Advertisement

Shimoga ಗಲಾಟೆಗೆ ಸಿಎಂ, ಗೃಹ ಸಚಿವರ ಕುಮ್ಮಕ್ಕು ಕಾರಣ: ಶೋಭಾ ಕರಾಂದ್ಲಾಜೆ

12:11 PM Oct 03, 2023 | Team Udayavani |

ಚಾಮರಾಜನಗರ: ಶಿವಮೊಗ್ಗದ ರಾಗಿ ಗುಡ್ಡದಲ್ಲಿ ನಡೆದ ಗಲಭೆಗೆ ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ ಪರಮೇಶ್ವರ್ ಕಾರಣ ಎಂದು ಕೇಂದ್ರ ಸಚಿವೆ ಶೋಭಾ ಕರಾಂದ್ಲಾಜೆ ಆರೋಪಿಸಿದ್ದಾರೆ.

Advertisement

ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈದ್ ಮಿಲಾದ್ ಮೆರವಣಿಗೆ ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದೆ. ಔರಂಗಜೇಬನ ಖಡ್ಗ ಮೆರವಣಿಗೆ ಮಾಡುತ್ತಿದ್ದಾರೆ. ಆ ಖಡ್ಗದ ತುದಿಗೆ ರಕ್ತದ ಬಣ್ಣ ಹಾಕಿದ್ದಾರೆ. ಹಿಂದೂಗಳ ರಕ್ತ ಬೀಳುತ್ತದೆ ಎಂದು ಉರ್ದುವಿನಲ್ಲಿ ಬರೆದಿದ್ದಾರೆ ಎನ್ನುವ ಮಾಹಿತಿಯಿದೆ. ಮುಸಲ್ಮಾನ ಸಮಾಜದ ಮಾನಸಿಕತೆ ಏನು, ಅವರು ಏನು ಮಾಡಲು ಹೊರಟಿದ್ದಾರೆ. ಯಾಕೆ ಈ ರೀತಿ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಇಡೀ ಶಿವಮೊಗ್ಗವನ್ನು ಹಸಿರೀಕರಣ ಮಾಡಿದ್ದಾರೆ. ಅಖಂಡ ಸಾಮ್ರಾಜ್ಯ ಭಾರತವನ್ನು ಆಳಿದ ದೊರೆ ಔರಂಗಜೇಬ್ ಎಂದು ಬರೆದಿದ್ದಾರೆ. ಟಿಪ್ಪು – ಔರಂಗಜೇಬನ ಫೋಟೋ ಹಾಕಿದ್ದಾರೆ. ಅಂದರೆ ನಿಮ್ಮ ಆದರ್ಶ ಪುರುಷ ಯಾರು? ಹಿಂದೂಗಳ ಮರಣಹೋಮ ಮಾಡಿದವರನ್ನು ಪ್ರದರ್ಶನ ಮಾಡುವ ಕೆಲಸ ಮುಸ್ಲಿಮರು ಮಾಡುತ್ತಿದ್ದಾರೆ. ನಿಮ್ಮ ಆದರ್ಶ ಪುರುಷ ಮೊಹಮದ್ ಪೈಗಂಬರ್ ಆಗಿದ್ದರೆ ನಮಗೆ ಖುಷಿ. ನಿಮ್ಮ ಆದರ್ಶ ಪುರುಷ ಅಬ್ದುಲ್ ಕಲಾಂ ಆಗಬೇಕಿತ್ತು, ಆದರೆ ಟಿಪ್ಪು ಸುಲ್ತಾನ್ ಔರಂಗಜೇಬ್ ಆಗಿದ್ದಾರೆ. ಖಡ್ಗ ಪ್ರದರ್ಶನ ಮಾಡುವ ಮೂಲಕ ಸರ್ಕಾರ ಮತ್ತು ಹಿಂದೂಗಳನ್ನು ಹೆದರಿಸಲು ಹೊರಟಿದ್ದೀರಿ ಎಂದರು.

ಇದಕ್ಕೆಲ್ಲ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ್ ಪ್ರರಮೇಶ್ವರ್ ಕುಮ್ಮುಕ್ಕು ಇದೆ. ಹಿಂದೂಗಳ ಅಪಮಾನ ಮಾಡುವ ರೀತಿಯಲ್ಲಿ ರಾಜ್ಯದಲ್ಲಿ ಈದ್ ಮಿಲಾದ್ ನಡೆಯುತ್ತಿದೆ. ಶಿವಮೊಗ್ಗದ ಎಲ್ಲ ಮುಸಲ್ಮಾನರ ಕೈಯಲ್ಲಿ ಕಲ್ಲು, ತಲವಾರುಗಳಿದ್ದವು. ಅದನ್ನೆಲ್ಲ ಯಾಕೆ ಪೊಲೀಸರು ಗಮನಿಸಲಿಲ್ಲ. ಪೊಲೀಸರ ಕೈ ಕಟ್ಟಿಹಾಕಿದ್ದಾರೆ. ನಿಮಗೆ ಕೇವಲ ಮುಸಲ್ಮಾನ ಸಮಾಜದಿಂದ ಸರ್ಕಾರ ಅಧಿಕಾರಕ್ಕೆ ಬಂದಿರುವುದೇ? 136 ಸ್ಥಾನ ಬಂದಿದೆ ಎಂದು ಸಿದ್ದರಾಮಯ್ಯನವರಿಗೆ  ಶೋಭಾ ಕರಂದ್ಲಾಜೆ ಪ್ರಶ್ನೆ ಮಾಡಿದರು.

