Advertisement
ರೈತರ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ, ಕಬ್ಬಿನ ತೂಕದಲ್ಲಿ ಮೋಸ ಮಾಡುವುದನ್ನು ಪತ್ತೆ ಹಚ್ಚಲು ಅಧಿಕಾರಿ ತಂಡ ರಚಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಕಬ್ಬಿನ ತೂಕ ಮಾಡುವ ಹದಿನೈದು ದಿನದಲ್ಲಿ ಪ್ರತಿಯೊಂದು ಕಾರ್ಖಾನೆಯೂ ಆಧುನಿಕ ತೂಕದ ಯಂತ್ರ ಅಳವಡಿಸಿ ಕೊಳ್ಳಲು ಸೂಚಿಸಿರುವುದಾಗಿ ತಿಳಿಸಿದ್ದಾರೆ.
ಒಪ್ಪಂದದಂತೆ ರೈತರಿಗೆ ಬಾಕಿ ಕೊಡಿಸಲು ಸರ್ಕಾರ ಬದಟಛಿವಾಗಿದೆ. ರೈತರ ಪ್ರಕಾರ 450 ಕೋಟಿ ರೂ.ಬಾಕಿ ಇದೆ. ಅದನ್ನು ಇನ್ನೆರಡು ದಿನದಲ್ಲಿ ಕಾರ್ಖಾನೆ ಮಾಲೀಕರ ಜೊತೆ ಸಭೆ ನಡೆಸಿ ರೈತರಿಗೆ ಕೊಡಿಸುವುದಾಗಿ ತಿಳಿಸಿದರು. ಈ ವರ್ಷದ ಹಂಗಾಮಿನಲ್ಲಿ ಕೇಂದ್ರ ಸರ್ಕಾರ ಪ್ರತಿ ಟನ್ ಕಬ್ಬಿಗೆ ನಿಗದಿ ಮಾಡಿರುವ ಎಫ್ಆರ್‌ಪಿ ದರ 2750 ರೂ.ಯನ್ನು ಮೊದಲ ಕಂತಿನಲ್ಲಿಯೇ ನೀಡಬೇಕು ಎಂದು ಸೂಚಿಸಲಾಗಿದೆ. ಬಾಕಿ ಹಣ ಕೊಡಿಸಲು ಸರ್ಕಾರದ ಕಾನೂನು ಪ್ರಕಾರ ಕಾರ್ಖಾನೆ ಮಾಲೀಕರಿಂದ ವಸೂಲಿ ಮಾಡಲಾಗುವುದು. ರೈತರಿಗೆ ಬಾಕಿ ಹಣ ಕೊಡಿಸುವ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಂಡಿದೆ. ರೈತರ ಹಣ ಬಾಕಿ ಉಳಿಸಿಕೊಂಡಿರುವ ಕಾರ್ಖಾನೆಗಳಿಂದ ಮಾಹಿತಿ ಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರೈತರು ಎಕ್ಸ್‌ಫಿಲ್ಡ್ ಪ್ರಕಾರ ದರ ನೀಡುವಂತೆ ಮನವಿ ಮಾಡಿದ್ದಾರೆ. ಈ ಕುರಿತು ಕಾರ್ಖಾನೆ ಮಾಲೀಕರು ಹಾಗೂ ರೈತರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವಂತೆ ಸಕ್ಕರೆ ಆಯುಕ್ತರಿಗೆ ಸೂಚಿಸಲಾಗಿದೆ. ರೈತರ ಹಿತ ದೃಷ್ಠಿಯಿಂದ ಕಾನೂನಿನಲ್ಲಿರುವ ಲೋಪಗಳನ್ನು
ಸರಿಪಡಿಸಿ, ಸಕ್ಕರೆ ಕಾರ್ಖಾನೆ ಮಾಲೀಕರನ್ನು ನಿಯಂತ್ರಿಸಲು ಸೂಕ್ತ ತಿದ್ದುಪಡಿ ತರಲಾಗುವುದು ಎಂದು ಹೇಳಿದರು.
Related Articles
● ಕುರಬೂರು ಶಾಂತಕುಮಾರ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ
Advertisement
ಮುಖ್ಯಮಂತ್ರಿ ಸಭೆಯಲ್ಲಿ ಮಾತು ಕೊಟ್ಟಂತೆ ಕಾರ್ಖಾನೆ ಮಾಲೀಕರಿಂದ ಬಾಕಿ ಹಣ ಕೊಡಿಸಬೇಕು. ಬೆಳಗಾವಿ ಅಧಿವೇಶನಕ್ಕೂ ಮೊದಲೇ ರೈತರ ಮತ್ತೂಂದು ಸಭೆ ಕರೆದು ಸಮಸ್ಯೆಗಳನ್ನು ಬಗೆಹರಿಸಬೇಕು. ಇಲ್ಲದಿದ್ದರೆ, ಅಧಿವೇಶನ ಸಂದರ್ಭದಲ್ಲಿ ಮತ್ತೆ ಪ್ರತಿಭಟನೆ ಅನಿವಾರ್ಯವಾಗುತ್ತದೆ.● ಸುಭಾಸ್, ಶಿರಬೂರ್ ರೈತ ಮುಖಂಡ