Advertisement

ಶಿಡ್ಲಘಟ್ಟ ವಲಯ ಅರಣ್ಯ ಸಿಬ್ಬಂದಿಗೆ ಸಿಎಂ ಚಿನ್ನದ ಪದಕ

03:44 PM Mar 14, 2020 | Suhan S |

ಶಿಡ್ಲಘಟ್ಟ: ಅರಣ್ಯ ಇಲಾಖೆ ಜಾಗವನ್ನು ಸಂರಕ್ಷಣೆ ಮಾಡಿ ರಾಜ್ಯದಲ್ಲಿಯೇ ಗಮನ ಸೆಳೆದಿದ್ದ ಶಿಡ್ಲಘಟ್ಟ ವಲಯ ಅರಣ್ಯಾಧಿಕಾರಿ ಹೆಚ್‌.ಎಸ್‌.ಶ್ರೀಲಕ್ಷ್ಮೀ ಸಹಿತ ಅರಣ್ಯ ಇಲಾಖೆ ಸಿಬ್ಬಂದಿ ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆಯಲಿದ್ದಾರೆ.

Advertisement

ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಮಾ.23 ರಂದು ನಡೆಯಲಿರುವ ಸಮಾರಂಭದಲ್ಲಿ ಶಿಡ್ಲಘಟ್ಟ ವಲಯ ಅರಣ್ಯಾಧಿಕಾರಿ ಹೆಚ್‌.ಎಸ್‌.ಶ್ರೀಲಕ್ಷ್ಮೀ ಅವರೊಂದಿಗೆ ಶಿಡ್ಲಘಟ್ಟ ಅರಣ್ಯ ರಕ್ಷಕ ಟಿ.ಡಿ. ಸಂದೀಪ್‌ ಮತ್ತು ಅರಣ್ಯ ಕ್ಷೇಮಾ ಭಿವೃದ್ಧಿ ನೌಕರ ಎ.ಶ್ರೀರಾಮಯ್ಯ ಮುಖ್ಯಮಂತ್ರಿಗಳ ಗೌರವಕ್ಕೆ ಪಾತ್ರರಾಗಲಿದ್ದಾರೆ.

ಹೆಚ್‌.ಎಸ್‌.ಶ್ರೀಲಕ್ಷ್ಮೀ: ಕಳೆದ ಆಗಸ್ಟ್‌ ತಿಂಗಳಲ್ಲಿ ವಲಯ ಅರಣ್ಯಾಧಿಕಾರಿ ಹೆಚ್‌.ಎಸ್‌.ಶ್ರೀಲಕ್ಷ್ಮೀ ಅವರು ತಮ್ಮ ಕೆಲವೇ ಸಿಬ್ಬಂದಿಯೊಂದಿಗೆ ತಾಲೂಕಿನ ವರದನಾಯಕನಹಳ್ಳಿ ಸರ್ವೆ ನಂ 10ರ ಅರಣ್ಯ ಭೂಮಿಯನ್ನು ರಾತ್ರೋ ರಾತ್ರಿ ಊಳಲು ಬಂದವರನ್ನು ಎದುರಿಸುತ್ತಿದ್ದರು. ಹಲವು ಮುಖಂಡರಿಂದ ಬೆದರಿಕೆ ಕರೆ ಬಂದರೂ ಜಗ್ಗದೇ ಒಂದಿಂಚು ಸಹ ಅರಣ್ಯ ಜಮೀನನ್ನು ಬಿಡುವುದಿಲ್ಲ ಎಂದು ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಿ ಇಲಾಖೆಯಿಂದ ಅಲ್ಲಿ ಗಿಡಗಳನ್ನು ನೆಡುವಲ್ಲಿ ಯಶಸ್ವಿಯಾಗಿದ್ದರು. ಅವರ ಪರಿಶ್ರಮ, ಸೇವಾಕ್ಷಮತೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪಿ.ಸಿ.ಸಿ.ಎಫ್‌. ಪುನಟಿ ಶ್ರೀಧರ್‌ ಶ್ಲಾಘಿಸಿದರು.

ಒತ್ತುವರಿ ತೆರವು, ಜಿಂಕೆ ರಕ್ಷಣೆ: ಅರಣ್ಯ ರಕ್ಷಕ ಟಿ.ಡಿ.ಸಂದೀಪ್‌ ಮತ್ತು ಅರಣ್ಯ ಕ್ಷೇಮಾಭಿವೃದ್ಧಿ ನೌಕರ ಎ.ಶ್ರೀರಾಮಯ್ಯ ಅವರು ಶಿಡ್ಲಘಟ್ಟ ತಾಲೂಕಿನ ವರದನಾಯಕನಹಳ್ಳಿ ಸರ್ವೇ ನಂ 10ರ 25 ಹೆಕ್ಟೇರ್‌ ಅರಣ್ಯ ಒತ್ತುವರಿ ತೆರವುಗೊಳಿಸುವ ಕಾರ್ಯದಲ್ಲಿ ಸಕ್ಷಮವಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಅರಣ್ಯದಲ್ಲಿ ಅಪಘಾತಕ್ಕೀಡಾದ ಜಿಂಕೆಗಳನ್ನು ರಕ್ಷಿಸಿರುವುದಲ್ಲದೇ, ಅರಣ್ಯ ಒತ್ತುವರಿಗೆ ಸಂಬಂಧಿಸಿದಂತೆ ವಿಚಾರಣಾ ವರದಿಗಳನ್ನು ಸಲ್ಲಿಸಿದ್ದಾರೆ.

