Advertisement

Nava Kerala ಸದಸ್‌ಗೆ ಪೈವಳಿಕೆಯಲ್ಲಿ ಸಿಎಂ ಚಾಲನೆ

11:37 PM Nov 18, 2023 | Team Udayavani |

ಕುಂಬಳೆ: ಕೇರಳ ರಾಜ್ಯ ಸರಕಾರದ ವತಿಯಿಂದ ರಾಜ್ಯಾದ್ಯಂತ ಎಲ್ಲ 140 ನಿಯೋಜಕ ಮಂಡಲಗಳಲ್ಲಿ ನಡೆಯಲಿರುವ ನವ ಕೇರಳ ಸದಸ್‌ (ಸಭೆ)ನ ಪ್ರಥಮ ಕಾರ್ಯಕ್ರಮವು ಮಂಜೇಶ್ವರ ವಿಧಾನಸಭಾ ಕೇÒತ್ರದ ಪೈವಳಿಕೆ ಹೈಯರ್‌ ಸೆಕೆಂಡರಿ ವಿದ್ಯಾಲ ಯದಲ್ಲಿ ಶನಿವಾರ ಸಂಜೆ ಜರಗಿತು.

Advertisement

ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಉದ್ಘಾಟಿಸಿ ಮಾತನಾಡಿ, ರಾಜ್ಯ ಎಡರಂಗ ಸರಕಾರವು ಬಡವರ ಕ್ಷೇಮಕ್ಕಾಗಿ ವಿವಿಧ ಜನಪರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಎಡರಂಗ ಸರಕಾರ ಆಡಳಿತವನ್ನು ಇಲ್ಲವಾಗಿಸಲು ಕೇಂದ್ರದ ಬಿಜೆಪಿ ಸರಕಾರ ಮತ್ತು ಐಕ್ಯರಂಗ ಯತ್ನಿಸುತ್ತಿವೆ. ಆದರೆ ಇದು ನಡೆಯದು ಎಂದು ಹೇಳಿದರು.

ನವಕೇರಳ ಸಭೆಯಲ್ಲಿ ಜನರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಮತ್ತು ಸಮಸ್ಯೆಯನ್ನು ಮುಕ್ತವಾಗಿ ಆಲಿಸಲು ವೇದಿಕೆಯನ್ನು ರಾಜ್ಯದ 140 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಸಲಾಗುವುದೆಂದರು. ಕಂದಾಯ ವಸತಿ ಇಲಾಖೆ ಸಚಿವ ಕೆ. ರಾಜನ್‌ ಅಧ್ಯಕ್ಷತೆ ವಹಿಸಿದ್ದರು. ಸಂಪುಟದ ಎಲ್ಲ 20 ಮಂದಿ ಸಚಿವರು ಭಾಗವಹಿಸಿದ್ದರು.

ವಿವಿಧ ಕೌಂಟರ್‌ಗಳಲ್ಲಿ ವಿವಿಧ ಸರಕಾರಿ ಇಲಾಖೆಗಳ ಅಧಿಕಾರಿಗಳು ಉಪಸ್ಥಿತ ರಿದ್ದು ಸಾರ್ವಜನಿಕರ ಮನವಿಗಳನ್ನು ಸ್ವೀಕರಿಸಿದರು. ಹಾಲಿ ಮತ್ತು ಮಾಜಿ ಶಾಸಕರು, ವಿವಿಧ ಗ್ರಾ.ಪಂ.ಗಳ ಅಧ್ಯಕ್ಷರು, ಜಿಲ್ಲಾಧಿಕಾರಿ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಹಿತ ರಾಜ್ಯದ ಎಲ್ಲ ಸಚಿವರು ವಿಶೇಷವಾಗಿ ನಿರ್ಮಿಸಿದ ಒಂದೇ ಬಸ್ಸಿನಲ್ಲಿ ಆಗಮಿಸಿದರು. ಕೊಂಬು ಕಹಳೆಯಲ್ಲಿ ಸ್ವಾಗತಿಸಿ ