Advertisement

ಸಚಿವ ಸಂಪುಟ ರಚನೆಯ ವಿಚಾರದಲ್ಲಿ ಸಿಎಂ ಗೆ  ಪರಮಾಧಿಕಾರ: ಡಿ.ವಿ ಸದಾನಂದಗೌಡ

05:40 PM Jan 02, 2021 | Team Udayavani |

ಚಿತ್ರದುರ್ಗ: ಸಚಿವ ಸಂಪುಟ ರಚನೆಯ ವಿಚಾರದಲ್ಲಿ  ಸಿಎಂ ಅವರಿಗೆ  ಪರಮಾಧಿಕಾರ ಇರುತ್ತದೆ, ಅವರ ನಿರ್ಣಯವೇ ಅಂತಿಮ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಹೇಳಿಕೆ ನೀಡಿದ್ದಾರೆ.

Advertisement

ಚಿತ್ರದುರ್ಗದಲ್ಲಿ ಸುದ್ದಿಗಾರಗೊಂದಿಗೆ ಮಾತನಾಡಿದ ಅವರು ಕ್ರಿಕೆಟ್ ಪಂದ್ಯದಲ್ಲಿ  ಕ್ಯಾಪ್ಟನ್ ಆದವರು ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್, ವಿಕೆಟ್ ಕೀಪರ್ ಗಳನ್ನು  ನೇಮಿಸುತ್ತಾರೆ. ಅದೇ ರೀತಿಯಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಆದವರು ಸಚಿವ ಸಂಪುಟವನ್ನು ರಚಿಸುತ್ತಾರೆ ಎಂದರು.

ಬೇರೆ ಪಕ್ಷಕ್ಕೆ ರಾಜೀನಾಮೆ ನೀಡಿ ತಮ್ಮ  ಪಕ್ಷಕ್ಕೆ ಬಂದವರಿಗೆ ಹೆಚ್ಚಿನ ಆದ್ಯತೆ ಹಿನ್ನೆಲೆಯಲ್ಲಿ ಮಾತನಾಡಿದ ಡಿ.ವಿ ಸದಾನಂದಗೌಡ, ನಮ್ಮ ಸರ್ಕಾರ ಅಧಿಕಾರಕ್ಕೆ ಬರಲು ಕೆಲವರು ಬೇರೆ ಪಕ್ಷದಿಂದ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಆದರೆ ಅದು ತಿಪ್ಪಾರೆಡ್ಡಿ ಸೇರಿ ನಮ್ಮ ಪಕ್ಷದ ಹಲವರಿಗೆ ತೊಂದರೆ ಆಗಿದೆ ಎಂದರು.

ಸಂಕ್ರಾಂತಿ, ಯುಗಾದಿ, ದೀಪಾವಳಿ ಪ್ರತಿವರ್ಷ ಬರುತ್ತದೆ.ಹಾಗೇ ದಿನವೂ ಮಾತಾಡುವ ಚಾಳಿಯ ಯತ್ನಾಳ್ ಮಾತಾಡುತ್ತಲೇ‌ ಇರುತ್ತಾರೆ. ಹಾಗಾಗಿ ಅವರಿಗೆ ಉತ್ತರ ಕೊಡುವ ಅಗತ್ಯ ಇಲ್ಲ ಎಂದ ಅವರು ಯತ್ನಾಳ್ ಅವರೇ ಎಲ್ಲಾ ಮಾಡುತ್ತಿದ್ದರೆ ಏಕೋಪಧ್ಯಾಯ ಶಾಲೆ ಮುಖ್ಯೋಪಾದ್ಯಾಯ ಆಗುತ್ತಿದ್ದರು ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ:ಕೇವಲ ದೆಹಲಿ ಮಾತ್ರವಲ್ಲ ಇಡೀ ದೇಶಾದ್ಯಂತ ಕೋವಿಡ್ 19 ಲಸಿಕೆ ಉಚಿತ: ಸಚಿವ ಹರ್ಷ್ ವರ್ಧನ್

Advertisement

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಹಿನ್ನೆಲೆ ಕುರಿತು ಮಾತನಾಡಿ, ಜೆಡಿಎಸ್ ಪಕ್ಷ ಬಿಜೆಪಿ ಜೊತೆ ಸೇರುತ್ತದೋ ಬಿಡುತ್ತದೋ  ಗೊತ್ತಿಲ್ಲ. ನಾವು ನಮ್ಮ ವಿಚಾರ ತತ್ವ ಒಪ್ಪಿ ಬಂದವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದೇವೆ. ಕೇಂದ್ರದ ವರಿಷ್ಠರು ಮಾತುಕತೆ ನಡೆಸಿ ಯೆಸ್ ಎಂದರೆ ಆಗುತ್ತದೆ. ಆದರೆ ಈವರೆಗೆ ಜೆಡಿಎಸ್ ವಿಲೀನ ಪ್ರಸ್ತಾವನೆ ಕುರಿತು ಯಾವುದೇ ಚರ್ಚೆ ಆಗಿಲ್ಲ ಎಂದು ಸಿಎಂ ಹೇಳಿದ್ದಾರೆ.  ನಮ್ಮಲ್ಲಿ ಮಾತಾಡಿದಂತೆ ಜೆಡಿಎಸ್ ನಲ್ಲೂ ಸಹ ಕೆಲವರು ಮಾತಾಡುತ್ತಾರೆ. ಇಂಥ ವಿಚಾರಗಳಿಗೆ ಮಹತ್ವ ನೀಡುವ ಅಗತ್ಯ ಇಲ್ಲ ಎಂದು ಹೇಳಿದರು.

ಇದನ್ನೂ ಓದಿ:ಶಾಲೆಗಳ ಅಡುಗೆ ಸಹಾಯಕರ ಮೂರು ತಿಂಗಳ ಸಂಭಾವನೆ ಬಿಡುಗಡೆ: ಸುರೇಶ್ ಕುಮಾರ್

Advertisement

Udayavani is now on Telegram. Click here to join our channel and stay updated with the latest news.

Next