ಹೆಚ್‌.ಎಸ್‌.ಶ್ರೀಲಕ್ಷ್ಮೀ 2015 ರಲ್ಲಿ ವಲಯ ಅರಣ್ಯಾಧಿಕಾರಿಯಾಗಿ ನೇಮಕಗೊಂಡರು. ಎರಡು ವರ್ಷಗಳ ಕಾಲ ತೆಲಂಗಾಣ ಅರಣ್ಯ ಅಕಾಡೆಮಿಯಲ್ಲಿ ತರಬೇತಿ ಪಡೆದು ಶಿಡ್ಲಘಟ್ಟ ವಲಯ ಅರಣ್ಯಾಧಿಕಾರಿಯಾದರು. 2019 ರ ಆಗಸ್ಟ್ ನಲ್ಲಿ ಶಿಡ್ಲಘಟ್ಟ ತಾಲೂಕಿನ ವರದನಾಯಕನಹಳ್ಳಿ ಸರ್ವೆ ನಂ 10ರ 25 ಹೆಕ್ಟೇರ್‌ ಅರಣ್ಯ ಒತ್ತುವರಿ ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಅರಣ್ಯದಲ್ಲಿ ಅಪಘಾತಕ್ಕೀಡಾದ ಜಿಂಕೆಗಳನ್ನು ಸಂರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ಅರಣ್ಯ ಒತ್ತುವರಿಗೆ ಸಂಬಂಧಿಸಿದಂತೆ ವಿಚಾರಣಾ ವರದಿಗಳನ್ನು ಸಲ್ಲಿಸಿದ್ದಾರೆ. 2020ರಲ್ಲಿ ತಲಕಾಯಲಬೆಟ್ಟ ವ್ಯಾಪ್ತಿಯ 4ಎಕರೆ ಅರಣ್ಯ ಒತ್ತುವರಿ ತೆರವುಗೊಳಿಸುವಲ್ಲಿ ಯಶಸ್ವಿಯಾಗಿರುವ ಕಳೆದ ಎರಡು ವರ್ಷಗಳಲ್ಲಿ ಅರಣ್ಯ ಉಳಿಸುವ ನಿಟ್ಟಿನಲ್ಲಿ ಸುಮಾರು 200 ಎಫ್‌ಐಆರ್‌ ದಾಖಲಿಸಿರುವುದು ವಿಶೇಷವಾಗಿದೆ.

ಶ್ರೀ ಲಕ್ಷ್ಮೀ ಕಿರು ಪರಿಚಯ :  ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆವಲಹಳ್ಳಿಯ ಸಂಜೀವಪ್ಪ ಮತ್ತು ಚೌಡಮ್ಮ ದಂಪತಿಗಳ ಪುತ್ರಿ ಹೆಚ್‌.ಎಸ್‌.ಶ್ರೀಲಕ್ಷ್ಮೀ ಒಂದರಿಂದ 10ನೇ ತರಗತಿ ವರೆಗೆ ಶ್ರೀಮುನೇಶ್ವರ ವಿದ್ಯಾನಿಕೇತನ ಆಂಗ್ಲ ಶಾಲೆಯಲ್ಲಿ ಮುಗಿಸಿ

ವಿಜಯ ಜೂನಿಯರ್‌ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿ ನಂತರ ಜಯ ನಗರದ ಈಸ್ಟ್‌ಪಾಯಿಂಟ್‌ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌ನಲ್ಲಿ ಎಲೆಕ್ಟ್ರಾನಿಕ್ಸ್‌ ಅಂಡ್‌ ಕಮ್ಯೂನಿಕೇಶನ್‌ನಲ್ಲಿ ಬಿಇ ಪದವಿ ಪಡೆದಿದ್ದಾರೆ. ಬಳಿಕ 2015ನೇ ಬ್ಯಾಚ್‌ನಲ್ಲಿ ರೇಂಜ್‌ ಆಫೀಸರ್‌ ಆಗಿ ಆಯ್ಕೆಯಾಗಿ 2 ವರ್ಷ ತೆಲಂಗಾಣ ರಾಜ್ಯದ ಅರಣ್ಯ ಅಕಾಡೆಮಿಯಲ್ಲಿ ತರಬೇತಿ ಪಡೆದ ಬಳಿಕ ಶಿಡ್ಲಘಟ್ಟ ತಾಲೂಕಿನಲ್ಲಿ ವಲಯ ಅರಣ್ಯಾಧಿಕಾರಿಯಾಗಿ ಪ್ರಥಮವಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next