ಮಾಡಲು ಬಿಜೆಪಿ ಪಕ್ಷದವರು ಷಡ್ಯಂತರ ರೂಪಿಸಿದ್ದು, ಅದಕ್ಕೆ ಜೆಡಿಎಸ್ ನಾಯಕರು ಕೈ ಜೋಡಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಕೂಡ ಶಾಮೀಲಾಗಿ ಇಡಿಗೆ ಈ ಪ್ರಕರಣದ ತನಿಖೆಯನ್ನು ವಹಿಸುತ್ತಿದೆ. ಆದರೆ, ಈ ಯಾವುದೇ ಷಡ್ಯಂತ್ರಗಳಲ್ಲಿ ಹೆದರಿ ಕೊಂಡು ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯನವರು ರಾಜೀನಾಮೆಯನ್ನು ನೀಡುವು ದಿಲ್ಲ ಪಕ್ಷದ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಈ ಬಗ್ಗೆ ಆತಂಕ ಬೇಡ ಎಂದು ಹೇಳಿದರು.
Advertisement
CM ಸಿದ್ದರಾಮಯ್ಯ ರಾಜೀನಾಮೆ ಸಲ್ಲದು; ಶಾಸಕ ಶಿವಲಿಂಗೇಗೌಡ
05:25 PM Oct 04, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.