Advertisement

ನೂತನ ಸಚಿವರ ಜತೆ ಸಭೆ ನಡೆಸಿದ ಸಿಎಂ

10:55 PM Feb 06, 2020 | Team Udayavani |

ಬೆಂಗಳೂರು: ಸಂಪುಟಕ್ಕೆ ಹೊಸದಾಗಿ ಸೇರಿದ ಹತ್ತು ಸಚಿವರಿಗೆ ಶನಿವಾರದ ಒಳಗೆ ಖಾತೆ ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. ಪ್ರಮಾಣ ವಚನ ಸಮಾರಂಭ ಮುಗಿಯುತ್ತಲೇ ನೂತನ ಸಚಿವರ ಜತೆ ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಸಭೆ ನಡೆಸಿದ ಅವರು, ಸಂಪುಟ ವಿಸ್ತರಣೆ ಸಂಬಂಧ ಯಾವುದೇ ಅಸಮಾಧಾನ ಇಲ್ಲ.

Advertisement

ಉಮೇಶ್‌ ಕತ್ತಿ ಅವರ ಜತೆ ನಿನ್ನೆಯೇ ಮಾತನಾಡಿದ್ದೆ. ಅವರನ್ನು ಮಂತ್ರಿ ಮಾಡುವುದು ನೂರಕ್ಕೆ ನೂರು ಖಚಿತ ಎಂದರು. ಹೊಸ ಸಚಿವರ ಜತೆಗಿನ ಸಭೆಯಲ್ಲಿ ಬಿಜೆಪಿ ಹಾಗೂ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುವಂತೆ ಕೆಲಸ ಮಾಡಿ. ನಿಮ್ಮ ಮೇಲೆ ಹೆಚ್ಚು ನಿರೀಕ್ಷೆ ಹಾಗೂ ಭರವಸೆ ಇದೆ ಎಂದು ಕಿವಿಮಾತು ಹೇಳಿದರು.

ನೂತನ ಸಚಿವ ಬಿ.ಸಿ.ಪಾಟೀಲ್‌ ಮಾತನಾಡಿ, ಮುಖ್ಯಮಂತ್ರಿಯವರು ಔಪಚಾರಿಕವಾಗಿ ಎಲ್ಲರನ್ನೂ ಕೊಠಡಿಗೆ ಕರೆದಿದ್ದರೂ ನಾವೆಲ್ಲರೂ ಬಂದು ಮಾತನಾಡಿದ್ದೇವೆ. ಖಾತೆಗಳ ಬಗ್ಗೆ ಯಾವುದೇ ತರಕಾರು ಇಲ್ಲ. ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next