Advertisement
ಭಾರತೀಯ ಚುನಾವಣಾ ಆಯೋಗ ಗುರುವಾರವೇ ಮೊಹರು ಮಾಡಿದ ಲಕೋಟೆಯಲ್ಲಿ ಶಿಫಾರಸನ್ನು ರಾಜ್ಯಪಾಲ ರಮೇಶ್ ಬೈಸ್ ಅವರಿಗೆ ಕಳುಹಿಸಿಕೊಟ್ಟಿದೆ. ಅವರು ಈ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಒಂದು ವೇಳೆ ಅವರು ಸೊರೇನ್ ಶಾಸಕನಾಗಿ ಮುಂದುವರಿಯಲು ಅನರ್ಹ ಎಂದು ನಿರ್ಧರಿಸಿದರೆ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕಾಗುತ್ತದೆ.
ಅನಿಶ್ಚಿತತೆಯ ನಡುವೆಯೇ ಮುಖ್ಯಮಂತ್ರಿ ನಿವಾಸದಲ್ಲಿ ಯುಪಿಎ ಶಾಸಕ ಸಭೆ ನಡೆಯಿತು. ಶನಿವಾರವೂ ಸಭೆ ಮುಂದುವರಿಯಲಿದೆ ಎಂದು ಶಾಸಕಿ ಪೂರ್ಣಿಮಾ ನೀರಜ್ ಸಿಂಗ್ ತಿಳಿಸಿದ್ದಾರೆ. ಹೇಮಂತ್ ಸೊರೇನ್ ಅವರೇ 2024ರ ವರೆಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ ಎಂದು ಜೆಎಂಎಂ ವಿಶ್ವಾಸ ವ್ಯಕ್ತಪಡಿಸಿದೆ.
Related Articles
ಒಂದು ವೇಳೆ ಸೊರೇನ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರೂ ಅವರಿಗೆ ಮತ್ತೆ ಮುಖ್ಯಮಂತ್ರಿಯಾಗುವುದಕ್ಕೆ ಅವಕಾಶವಿದೆ. ಇನ್ನು ಆರು ತಿಂಗಳೊಳಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರೆ ಅವರು ಮುಖ್ಯಮಂತ್ರಿಯಾಗಬಹುದು. ಚುನಾವಣಾ ಆಯೋಗವು ಸೊರೇನ್ ಅವರು ಚುನಾವಣೆಯಲ್ಲಿ ಸ್ಪರ್ಧಿಸದಿರುವಂತೆ ನಿರ್ಬಂಧ ಹೇರಲು ಶಿಫಾರಸು ಮಾಡಿಲ್ಲ ಎಂದು ಹೇಳಲಾಗುತ್ತಿದೆ. ಅವರಿಗೆ ನಿರ್ಧಾರದ ವಿರುದ್ಧ ಕಾನೂನು ಹೋರಾಟ ನಡೆಸುವ ಅವಕಾಶವೂ ಇದೆ.
Advertisement
81- ಒಟ್ಟು ಸ್ಥಾನ41- ಬಹುಮತಕ್ಕೆ
30- ಜೆಎಂಎಂ
18- ಕಾಂಗ್ರೆಸ್
01- ಆರ್‌ಜೆಡಿ
26- ಬಿಜೆಪಿ
02- ಎಜೆಎಸ್‌ಯು ಪಾರ್ಟಿ
04- ಇತರರು