Advertisement

ಸಂಪುಟ ವಿಸ್ತರಣೆಗೆ ಮೂಹೂರ್ತ ಫಿಕ್ಸ್: ಗುರುವಾರ ನೂತನ ಸಚಿವರ ಪ್ರಮಾಣ ವಚನ: ಸಿಎಂ ಬಿಎಸ್ ವೈ

09:56 AM Feb 03, 2020 | Mithun PG |

ಬೆಂಗಳೂರು: ಕೊನೆಗೂ ಸಚಿವ ಸಂಪುಟ  ವಿಸ್ತರಣೆಗೆ ದಿನಾಂಕ ನಿಗದಿಯಾಗಿದ್ದು ದಿನಾಂಕ 6ರಂದು ಬೆಳಗ್ಗೆ 10:30 ಕ್ಕೆ  ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

Advertisement

ಗೃಹ ಕಚೇರಿ ಕೃಷ್ಣಾದಲ್ಲಿ  ಪತ್ರಿಕಾಗೋಷ್ಠಿ ನಡೆಸಿದ ಬಿಎಸ್ ಯಡಿಯೂರಪ್ಪ, ಉಪಚುನಾವಣೆಯಲ್ಲಿ ಗೆದ್ದ 10 ಶಾಸಕರಿಗೆ ಸಚಿವ ಸ್ಥಾನ ನೀಡುತ್ತೇವೆ. ಅಮಿತ್ ಶಾ ಸೇರಿದಂತೆ ಪಕ್ಷದ ಹೈಕಮಾಂಡ್ ನಾಯಕರ ಅನುಮತಿ ಸಿಕ್ಕಿದ್ದು ಅದರಂತೆ ಗುರುವಾರ(ಫೆ.6) ರಂದು ಬೆಳಗ್ಗೆ 10:30ಕ್ಕೆ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ ಎಂದರು.

ಸಂಪುಟ ವಿಸ್ತರಣೆಯೇ ಅಥವಾ ಪುನರ್ ರಚನೆಯೇ ಹಾಗೂ ಯಾರೆಲ್ಲಾ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂಬ ಗುಟ್ಟನ್ನು ಸಿಎಂ ಬಿಟ್ಟುಕೊಟ್ಟಿಲ್ಲ. ಉಪಚುನಾವಣೆಯಲಲ್ಲಿಗೆದ್ದ ಶಾಸಕರ ಪೈಕಿ 10 ಜನರು ಸಚಿವರಾಗಲಿದ್ದು, ಸೋತವರಿಗೆ ಸುಪ್ರೀಂ ತೀರ್ಪಿನ ಹಿನ್ನಲೆ ಸಚಿವ ಸ್ಥಾನ ನೀಡಲಾಗುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next