ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಫಿಟ್ನೆಸ್ ಚಾಲೆಂಜ್‌ಗೆ ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಉತ್ತರ ನೀಡಿದ್ದಾರೆ.
ಪ್ರಧಾನಿ ಮೋದಿ ಅವರು ಕುಮಾರಸ್ವಾಮಿ ಅವರ ಖಾಸಗಿ ಟ್ವೀಟರ್ ಖಾತೆಗೆ ಟ್ಯಾಗ್ ಮಾಡಿದ್ದರೆ, ಎಚ್‌ಡಿಕೆ ಸಿಎಂ ಆಫ್ ಕರ್ನಾಟಕ ಖಾತೆಯಿಂದ ಉತ್ತರ ನೀಡಿದ್ದಾರೆ.
ಟ್ವೀಟ್‌ನಲ್ಲಿ ”ನನಗೆ ಗೌರವವಿದೆ, ನನ್ನ ಆರೋಗ್ಯದ ಕುರಿತು ಕಾಳಜಿ ವಹಿಸಿದ್ದಕ್ಕೆ ಧನ್ಯವಾದಗಳು, ದೇಹದ ಆರೋಗ್ಯಕ್ಕೆ ದೈಹಿಕ ಕ್ಷಮತೆ ಅತ್ಯವಶ್ಯಕ ಮತ್ತು ಅದು ಸಹಕಾರಿಯಾಗುತ್ತದೆ. ನಾನು ದಿನನಿತ್ಯ ಯೋಗ ಮತ್ತು ಟ್ರೆಡ್‌ಮಿಲ್ ಮಾಡುತ್ತಿದ್ದೇನೆ.ಜೊತೆಗೆ ರಾಜ್ಯದ ಅಭಿವೃದ್ಧಿ ಫಿಟ್ನೆಸ್ ಕುರಿತಾಗಿ ನಾನು ಹೆಚ್ಚು ಗಮನ ಹರಿಸಿದ್ದು, ಇದಕ್ಕಾಗಿ ನಿಮ್ಮ ಬೆಂಬಲ ಯಾಚಿಸುತ್ತೇನೆ” ಎಂದು ಬರೆದಿದ್ದಾರೆ.
ಹಮ್ ಫಿಟ್ ತೋ ಇಂಡಿಯಾ ಫಿಟ್ ಚಾಲೆಂಜ್‌ನಲ್ಲಿ ಪ್ರಧಾನಿ ಮೋದಿ ಅವರು ಕುಮಾರಸ್ವಾಮಿ ಅವರೊಂದಿಗೆ ಕಾಮನ್‌ವೆಲ್ತ್ ಬಂಗಾರ ವಿಜೇತೆ ಟಿಟಿ ಆಟಗಾರ್ತಿ ಮಾನಿಕಾ ಬಾತ್ರಾ ಮತ್ತು 40 ವರ್ಷ ದಾಟಿದ ದಿಟ್ಟ ಐಪಿಎಸ್ ಅಧಿಕಾರಿಗಳಿಗೆ ಫಿಟ್‌ನೆಸ್ ವಿಡಿಯೋ ಟ್ವೀಟ್ ಮಾಡುವಂತೆ ಸವಾಲು ಹಾಕಿದ್ದಾರೆ.