Advertisement

Convince ಮಾಡಲಾಗದೆ ಸಿಎಂ ಸಿದ್ದರಾಮಯ್ಯ Confuse ಮಾಡಿದ್ದಾರೆ : ಸಿ.ಟಿ.ರವಿ ವಾಗ್ದಾಳಿ

05:15 PM Feb 05, 2024 | Team Udayavani |

ಚಿಕ್ಕಮಗಳೂರು : ಮನವರಿಕೆ(Convince)ಮಾಡಲು ಆಗದಿದ್ದರೆ Confuse ಗೊಂದಲ ಮಾಡು ಎನ್ನವ ಕೆಲಸವನ್ನು ಸುದ್ದಿಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ ಎಂದು ಮಾಜಿ ಶಾಸಕ ಸಿ.ಟಿ.ರವಿ ಸೋಮವಾರ ಆಕ್ರೋಶ ಹೊರ ಹಾಕಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿ.ಟಿ.ರವಿ ಅವರು, ”ಮುಖ್ಯಮಂತ್ರಿಗಳೇ, ಮನಮೋಹನ್ ಸಿಂಗ್ ಕಾಲದಲ್ಲಿ ಎಷ್ಟು ತೆರಿಗೆ ಹಣ ಬಂದಿದೆ? 2004-2014ರವರೆಗೆ ಎಷ್ಟು ತೆರಿಗೆ ಹಣ ಬಂದು ಶ್ವೇತಪತ್ರ ಹೊರಡಿಸಿ. 2014-2024 ಫೆಬ್ರವರಿವರೆಗೆ ನರೇಂದ್ರ ಮೋದಿ ಅವರು ಕೊಟ್ಟ ತೆರಿಗೆ ಹಣ ಎಷ್ಟು ಹೇಳಿ? ಇಬ್ಬರ ಅಡಳಿತಾವಧಿಯಲ್ಲಿ ಅನುದಾನ-ಸಹಾಯಧನ ಎಷ್ಟು ಎಂದು ದಾಖಲೆ ಬಿಡುಗಡೆ ಮಾಡಿ ಎಂದು ಸವಾಲು ಹಾಕಿದರು.

ಇದನ್ನೂ ಓದಿ: ರಾಜ್ಯದಿಂದ 100 ರೂ. ಕೇಂದ್ರಕ್ಕೆ ಹೋದರೆ 12- 13 ರೂ.ಗಳು ಮಾತ್ರ ವಾಪಾಸ್ : ಸಿದ್ದರಾಮಯ್ಯ

2004-2014ರವರಗೆ ಕೇಂದ್ರದಿಂದ ಬಂದ ತೆರಿಗೆ ಹಣ 81795 ಕೋಟಿ. 2014-2023 ಡಿಸೆಂಬರ್ ವರೆಗೆ ಮೋದಿ ಕೊಟ್ಟಿದ್ದು 282791 ಕೋಟಿ.2004-2014ರವರೆಗೆ ಸಿಂಗ್ ಕೊಟ್ಟ ಅನುದಾನ-ಸಹಾಯಧನ 60779 ಕೋಟಿ. 2014-2023ರವರಗೆ ಮೋದಿ ಸರ್ಕಾರ ಕರ್ನಾಟಕಕ್ಕೆ ಕೊಟ್ಟಿದ್ದು 28832 ಕೋಟಿ. ಮೋದಿ ಕರ್ನಾಟಕಕ್ಕೆ ಹತ್ತಿರ ಹತ್ತಿರ ಮೂರುವರೆ ಲಕ್ಷ ಕೋಟಿ ರೂ. ಹಣ ನೀಡಿದ್ದಾರೆ ಎಂದು ವಿವರ ನೀಡಿದರು.

ಸಿಎಂ ಸಿದ್ದರಾಮಯಯ್ಯ ಒಂದು ದಿನವೂ ಜಿಎಸ್‍ಟಿ ಕೌನ್ಸಿಲ್ ಮೀಟಿಂಗ್ ಗೆ ಹೋಗಲಿಲ್ಲ. ನಾನೇಕೆ ಹೋಗಬೇಕು ಎಂಬ ಅಹಂಕಾರ ತೋರಿದರು. ಅನ್ಯಾಯವಾಗಿದ್ದರೆ ಜಿಎಸ್‍ಟಿ ಮೀಟಿಂಗ್‍ನಲ್ಲಿ ಪ್ರಶ್ನೆ ಮಾಡಿ ನ್ಯಾಯ ಕೇಳಬಹುದಿತ್ತು. ಸಚಿವ ಕೃಷ್ಣ ಬೈರೇಗೌಡ ಕೇಂದ್ರದ ನೀತಿ ಎಲ್ಲಾ ಸಮಧಾನವಾಗಿದೆ ಎಂದು ಹೇಳಿ ಬರುತ್ತಾರೆ. ಹೊರಗಡೆ ಬಂದು ಕೇಂದ್ರಕ್ಕೆ ಬೈಯುತ್ತಾ ಸುಳ್ಳು ಹೇಳಿ ರಾಜಕಾರಣ ಮಾಡುತ್ತಾರೆ ಎಂದು ಕಿಡಿ ಕಾರಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next