ಕೋವಿಡ್ ಬಹುತೇಕ ಎಲ್ಲರ ಬದುಕನ್ನು ಕತ್ತಲ ಕೂಪಕ್ಕೆ ದೂಡಿದೆ. ನೆಮ್ಮದಿಯ ನೆರಳನ್ನು ಮರೆಮಾಚಿದ. ಇಂಥ ಸಂದರ್ಭದಲ್ಲಿ ನಡೆದ ಕೆಲವೊಂದು ಆಶದಾಯಕ,ಆಶ್ರಯದಾಯಕ ಅಂಶಗಳು,ಘಟನೆಗಳು, ಸನ್ನಿವೇಶಗಳು ನಮ್ಮ ಮುಂದೆ ಇವೆ.
ಕೋವಿಡ್ ನಿಯಂತ್ರಣದಲ್ಲಿ ಸರ್ಕಾರದೊಂದಿಗೆ ಸಹಕಾರವೇ ನಮ್ಮ ಧ್ಯೇಯವಾಗಬೇಕು ವಿನಃ ಯಾವ ಉಡಾಫೆತನವೂ ಅಲ್ಲ. ಇತ್ತೀಚೆಗೆ ಕೇರಳದಲ್ಲಿ ಕೋವಿಡ್ ವ್ಯಾಕ್ಸಿನ್ ಚಾಲೆಂಜ್ ಗಾಗಿ ಬೀಡಿ ಕಟ್ಟಿ ವರ್ಷಾನುಗಟ್ಟಲೆಯಿಂದ ಉಳಿಸಿಕೊಂಡಿದ್ದ ಹಣವನ್ನು ವೃದ್ಧರೊಬ್ಬರು ಕೋವಿಡ್ ನಿಧಿಗಾಗಿ ದಾನವಾಗಿ ನೀಡಿದ್ದನು ನೀವು ಕೇಳಿರಬಹುದು. ಸದ್ಯ ಅದೇ ರೀತಿಯ ದಾನದ ಕತೆ ತಮಿಳುನಾಡಿನ ಮದುರೈಯಲ್ಲಿ ಕಂಡು ಬಂದಿದೆ.
ಹರೀಶ್ ವರ್ಮಾನ್. ಏಳು ವರ್ಷದ ಹುಡುಗ ಅಪ್ಪ ಅಮ್ಮನೊಂದಿಗೆ ಆಟ. ಚುರುಕು ಬುದ್ಧಿಯ ಮಾತು. ಈ ವಯಸ್ಸಿನಲ್ಲಿ ನಾವೂ ಕೂಡ ಮಾಡಿದ್ದಿಷ್ಟೇ ಆದರೆ ಹರೀಶ್ ವಯಸ್ದಸಿಗೂ ಮೀರಿದ ಕಾರ್ಯವೊಂದನ್ನಿ ಮಾಡಿದ್ದಾನೆ.
ಎಲೆಕ್ಟ್ರಾನಿಕ್ ಕೆಲಸ ಮಾಡುವ ಹರೀಶ್ ನ ಅಪ್ಪ ,ಮಗನ ಸಣ್ಣ ವಯಸ್ಸಿನ ಆಸೆ ಸೈಕಲ್ ಬೇಕೆನ್ನುವುದಕ್ಕೆ ದಿನಂಪ್ರತಿ ಎಷ್ಟು ಆಗುತ್ತದೋ ಅಷ್ಟು ಹಣವನ್ನು ಮಗನ ಹಟದಿಂದ ಹರೀಶ್ ನ ಉಳಿತಾಯ ಡಬ್ಬಿಯಲ್ಲಿ ಹಾಕುತ್ತಿದ್ದರು. ಹರೀಶ್ ಅಪ್ಪ ಕೊಟ್ಟ ಒಂದೊಂದು ಪೈಸೆಯನ್ನೂ ತುಂಬಾ ಜಾಗ್ರತೆಯಿಂದ ಜಮೆ ಮಾಡಿ ಇಡುತ್ತಿದ್ದ.
