Advertisement

ಶೋ ಅಲ್ಲ:ಗದ್ದೆಗಿಳಿದು ಗಂಟೆಗಳ ಕಾಲ ರೈತನಾಗಲಿದ್ದಾರೆ ಸಿಎಂ ಎಚ್‌ಡಿಕೆ!

03:48 PM Aug 07, 2018 | |

ಮಂಡ್ಯ: ನಾನು ರೈತರ ಪರ ಕಾಳಜಿಯುಳ್ಳ ಮುಖ್ಯಮಂತ್ರಿ , ನಾನೂ ರೈತ ಎಂದು ಹೇಳಿಕೊಂಡು ಬಂದಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಖುದ್ದು ಗದ್ದೆಗಿಳಿದು ನಾಟಿ ಮಾಡಲು ಮುಂದಾಗಿದ್ದಾರೆ. 

Advertisement

ಹೌದು ಸಿಎಂ ಎಚ್‌ಡಿಕೆ ಮಂಡ್ಯದ ಪಾಂಡವಪುರದ ಅರಳಕುಪ್ಪೆಯ ಸೀತಾಪುರದಲ್ಲಿ ಅಗಸ್ಟ್‌ 11 ರಂದು ಗದ್ದೆಗಿಳಿದು ರೈತರೊಂದಿಗೆ ನಾಟಿ ಕಾರ್ಯ ಮಾಡಲಿದ್ದಾರೆ. 

ಈ ಬಗ್ಗೆ ಸುದ್ದಿಗಾರರಿಗೆ ವಿವರ ನೀಡಿರುವ ಸಚಿವ ಸಿ.ಎಸ್‌.ಪುಟ್ಟರಾಜು ‘ಕೇವಲ ತೋರಿಕೆ ಗೆ ಸಿಎಂ ಗದ್ದೆಗಿಳಿಯುತ್ತಿಲ್ಲ. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ವರೆಗೆ ರೈತರೊಂದಿಗೆ ಗದ್ದೆಯಲ್ಲಿ ದುಡಿಯಲಿದ್ದಾರೆ’ ಎಂದು ತಿಳಿಸಿದರು. 

ಕುಮಾರಸ್ವಾಮಿ ಹಿಂದೆ ತನ್ನ ಸ್ವಂತ ಜಮೀನಿನಲ್ಲಿ ದಿನಕ್ಕೆ 8 ರಿಂದ 10 ಗಂಟೆಗಳ ಕಾಲ ದುಡಿದ ಅನುಭವ ಹೊಂದಿದ್ದಾದ್ದಾರಂತೆ. 

Advertisement

Udayavani is now on Telegram. Click here to join our channel and stay updated with the latest news.

Next