Advertisement

ಬಾಲ್ಯದಲ್ಲಿ ನೋಡಿದ್ದ ನಾಟಕದ ಪಾತ್ರಧಾರಿಯನ್ನು ಸನ್ಮಾನಿಸಿದ ಸಿಎಂ

02:50 AM Jul 16, 2017 | Harsha Rao |

ಮೈಸೂರು: “ನಾನು ಸಣ್ಣ ಹುಡುಗನಿದ್ದಾಗ ಸುಗ್ಗಿಕಾಲದಲ್ಲಿ ನಮ್ಮೂರಿಗೆ ದೊಂಬಿದಾಸರ ಮುನಿಯಮ್ಮ ಸತ್ಯವಾನ
ಸಾವಿತ್ರಿ ನಾಟಕ ಮಾಡಲು ಬರೋಳು, ಈಗಲೂ ಇದ್ದಾಳ ಅವಳು’! ಏಕಲವ್ಯ ನಗರದಲ್ಲಿ ಜೆ-ನರ್ಮ್ ಮನೆಗಳನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಲ್ಲಿ ಮನೆಗಳನ್ನು ನೀಡಲಾಗುತ್ತಿರುವ ಅಲೆಮಾರಿಗಳ ಬದುಕಿನ ಬಗ್ಗೆ ಮಾತನಾಡುವಾಗ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದರು.

Advertisement

ತಾನು ಸಣ್ಣ ಹುಡುಗನಿದ್ದಾಗ ದೊಂಬಿದಾಸರು ಹಳ್ಳಿಗೆ ಬಂದು ಸತ್ಯವಾನ ಸಾವಿತ್ರಿ ನಾಟಕ ಮಾಡೋರು, ಸುಗ್ಗಿಕಾಲದಲ್ಲಿ ಭತ್ತ, ರಾಗಿ ಕೊಟ್ಟು ಕಳುಹಿಸೋವ್ರು. ಮುನಿಯಮ್ಮ ಅಂತಾ ಸತ್ಯವಾನ ಸಾವಿತ್ರಿ ನಾಟಕದಲ್ಲಿ ಸಾವಿತ್ರಿ ಪಾತ್ರ ಮಾಡ್ತಿದ್ದಳು.

50 ವರ್ಷಗಳ ಹಿಂದೆ ತಾನು ನಾಟಕ ನೋಡಿದ್ದು. ಈಗ್ಲೂ ಇದ್ದಾಳ ಮುನಿಯಮ್ಮ ಎಂದು ಅಲ್ಲಿನ ನಿವಾಸಿಗಳನ್ನು
ಪ್ರಶ್ನಿಸಿದರು.

“ಇದ್ದಾಳೆ ಸಾರ್‌…’ ಎಂದು ಇಬ್ಬರು ಮಹಿಳೆಯರು ಮುನಿಯಮ್ಮಳನ್ನು ವೇದಿಕೆಗೆ ಕೈಹಿಡಿದು ಕರೆದೊಯ್ದರು. ಮುನಿಯಮ್ಮಳನ್ನು ಕಂಡ ಸಿದ್ದರಾಮಯ್ಯ “50 ವರ್ಷಗಳ ಹಿಂದೆ ನಿನ್ನ ನಾಟಕ ನೋಡಿದ್ದು, ಇನ್ನೂ ಹೆಂಗೆ ಜಾnಪಕ ಇಟ್ಕೊಂಡಿದ್ದೀನಿ ನೋಡು, ನಾವು ಸಿಟಿಯವ್ರಲ್ಲ ಹಳ್ಳಿಯವ್ರು, ಮರೆಯಲ್ಲ. ಈಗ್ಲೂ ನಾಟಕ ಮಾಡ್ತಿಯಾ? ನಾನು ಯಾರು
ಜಾnಪಕ ಇದ್ದದಾ? ಕೈ ನಡುಗ್ತವಲ್ಲ ಈಗ, ಅಕ್ಕಿ ಕೊಡ್ತಾವ್ರಲ್ಲ ಸಾಕಾಯ್ತದ ಏಳು ಕೆಜಿ’ ಎಂದು ಮುನಿಯಮ್ಮಳನ್ನು ವಿಚಾರಿಸಿಕೊಂಡರು.

ಅಲ್ಲದೇ, ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಿದರು. ತಮ್ಮ ಜೇಬಿನಿಂದ 500 ರೂ. ನೋಟು ತೆಗೆದುಕೊಟ್ಟು, “ಆಯ್ತು ಹೋಗಿಗ, ಮನೆ ಕೊಟ್ಟಿದ್ದೀನಿ ಇರೋಗು’ ಎಂದರು. ವೇದಿಕೆ ಇಳಿಯುತ್ತಿದ್ದ ಮುನಿಯಮ್ಮಳನ್ನು ಸಚಿವ ಮಹದೇವಪ್ಪ ಸಹ ಮಾತನಾಡಿಸಿ, 500 ರೂ.ಗಳ ಎರಡು ನೋಟು ಕೊಟ್ಟು ಕಳುಹಿಸಿದರು.

Advertisement

19ರಂದು ಪ್ರತಿಭಾವಂತ ಕನ್ನಡಿಗರಿಗೆ ಸಿಎಂ ಅಭಿನಂದನೆ
ಬೆಂಗಳೂರು:
ಕೇಂದ್ರ ಲೋಕಸೇವಾ ಆಯೋಗದ 2016ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಪಡೆದ ಪ್ರತಿಭಾವಂತ ಕನ್ನಡಿಗ ಅಭ್ಯರ್ಥಿಗಳಿಗೆ ಜು.19ರಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಅಭಿನಂದನೆ
ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕನ್ನಡ
ಭಾಷೆಯನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡಿದ್ದ 15 ಅಭ್ಯರ್ಥಿಗಳು ಸೇರಿ ಒಟ್ಟು 58 ಪ್ರತಿಭಾವಂತರನ್ನು
ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದಿಸಲಿದ್ದಾರೆ. 

21ರಂದು ಮಲ್ಲಿಕಾರ್ಜುನ ಖರ್ಗೆ ಕುರಿತ ಪುಸ್ತಕ ಬಿಡುಗಡೆ
ಬೆಂಗಳೂರು: ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಕುರಿತ ಲೇಖನಗಳ ಸಂಗ್ರಹ “ಬಯಲ ಹೊನ್ನು’ ಪುಸ್ತಕ ಜು.21ರಂದು ಬಿಡುಗೊಳ್ಳಲಿದೆ. ಸಪ್ನಾ ಬುಕ್‌ ಹೌಸ್‌ ಹೊರತಂದಿರುವ ಈ ಪುಸ್ತಕವನ್ನು ಕಲಬುರಗಿ ವಿವಿ ಕನ್ನಡ ಆಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್‌.ಟಿ. ಪೋತೆ ಸಂಪಾದಿಸಿದ್ದಾರೆ. ಅಂದು ಸಂಜೆ 5 ಗಂಟೆಗೆ ಬೆಂಗಳೂರಿನ ಗಾಂಧಿಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಚಿವ ರಮೇಶ್‌ಕುಮಾರ್‌ ಪುಸ್ತಕ ಬಿಡುಗಡೆ ಮಾಡುವರು.

Advertisement

Udayavani is now on Telegram. Click here to join our channel and stay updated with the latest news.

Next