Advertisement
ಈ ಕುರಿತು ಮಾಧ್ಯಮಗಳಿಗೆ ಲಿಖಿತ ಹೇಳಿಕೆ ನೀಡಿರುವ ಅವರು, ಪಂಚಮಸಾಲಿ ಸಮುದಾಯಕ್ಕೆ ಅನ್ಯಾಯವಾಗಿದೆ ಎನ್ನುವ ತಮ್ಮ ಧ್ವನಿಯ ಹಿಂದೆ ಯತ್ನಾಳ್ ಅವರೂ ಇದ್ದಾರೆ. ಯತ್ನಾಳ್ ನಮ್ಮ ಸಮುದಾಯದ ಮತ್ತು ಬಿಜೆಪಿಯ ಹಿರಿಯ ನಾಯಕರು. ಅಟಲ್ ಬಿಹಾರಿ ವಾಜಪೇಯಿ ಜತೆ ಸಂಪುಟ ಸಚಿವರಾಗಿದ್ದವರು. ಇಪ್ಪತ್ತು ವರ್ಷಗಳ ಹಿಂದೆಯೇ ಕೇಂದ್ರ ನಾಯಕರಾಗಿದ್ದವರು. ಇಂದು ಅವರು ತಾಲೂಕು ಮಟ್ಟದ ನಾಯಕರಾಗಿರುವುದು ನೋವಿನ ಸಂಗತಿ ಎಂದರು.
ಬಾಗಲಕೋಟೆಯಲ್ಲಿ ಲಡ್ಡು ಮುತ್ಯಾ ಎಂಬ ಮಹಾನ್ ಸಂತರಿದ್ದರು. ಅವರ ವಿಶೇಷತೆಯೆಂದರೆ ಅವರು ಯಾರಿಗೆಲ್ಲ ಬಯ್ಯುತ್ತಿದ್ದರೋ, ಹೊಡೆಯುತ್ತಿದ್ದರೋ ಅವರಿಗೆಲ್ಲ ಒಳ್ಳೆಯದೇ ಆಗುತ್ತಿತ್ತು. ಅದೇ ರೀತಿ ಯತ್ನಾಳ್ ಮುತ್ಯಾ ಅವರು ಯಾರಿಗೆಲ್ಲ ಟೀಕೆ ಟಿಪ್ಪಣಿ ಮಾಡಿದ್ದಾರೋ ಅವರೆಲ್ಲರಿಗೂ ಒಳ್ಳೆಯದೇ ಆಗಿದೆ ಎಂದು ವಚನಾನಂದ ಶ್ರೀಗಳು ತಿಳಿಸಿದ್ದಾರೆ. ಯಡಿಯೂರಪ್ಪ, ವಿಜಯೇಂದ್ರ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷವನ್ನು ಯತ್ನಾಳ್ ಹಿಗ್ಗಾಮುಗ್ಗಾ ಟೀಕಿಸಿದ್ದಾರೆ. ಎಲ್ಲರಿಗೂ ಒಳ್ಳೆಯ ಸ್ಥಾನಮಾನ ದೊರಕಿದೆ. ಆದ್ದರಿಂದ ಯತ್ನಾಳ್ ಇನ್ನೂ ಹೆಚ್ಚೆಚ್ಚು ಟೀಕೆ ಮಾಡಬೇಕು. ಅದರಿಂದ ನಮ್ಮ ಪೀಠ, ಸಮುದಾಯಕ್ಕೆ ಒಳ್ಳೆಯದಾಗುತ್ತದೆ ಎಂಬ ಭಾವನೆ ನಮ್ಮದಾಗಿದೆ ಎಂದಿದ್ದಾರೆ.