Advertisement

ಯರಗೋಳ್‌ ಯೋಜನೆ ತ್ವರಿತ ಅನುಷ್ಠಾನಕ್ಕೆ ಸಿಎಂ ಸೂಚನೆ

07:43 AM Jun 24, 2020 | Lakshmi GovindaRaj |

ಬೆಂಗಳೂರು: ಎತ್ತಿನಹೊಳೆ, ಕೆ.ಸಿ.ವ್ಯಾಲಿ, ಯರಗೋಳ್‌ ಯೋಜನೆ ತ್ವರಿತವಾಗಿ ಅನು ಷ್ಟಾನಗೊಳಿಸುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಎತ್ತಿನಹೊಳೆ ಯೋಜನೆ ಸಂಬಂಧ ಭೂ ಸ್ವಾಧೀನ ಸಮಸ್ಯೆ,  ಯರಗೋಳ್‌ ಯೋಜನೆಗೆ ಹಣಕಾಸು ಇಲಾಖೆ ಅನುಮತಿ, ಕೆ.ಸಿ.ವ್ಯಾಲಿ ಯೋಜನೆಯಡಿ 400 ಟಿಎಂಸಿ ಸಂಸ್ಕರಿತ ನೀರು ಪೂರೈಕೆಗೆ ಇರುವ ಅಡೆ ತಡೆ ನಿವಾರಿಸಬೇಕು. ಅಗತ್ಯ ಇರುವ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದ್ದಾರೆ.

Advertisement

ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಕೋಲಾರ ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗದ ಜತೆ ಚರ್ಚಿಸಿದ ಅವರು, ಮೂರು ಯೋಜನೆಗಳ ಪ್ರಗತಿಯ ಮಾಹಿತಿ ಪಡೆದು ಆದಷ್ಟು ಶೀಘ್ರ ಯೋಜನೆಗಳ ಅನುಷ್ಟಾನಗೊಳಿಸುವ ಭರವಸೆ  ನೀಡಿದರು. ಸಭೆಯಲ್ಲಿ ಚರ್ಚೆಯಾದ ವಿಷಯಗಳ ಬಗ್ಗೆ ಸುದ್ದಿಗಾರರ ಜತೆ ಮಾತನಾಡಿದ ವಿಧಾನಪರಿಷತ್‌ ಸದಸ್ಯ ನಸೀರ್‌ ಅಹಮದ್‌, ಎರಗೋಳ್‌ ಯೋಜನೆಗೆ ಹಣಕಾಸು ಇಲಾಖೆ ಅನುಮತಿ ಬೇಕಾಗಿದ್ದು ಅದರ ಬಗ್ಗೆ ಕ್ರಮ ಕೈಗೊಳ್ಳುವ  ಭರವಸೆ ದೊರೆತಿದೆ. ಕೆ.ಸಿ.ವ್ಯಾಲಿ ಯೋಜನೆಯಡಿ ಬೆಂಗಳೂರಿನಿಂದ 400 ದಶಲಕ್ಷ ಲೀಟರ್‌ ಸಂಸ್ಕರಿಸಿದ ನೀರು ಕೆರೆಗಳಿಗೆ ಹರಿಸಲು ಯೋಜನೆಯಡಿ ತಿಳಿಸಲಾಗಿತ್ತು.

ಆದರೆ, 284 ದಶಲಕ್ಷ ಲೀಟರ್‌ ಮಾತ್ರ ಹರಿಸಲಾಗುತ್ತಿದ್ದು ಉಳಿದ 116  ದಶಲಕ್ಷ ಲೀಟರ್‌ ಸೆಪ್ಟೆಂಬರ್‌ ವೇಳೆಗೆ ಹರಿಸಲು ಮುಖ್ಯಮಂತ್ರಿಯವರು ನಿರ್ದೇಶನ ನೀಡಿದ್ದಾರೆ. ಟಿಎಸ್‌ಪಿಗಳ ಸಾಮರ್ಥಯ ಹೆಚ್ಚಿಸಲು ಜಲಮಂಡಳಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು. ಎತ್ತಿನಹೊಳೆ ಯೋಜನೆ ಸಂಬಂಧ ವೆಚ್ಚ  ದುಪ್ಪಟ್ಟಾಗಿದ್ದು ಕೊರಟಗೆರೆ ಹಾಗೂ ದೊಡ್ಡಬಳ್ಳಾಪುರ ಭಾಗದಲ್ಲಿ ಭೂ ಸ್ವಾಧೀನ ಸಮಸ್ಯೆ ಎದುರಾಗಿದೆ. ಹೀಗಾಗಿ ಅದನ್ನು ನಿವಾರಿಸಿ ಯೋಜನೆಗಿರುವ ಅಡೆತಡೆ ನಿವಾರಿಸಲು ಮುಖ್ಯಮಂತ್ರಿಯವರು ಅಧಿಕಾರಿಗಳಿಗೆ ತಿಳಿಸಿದ್ದಾರೆಂದರು.

Advertisement

Udayavani is now on Telegram. Click here to join our channel and stay updated with the latest news.

Next