Advertisement

ಮಗನ ಗೆಲುವಿಗೆ ಹಠಕ್ಕೆ ಬಿದ್ದ ಸಿಎಂ: ಬಿಎಸ್‌ವೈ

11:29 PM Apr 16, 2019 | Lakshmi GovindaRaju |

ಶಹಾಪುರ: “ರಾಜ್ಯದಲ್ಲಿ ಕುಟುಂಬ ರಾಜಕಾರಣ ಮಾಡುತ್ತಿರುವ ಮುಖ್ಯಮಂತ್ರಿ, ಮಂಡ್ಯದಲ್ಲಿ ತನ್ನ ಮಗನನ್ನು ಗೆಲ್ಲಿಸಲೇಬೇಕೆಂಬ ಹಠಕ್ಕೆ ಬಿದ್ದಿದ್ದಾರೆ. ಅಕ್ರಮವಾಗಿ ಹಣ, ಹೆಂಡ ಹಂಚುವ ಮೂಲಕ ಮಗನ ಗೆಲುವಿಗಾಗಿ ಈಗಾಗಲೇ 150 ಕೋಟಿ ರೂ.ವನ್ನು ಮಂಡ್ಯ ಕ್ಷೇತ್ರದಲ್ಲಿ ಖರ್ಚು ಮಾಡುತ್ತಿದ್ದಾರೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಆರೋಪಿಸಿದರು.

Advertisement

ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಮಂಡ್ಯ ಕ್ಷೇತ್ರದಲ್ಲಿ ಮಗನನ್ನು ಗೆಲ್ಲಿಸಲು ಸಿಎಂ ಕುಮಾರಸ್ವಾಮಿ ಅಕ್ರಮವಾಗಿ ಪ್ರತಿ ಬೂತ್‌ ಮಟ್ಟಕ್ಕೆ ಐದು ಲಕ್ಷ ರೂ. ನೀಡಿದ್ದಾರೆ. ಒಟ್ಟು 150 ಕೋಟಿ ಖರ್ಚು ಮಾಡುತ್ತಿರುವುದು ಸಿಎಂ ಸ್ಥಾನಕ್ಕೆ ಶೋಭೆ ತರಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next