Advertisement

ಕೆಪಿ ನಂಜುಂಡಿ ಎಂಎಲ್ ಸಿ ಕನಸು ಭಗ್ನ; ಮೇಲ್ಮನೆಗೆ ಮೂವರ ನಾಮ ನಿರ್ದೇಶನ

01:05 PM Apr 25, 2017 | Team Udayavani |

ಬೆಂಗಳೂರು:ಕೊನೆಗೂ ವಿಧಾನಪರಿಷತ್ ಗೆ ಮೂವರ ಹೆಸರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದು, ಇದರಲ್ಲಿ ಕಾಂಗ್ರೆಸ್ ಮುಖಂಡ ಕೆಪಿ ನಂಜುಂಡಿ ಹೆಸರನ್ನು ಕೈಬಿಟ್ಟಿರುವುದು ಅಸಮಾಧಾನಕ್ಕೆ ಎಡೆಮಾಡಿಕೊಟ್ಟಿದೆ.

Advertisement

ಕೆಪಿ ನಂಜುಂಡಿ ಹೆಸರು ಈ ಬಾರಿಯೂ ಮೇಲ್ಮನೆ ಸದಸ್ಯತ್ವಕ್ಕೆ ಶಿಫಾರಸುಗೊಂಡಿಲ್ಲ. ಬದಲಿಗೆ ಮಾಜಿ ಮೇಯರ್ ಪಿಆರ್ ರಮೇಶ್, ಮೋಹನ್ ಕೊಂಡಜ್ಜಿ ಹಾಗೂ ಸಿಎಂ ಲಿಂಗಪ್ಪ ಅವರ ಹೆಸರನ್ನು ರಾಜ್ಯಪಾಲರಿಗೆ ಕಳುಹಿಸಿರುವ ಪಟ್ಟಿಯಲ್ಲಿ ಸಿಎಂ ಶಿಫಾರಸು ಮಾಡಿದ್ದಾರೆ.

ಕೆಪಿ ನಂಜುಂಡಿ ಅವರಿಗೆ ಈ ಬಾರಿ ಎಂಎಲ್ ಸಿ ಹುದ್ದೆ ಸಿಗಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅಲ್ಲದೇ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಪರಮೇಶ್ವರ್ ಅವರು ಕೂಡಾ ಭರವಸೆ ನೀಡಿದ್ದರು ಎಂದು ಹೇಳಲಾಗಿದೆ. ಮತ್ತೊಂದೆಡೆ ಕೆಪಿ ನಂಜುಂಡಿಗೆ ಎಂಎಲ್ ಸಿ ಸ್ಥಾನ ತಪ್ಪಲು ಕಾಂಗ್ರೆಸ್ ಹಿರಿಯ ಮುಖಂಡ ಆಸ್ಕರ್ ಫರ್ನಾಂಡಿಸ್ ಎಂಬ ಆರೋಪ ಕೇಳಿಬಂದಿದೆ.

ನಾ ಈ ಬಾರಿ ಸುಮ್ಮನಿರಲ್ಲ: ಕೆಪಿ ನಂಜುಂಡಿ
ನಮ್ಮ ಇಡೀ ವಿಶ್ವಕರ್ಮ ಸಮುದಾಯವನ್ನು ಕಾಂಗ್ರೆಸ್ ಪರವಾಗಿ ನಿಲ್ಲಿಸಿದ್ದೇನೆ. ಆದರೆ ನನಗೆ 3ನೇ ಬಾರಿಯೂ ಎಂಎಲ್ ಸಿ ಸದಸ್ಯತ್ವವನ್ನು ತಪ್ಪಿಸಲಾಗಿದೆ ಎಂದು ಕೆಪಿ ನಂಜುಂಡಿ ಖಾಸಗಿ ಚಾನೆಲ್ ವೊಂದರ ಜೊತೆ ಮಾತನಾಡುತ್ತ ತಿಳಿಸಿದ್ದಾರೆ. ನಮ್ಮ ಸಮಾಜದ ಸ್ವಾಮೀಜಿಗಳು ಕಾಂಗ್ರೆಸ್ ಅನ್ನು ಬೆಂಬಲಿಸಿದ್ದರು. ನಿನ್ನೆ ಸಂಜೆ ಎಂಎಲ್ ಸಿ ಪಟ್ಟಿಯಲ್ಲಿ ನನ್ನ ಹೆಸರಿಲ್ಲ ಎಂಬ ವಿಷಯ ಕೇಳಿ ಶಾಕ್ ಆಯ್ತು. ನಮ್ಮಂಥ ಸಮಾಜ ಇನ್ನು ಎಷ್ಟು ಅಂತ ಇಂತಹ ನೋವು ಅನುಭವಿಸಬೇಕು ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next