ಇದನ್ನೂ ಓದಿ:OMG2: ಅಕ್ಷಯ್‌ ಕುಮಾರ್‌ ʼಓ ಮೈ ಗಾಡ್‌ -2ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Advertisement

ನಮಗೆ ರಕ್ಷಣೆ ನೀಡುವುದು ಯಾರು? ಮನೆ ಮೇಲೆ ಕಲ್ಲು ತೂರಾಟ ಆಗಿದೆ. ಯಾಕೆ ಮುಸ್ಲಿಂ ಸಮಾಜ ಓಲೈಸುವ ಕೆಲಸ ಮಾಡುತ್ತಿದ್ದೀರಿ. ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದೀರಿ ಎಂದು ಕಿಡಿಕಾರಿದರು.

ಈ ಹಿಂದೆ ಕಾಂಗ್ರೆಸ್ ಆಡಳಿತ ಮಾಡಿದಾಗ ಹೀಗೆ ಆಗಿತ್ತು. ಇದು ಸಿದ್ದರಾಮಯ್ಯ ಕಾಲದ ದುರ್ದೆಸೆ. ಟಿಪ್ಪು ಜಯಂತಿ ಆರಂಭ ಮಾಡಿದ ದಿನದಿಂದ ದುರ್ದೆಸೆ. ಮಡಿಕೇರಿಯ ಕುಟ್ಟಪ್ಪ ಹತ್ಯೆಯಿಂದ ಶುರುವಾದ ಹತ್ಯೆಗಳು ಇನ್ನೂ ನಿಂತಿಲ್ಲ ಶಿವಮೊಗ್ಗ ಗಲಾಟೆಗೆ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತೀರಿ ಎಂದು ಪ್ರಶ್ನಿಸಿದರು.

ತುಘಲಕ್ ಸರ್ಕಾರ: ಗೃಹ ಸಚಿವ ಜಿ. ಪರಮೇಶ್ವರ್ ಅವರ ಇದು ಸಣ್ಣ ಘಟನೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ನಿಮ್ಮ ಮನೆ ಮುಂದೆ ಈ ರೀತಿ ಮಾಡಿದ್ದರೆ ನೀವು ಬಿಡುತ್ತಿದ್ದರಾ? ಬೇಜವಾಬ್ದಾರಿಯ ಸರಕಾರದಿಂದ ಹಿಂದೂಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಇದು ತುಘಲಕ್ ಸರ್ಕಾರ. ಸಿದ್ದು ಇದಕ್ಕೆ ಉತ್ತರ ಹೇಳಬೇಕು. ಗಲಾಟೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವೆಂದರೆ ಸಿದ್ದರಾಮಯ್ಯ ಅವರನ್ನು ಸುಮ್ಮನೆ ಬಿಡಲ್ಲ ಎಂದು ಎಚ್ಚರಿಸಿದರು.

ಶಿವಮೊಗ್ಗ ಗಲಾಟೆ ಪೂರ್ವನಿಯೋಜಿತ ಎನ್ನುವ ವಿಚಾರಕ್ಕೆ ಮಾತನಾಡಿ, ಈದ್ ಮಿಲಾದ್ ಆಚರಣೆ ಒಂದೇ ದಿನ ನಡೆಯಬೇಕಿತ್ತು. ಆದರೆ ಒಂದು ದಿನ ಬಿಟ್ಟು ಇನ್ನೊಂದು ದಿನ ಮಾಡುತ್ತಿದ್ದೀರಿ. ಬೇರೇ ಜಿಲ್ಲೆಯ ಜನರು ಅಲ್ಲಿಗೆ ಬರಬೇಕು, ಗಲಾಟೆ ಆಗಬೇಕು ಎನ್ನುವುದು ಉದ್ದೇಶವೇ? ಕುಟ್ಟಪ್ಪನ ಹತ್ಯೆ ಆದಾಗ ಅಲ್ಲಿ ಕೇವಲ ಮಡಿಕೇರಿ ಜನ ಅಲ್ಲಿ ಇರಲಿಲ್ಲ. ಕೇರಳ, ಶಿವಮೊಗ್ಗ, ಮಂಗಳೂರು, ಭಟ್ಕಳದಿಂದ ಬಂದಿದ್ದರು. ಈಗಲೂ ಅದೇ ರೀತಿಯಾಗಿದೆ. ವಾಹನದಲ್ಲಿ ಹೊರಗಡೆಯಿಂದ ಜನರು ಬರುತ್ತಿದ್ದಾರೆ. ಪೊಲೀಸರು ಏನು ಮಾಡುತ್ತಿದ್ದಾರೆ. ಇದಕ್ಕೆ ಉತ್ತರ ಸರ್ಕಾರ ಹೇಳಬೇಕಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next