ತಮಿಳುನಾಡಿನಲ್ಲಿ ದಿನೇ ದಿನೇ ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಕೋವಿಡ್ ನಿಧಿಗೆ ಗಣ್ಯರಿಂದ- ಸಾಮಾನ್ಯರಿಂದ ಹಣ ಸಂಗ್ರಹವಾಗಲು ಶುರುವಾಗುತ್ತದೆ.
ಇದೇ ವೇಳೆಯಲ್ಲಿ ಹರೀಶ್ ವರ್ಮಾನ್ ಮನಸ್ಸಿನಲ್ಲಿ ಬಂದ ಯೋಚನೆ ಎಂಥವವರನ್ನೂ ಒಮ್ಮೆ ಅಚ್ಚರಿಗೊಳಿಸಬಹುದು. ಸೈಕಲ್ ತುಳಿದು ಮನೆ ಪಕ್ಕದ ಬೀದಿ ಸುತ್ತ ಬೇಕು, ಬೀಳುವ ಘಳಿಗೆಯಲ್ಲಿ ಅಮ್ಮ ಅಪ್ಪ ನನ್ನನ್ನು ಹಿಡಿಯಬೇಕೆನ್ನುವ ಅಪಾರ ಆಸೆಯನ್ನು ಹೊಂದಿದ್ದ ಹುಡುಗ ಹರೀಶ್. ತನ್ನ ಮೆಚ್ಚಿನ ಆಸೆಯನ್ನು ಬದಿಗಿಟ್ಟು ತಾನು ಅಪ್ಪನಿಂದ ಪಡೆದು, ಒಟ್ಟು ಮಾಡಿದ ಹಣವನ್ನು ಮುಖ್ಯಮಂತ್ರಿ ಕೋವಿಡ್ ನಿಧಿಗೆ ನೀಡಲು ಮುಂದಾಗುತ್ತಾರೆ.!
ಹರೀಶ್ ಎರಡು ವರ್ಷಗಳಿಂದ ಒಟ್ಟು ಮಾಡಲು ಶುರು ಮಾಡಿದ ಹಣವನ್ನು ಕೋವಿಡ್ ನಿಧಿಗೆ ಕೊಡುತ್ತಾರೆ. ಹಣದ ಡಬ್ಬಿಯೊಂದಿಗೆ ಹರೀಶ್ ಮುಖ್ಯಮಂತ್ರಿ ಸ್ಟ್ಯಾಲಿನ್ ಅವರಿಗೆ ಒಂದು ಕೈಬರಹವನ್ನು ಬರೆದು ಅದರಲ್ಲಿ ಈ ಹಣವನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಬಳಸಿ ಎಂದು ಕೇಳಿ ಕೊಳ್ಳುತ್ತಾರೆ.
ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸ್ಟ್ಯಾಲಿನ್. ಹರೀಶ್ ಗೆ ತನ್ನ ಶಾಸಕ ಹಾಗೂ ಸಂಗಡಿಗರ ಮೂಲಕ ಇಷ್ಟದ ಸೈಕಲ್ ನ್ನು ಉಡುಗೊರೆ ರೂಪದಲ್ಲಿ ಕೊಟ್ಟು ಜನರಿಗೆ ಮಾದರಿಯಾದ ಹರೀಶ್ ನ ಕಾರ್ಯವನ್ನು ಟ್ವೀಟ್ ಮಾಡಿ ಪ್ರಶಂಸೆ ಮಾಡುತ್ತಾರೆ.
ಸದ್ಯ ಈ ಸುದ್ದು ವೈರಲ್ ಆಗಿದ್ದು, ಹರೀಶ್ ಮನ ಮೆಚ್ಚುವ ದಾನ ಕಾರ್ಯವನ್ನು ಜನರು ಕೊಂಡಾಡುತ್ತಿದ್ದರೆ, ಸ್ಟ್ಯಾಲಿನ್ ಶುದ್ಧ ಮನಸ್ಸನ ವ್ಯಕ್ತಿತ್ವವನ್ನು ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
– ಸುಹಾನ್ ಶೇಕ್