Advertisement

ಮಹದಾಯಿ ಹೋರಾಟದಲ್ಲಿ ಮಡಿದ ರೈತರಿಗೆ ಪರಿಹಾರಕ್ಕೆ ಸಿಎಂಗೆ ಮನವಿ

06:00 AM Jul 03, 2018 | Team Udayavani |

ಬೆಂಗಳೂರು: ಮಹದಾಯಿ ನೀರಿಗಾಗಿ ಹೋರಾಟ ಮಾಡಿ ಮಡಿದ ರೈತರ ಕುಟುಂಬಗಳಿಗೆ ಪರಿಹಾರ ನೀಡುವಂತೆ
ಮಹದಾಯಿ ಹೋರಾಟಗಾರರು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಗೆ ಮನವಿ ಮಾಡಿದ್ದಾರೆ.

Advertisement

ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ರೈತರು, ಕಳೆದ ಎರಡೂವರೆ ವರ್ಷದಲ್ಲಿ
ಮಹದಾಯಿ ನೀರಿಗಾಗಿ ಹತ್ತು ಜನರೈತರು ಜೀವ ಕಳೆದುಕೊಂಡಿದ್ದಾರೆ.

ಅವರಲ್ಲಿ ಕೇವಲ ಮೂವರು ರೈತರ ಕುಟುಂಬಗಳಿಗೆ ಮಾತ್ರ ಪರಿಹಾರ ದೊರೆತಿದ್ದು, ಉಳಿದ ಏಳು ಜನ ರೈತರ
ಕುಟುಂಬಕ್ಕೆ ಪರಿಹಾರ ಒದಗಿಸಿ ಕೊಡುವಂತೆ ಮನವಿ ಮಾಡಿದರು.

ಅಲ್ಲದೇ ಈ ವರ್ಷ ಆಗಸ್ಟ್‌ನಲ್ಲಿ ಮಹದಾಯಿ ನ್ಯಾಯಾಧಿಕರಣದ ತೀರ್ಪು ಹೊರ ಬೀಳುವ ಸಾಧ್ಯತೆಯಿದ್ದು, ರಾಜ್ಯಕ್ಕೆ ಅನ್ಯಾಯವಾಗದಂತೆ ಒತ್ತಡ ಹೇರಲು ರಾಜ್ಯದ ಶಾಸಕರು ಮತ್ತು ಸಂಸದರು ರಾಷ್ಟ್ರಪತಿ ಭವನದ ಮುಂದೆ ಒಂದು ದಿನ ಪರೇಡ್‌ ನಡೆಸುವಂತೆ ರೈತರು ಆಗ್ರಹಿಸಿದರು. ಅಲ್ಲದೇ ರಾಜ್ಯದ ಎಲ್ಲ ರೈತರ ಸಾಲ ಮನ್ನಾ ಮಾಡಿ, ರೈತರ
ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಮಾಡಿರುವ ಶಿಕ್ಷಣ ಸಾಲ ಹಾಗೂ ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡುವಂತೆ ರೈತರು ಮನವಿ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ತಾವು ರೈತರ ಪರವಾಗಿದ್ದು, ಮಹದಾಯಿ ನದಿ ನೀರಿನ
ಹಂಚಿಕೆ ಕುರಿತು ಆಗಸ್ಟ್‌ನಲ್ಲಿ ನ್ಯಾಯಾಧಿಕರಣದ ತೀರ್ಪು ಬರುವುದರಿಂದ ಆ ಬಗ್ಗೆ ಯಾವುದೇ ಭರವಸೆ ನೀಡುವುದು ಸರಿಯಲ್ಲ. ರೈತರ ಸಾಲ ಮನ್ನಾ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next