Advertisement

ಕಲ್ಲು ತೂರಾಟ:4,327 ಮಂದಿಯ ಪ್ರಕರಣ ಹಿಂತೆಗೆಸಿದ ಸಿಎಂ ಮುಫ್ತಿ

09:49 AM Nov 30, 2017 | |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು  ರಾಜ್ಯದ ವಿವಿಧೆಡೆ ದಾಖಲಾಗಿದ್ದ ಬರೋಬ್ಬರಿ 4,327 ಮಂದಿಯ ವಿರುದ್ಧದ ಕಲ್ಲು ತೂರಾಟ ಪ್ರಕರಣಗಳನ್ನು ಬುಧವಾರ  ಹಿಂತೆಗೆಸಿದ್ದಾರೆ.  

Advertisement

ಡಿಜಿಪಿ  ನೇತೃತ್ವದ ಉನ್ನತ ಶಕ್ತಿಯ ಸಮಿತಿ ಸಭೆಯ ಬಳಿಕ ಈ ವಿದ್ಯಮಾನ ನಡೆದಿದೆ ಎಂದು ಸಿಎಂ ಮುಫ್ತಿ ಕಚೇರಿ ಮೂಲಗಳು ತಿಳಿಸಿವೆ. 

2008 ರಿಂದ 2014 ರ ವರೆಗೆ ಯುವಕರ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನು ಹಿಂಪಡೆದುಕೊಳ್ಳಲು ಪ್ರಕ್ರಿಯೆ ಪ್ರಾರಂಭಿಸಲು ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. 

ಕೇಂದ್ರ ಸರ್ಕಾರದ  ವಿಶೇಷ ಪ್ರತಿನಿಧಿ ದಿನೇಶ್ವರ್ ಶರ್ಮಾ ಅವರ ಸಲಹೆಯನ್ನು ಪರಿಗಣಿಸಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಮುಫ್ತಿ ಅಧಿಕಾರಕ್ಕೆ ಬಂದ ತಿಂಗಳೊಳಗಾಗಿ 634 ಯುವಕರ ವಿರುದ್ಧ ದಾಖಲಾಗಿದ್ದ 104 ಪ್ರಕರಣಗಳನ್ನು ಹಿಂತೆಗೆಸಿಕೊಂಡಿದ್ದರು ಎಂದು ತಿಳಿದು ಬಂದಿದೆ. 

Advertisement

2015 ರ ನಂತರ ದಾಖಲಾದ ಕಲ್ಲು ತೂರಾಟ ಪ್ರಕರಣಗಳ ಬಗ್ಗೆ ವಿವರ ನೀಡಲು ಪೊಲೀಸ್‌ ಅಧಿಕಾರಿಗಳಿಗೆ ಮುಫ್ತಿ ಸೂಚನೆ ನೀಡಿದ್ದಾರೆ. 

‘ಈ ಪ್ರಯತ್ನವು ಯುವಕರ  ಜೀವನವನ್ನು ಪುನಃ ನಿರ್ಮಿಸಲು ಅವಕಾಶವನ್ನು ಒದಗಿಸುತ್ತದೆ’ ಎಂದು ಮುಫ್ತಿ ಟ್ವೀಟ್‌ ಮಾಡಿದ್ದಾರೆ. 
ಕಳೆದ ವರ್ಷ ಜುಲೈ ತಿಂಗಳಿನಿಂದ ಇಲ್ಲಿಯವರೆಗೆಬರೋಬ್ಬರಿ  11,500 ಕಲ್ಲುತೂರಾಟ ಪ್ರಕರಣಗಳು ದಾಖಲಾಗಿವೆ. 

Advertisement

Udayavani is now on Telegram. Click here to join our channel and stay updated with the latest news.

Next