Advertisement

ಮಳೆ ಪರಿಹಾರ; ಆಯೋಗದ ಅನುಮತಿ ಬೇಕು: ವಿಪಕ್ಷಗಳ ಟೀಕೆಗೆ ಸಿಎಂ

11:40 AM Nov 21, 2021 | Team Udayavani |

ಬೆಂಗಳೂರು : ಮಳೆ ಹಾನಿಯ ಕುರಿತು, ಇವತ್ತು(ಭಾನುವಾರ) ಸಂಜೆ ಅಧಿಕಾರಿಗಳು ಕೊಟ್ಟಿರುವ ವರದಿ, ಪರಿಹಾರದ ಬಗ್ಗೆ  ಸಭೆಯಲ್ಲಿ ಚರ್ಚೆ ನಡೆಸುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

Advertisement

ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕೆಲ ಸಚಿವರು ಜಿಲ್ಲೆಗಳಲ್ಲಿದಾರೆ, ಜಿಲ್ಲೆಗಳಿಗೆ ಹೋಗಲು ಚುನಾವಣಾ ಆಯೋಗದ ಅನುಮತಿ ಬೇಕು. ನಿನ್ನೆ ಸಿಎಸ್ ಮೂಲಕ ಆಯೋಗಕ್ಕೆ ಅನುಮತಿ ಕೇಳಿದ್ದೇವೆ. ಆಯೋಗ ಅನುಮತಿ ಕೊಟ್ಟರೆ ಎಲ್ಲ ಸಚಿವರೂ ಜಿಲ್ಲೆಗಳಿಗೆ ಹೋಗುತ್ತಾರೆ ಎಂದರು.

ಅಕಾಲಿಕ ಮಳೆಯಾಗುತ್ತಿದ್ದು, ದಕ್ಷಿಣ, ಉತ್ತರ ಒಳನಾಡು, ಕರಾವಳಿಗಳಲ್ಲಿ ವ್ಯಾಪಕ ಮಳೆ ಆಗಿದೆ.
ಕಳೆದ ಮೂರು ದಿನಗಳಲ್ಲಿ ಬೆಳೆ ಹಾನಿ, ರಸ್ತೆ ಹಾನಿ, ಕೆಲವು ಸಾವು ಆಗಿದೆ. ಜುಲೈ, ಆಗಸ್ಟ್, ಸೆಪ್ಟೆಂಬರ್ ನಲ್ಲಿ 3 ಲಕ್ಷ ರೈತರ ಕೃಷಿ ಬೆಳೆ ಹಾನಿಯಾಗಿತ್ತು. 130 ಕೋಟಿ ಬೆಳೆ ಪರಿಹಾರ ಬಾಕಿ ಇತ್ತು, ಮೊನ್ನೆ ಅದನ್ನು ಕೊಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಬೆಂಗಳೂರಿನ ಮೇಲೆ ವಿಶೇಷ ಕಾಳಜಿ ಇದೆ

ನಾನೂ ಕೂಡಾ ಹಲವು ಕಡೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದೇನೆ, ಮುಂದೆಯೂ ಹೋಗುತ್ತೇನೆ. ಮಳೆ ಮುಗಿದ ಮೇಲೆ ದುರಸ್ತಿ ಕಾಮಗಾರಿಗಳನ್ನು ನಡೆಸುತ್ತೇವೆ ಎಂದು ವಿಪಕ್ಷಗಳ ಟೀಕೆಗೆ ಸಿಎಂ ಪ್ರತಿಕ್ರಿಯೆ ನೀಡಿದರು.

Advertisement

ಬಿಡಿಎಯನ್ನು ಒಂದು ಸಲ ಸ್ವಚ್ಛ ಮಾಡಿ ಮುಖ್ಯವಾಹಿನಿಗೆ ತರುತ್ತೇವೆ

ನಮ್ಮ ಸರ್ಕಾರ ಯಾವುದೇ ರೀತಿಯ ಭ್ರಷ್ಟಾಚಾರ ಕ್ಕೆ ಅವಕಾಶ ಕೊಡುವುದಿಲ್ಲ ಅಂತ ಹಿಂದೆಯೇ ಹೇಳಿದ್ದೇವೆ. ಎಸಿಬಿ ದಾಳಿ ಬಳಿಕ ಅವರು ಕೊಡುವ ವರದಿ, ಶಿಫಾರಸು ಮೇರೆಗೆ ಕ್ರಮ ತೆಗೆದುಕೊಳ್ಳುತ್ತೇವೆ. ಬಿಡಿಯಲ್ಲಿ ಯಾರನ್ನೂ ರಕ್ಷಿಸುವ ಕೆಲಸ ಮಾಡುವುದಿಲ್ಲ. ಬಿಡಿಎ ಭ್ರಷ್ಟಾಚಾರಗಳ ಬಗ್ಗೆ ವಿಶ್ವನಾಥ್ ಅವರೂ ನನಗೆ ಹೇಳಿದ್ದರು.ಯಾವುದೇ ಅಧಿಕಾರಿ ತಪ್ಪಿತಸ್ಥ ಇದ್ದರೂ ಕ್ರಮ ಖಚಿತ. ಬಿಡಿಎ ಅನ್ನು ಒಂದು ಸಲ ಸ್ವಚ್ಛ ಮಾಡಬೇಕು, ಮುಖ್ಯವಾಹಿನಿಗೆ ತರುವ ವ್ಯವಸ್ಥೆ ಮಾಡಬೇಕು. ಬಿಡಿಎ ಮೂಲಕ‌ ನಾಗರೀಕ ಸೇವೆ ಸಮರ್ಪಕವಾಗಿ ಸಿಗುವ ಕೆಲಸ ಮಾಡುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next