ಪುತ್ರ ನಿಖೀಲ್ ಪ್ರಯಾಣಿಸಿದ ಕೆಲವು ತಾಸುಗಳ ಅನಂತರ ಸಿಎಂ ಮತ್ತು ಪತ್ನಿ ಅನಿತಾ ಕುಮಾರಸ್ವಾಮಿ ಮಂಡ್ಯ ಕಡೆಗೆ ಪ್ರಯಾಣ ಬೆಳೆಸಿದರು.
Advertisement
ಮುಖ್ಯಮಂತ್ರಿಗಳು ಮದ್ದೂರಿನಲ್ಲಿ ಬೀಗರ ಔತಣ ಮುಗಿಸಿ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಸಚಿವ ಸಾ.ರಾ. ಮಹೇಶ್ ತಿಳಿಸಿದರು. ಇಂದು ಕೂಡ ಸಿಎಂ ಎಚ್‌ಡಿಕೆ ಮಾಧ್ಯಮಗಳೊಂದಿಗೆ ಮಾತನಾಡಲಿಲ್ಲ.
ಸಿಎಂ ನಿರ್ಗಮನದ ಬಳಿಕ ಮಾಧ್ಯಮಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಸಾ.ರಾ. ಮಹೇಶ್, ಜೆಡಿಎಸ್ ನಾಯಕರಿಂದಲೇ ಟಿವಿ ಮಾಧ್ಯಮಗಳಿಗೆ ಟಿಆರ್‌ಪಿ ಹೆಚ್ಚುತ್ತಿದೆ. ಕೆಲವು ಮಾಧ್ಯಮಗಳಿಗೆ ಜೆಡಿಎಸ್ ನಾಯಕರ ಸುದ್ದಿ ಬಿಟ್ಟರೆ ಬೇರೆ ಇಲ್ಲ. ಕೆಲವು ಮಾಧ್ಯಮಗಳು ಸಿಎಂ ತಂಗಿದ್ದ ರೆಸಾರ್ಟ್‌ನ ದರವನ್ನು ಮನಸ್ಸಿಗೆ ತೋಚಿದಂತೆ ಪ್ರಸಾರಿಸುತ್ತಿವೆ. ಆದರೆ ವಾಸ್ತವ ಬೇರೆಯೇ. ಬೇಕಿದ್ದರೆ ಆನ್‌ಲೈನ್‌ನಲ್ಲಿ ಟಾರಿಫ್ ತೆಗೆದು ನೋಡಿ ಎಂದರು.