Advertisement

ಲೋಕ ಚುನಾವಣೆಯಲ್ಲಿ 20 ಸ್ಥಾನ: ಸಿಎಂ ಸಿದ್ದರಾಮಯ್ಯ ವಿಶ್ವಾಸ

12:15 AM Jul 21, 2023 | Team Udayavani |

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿ ದರು. ಬಜೆಟ್‌ ಮೇಲಿನ ಚರ್ಚೆಗೆ ಉತ್ತರಿಸುವ ಸಂದರ್ಭದಲ್ಲಿಯೂ ಹಿಂದಿನ ಬಿಜೆಪಿ, ಕೇಂದ್ರ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಿಎಂ, ಜೆಡಿಎಸ್‌ ಪಕ್ಷವನ್ನೂ ಟೀಕಿಸಿದರು.

Advertisement

ವಿಪಕ್ಷದವರ ಆಸನಗಳಲ್ಲಿ ಒಬ್ಬರೂ ಇಲ್ಲದೆ ಉತ್ತರ ಕೊಡಬೇಕಾದ ಪರಿಸ್ಥಿತಿ ಬಂದಿದೆ. ವಿಪಕ್ಷ ನಾಯಕರೇ ಇಲ್ಲದೆ ರಾಜ್ಯಪಾಲರ ಭಾಷಣ ಹಾಗೂ ಬಜೆಟ್‌ ಮಂಡನೆ ಮಾಡುವ ಪರಿಸ್ಥಿತಿ ಹಿಂದೆಂದೂ ಕಂಡಿರಲಿಲ್ಲ. ಅವರಿಗೆ ಸಂಸದೀಯ ವ್ಯವಸ್ಥೆ, ಪ್ರಜಾಪ್ರಭುತ್ವ, ಸಂವಿಧಾನಗಳ ಮೇಲೆ ನಂಬಿಕೆ ಇಲ್ಲ ಎಂದು ವಾಗ್ಧಾಳಿ ನಡೆಸಿದರು.
ಜನರು ನೀಡಿದ ಆದೇಶಕ್ಕೂ ವಿಪಕ್ಷಗಳು ಬೆಲೆ ಕೊಟ್ಟಿಲ್ಲ. ಬಿಜೆಪಿ, ಜೆಡಿಎಸ್‌ನವರಿಗೆ ಕರ್ತವ್ಯಕ್ಕಿಂತ ರಾಜಕೀಯ ಮಾಡುವುದೇ ಹೆಚ್ಚೆನಿಸಿದೆ. ಅವರು ಏನೇ ರಾಜ ಕಾರಣ ಮಾಡಿದರೂ ನಾವು ಹೆದರುವುದಿಲ್ಲ ಎಂದರು.

ನಮ್ಮ 5 ಗ್ಯಾರಂಟಿ ಅನುಷ್ಠಾನ, 26 ಪಕ್ಷಗಳು ಒಂದಾಗಿರುವುದನ್ನು ಸಹಿಸಲಾಗದೆ ತಗಾ ದೆ ತೆಗೆದಿದ್ದಾರೆ. ಶಿಷ್ಟಾಚಾರ ಪಾಲನೆಗೆ ಅಧಿಕಾರಿಗಳ ನಿಯೋಜನೆ ಈ ಹಿಂದೆಯೂ ನಡೆದಿತ್ತು. ಈಗ ರಾಜಕೀಯಕ್ಕಾಗಿ ವಿರೋಧಿಸಿದ್ದೂ ಅಲ್ಲದೆ, ಉಪಸ್ಪೀಕರ್‌ಗೆ ಅಗೌರವ ತೋರಿದ್ದಾರೆ. ಅವರಿಗೆ ವಿಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳುವ ಅರ್ಹತೆಯೂ ಇಲ್ಲ ಎಂದು ಕುಟುಕಿದರು.

ಅಕ್ಕಿ ಕೊಡದೆ ರಾಜಕೀಯ
ಮಹಾರಾಷ್ಟ್ರದ ಅನಂತರ ಕರ್ನಾಟಕ ದಿಂದ ಅತೀ ಹೆಚ್ಚು ತೆರಿಗೆ ಕೇಂದ್ರಕ್ಕೆ ಸಂದಾಯವಾಗುತ್ತದೆ. ಅದರ ಶೇ. 4.7ರಷ್ಟು ಅನುದಾನವನ್ನು ರಾಜ್ಯಕ್ಕೆ ಕೊಡಲು 14ನೇ ಹಣಕಾಸು ಆಯೋಗ ಶಿಫಾರಸು ಮಾಡಿದ್ದರೆ, 15ನೇ ಹಣಕಾಸು ಆಯೋಗವು ಶೇ. 3.65ರಷ್ಟು ಮಾತ್ರ ಕೊಡಲು ಶಿಫಾರಸು ಮಾಡಿದೆ. ನಮ್ಮಿಂದ 4 ಲಕ್ಷ ಕೋಟಿ ರೂ. ತೆರಿಗೆ ಸಂದಾಯವಾದರೆ, 37 ಸಾವಿರ ಕೋಟಿ ರೂ. ಅನುದಾನ ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳಿಗೆ 13 ಸಾವಿರ ಕೋಟಿ ರೂ. ಮಾತ್ರ ಸಿಗಲಿದೆ.

ಸಾಲದ್ದಕ್ಕೆ ಕರ್ನಾಟಕ, ತೆಲಂಗಾಣ, ಮಿಜೋರಾಂಗಳಿಗೆ ಮಂಜೂರಾಗಿದ್ದ 5,495 ಕೋಟಿ ರೂ. ವಿಶೇಷ ನಿಧಿಯನ್ನು ಕೂಡ ವಿತ್ತ ಸಚಿವೆ ತಡೆದಿದ್ದಾರೆ. ಎಥೆನಾಲ್‌ ತಯಾರಿಕೆಗಾಗಿ 26 ರೂ.ಗಳಿಗೆ ಅಕ್ಕಿ ನೀಡುವ ಕೇಂದ್ರ ಸರಕಾರವು ನಾವಿಲ್ಲಿ ಬಡವರಿಗೆ ಹಂಚಲು ಕೆ.ಜಿ.ಗೆ 34 ರೂ.ಗಳಂತೆ ಕೇಳಿದರೂ ಕೊಡಲಿಲ್ಲ ಎಂದು ಹರಿಹಾಯ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next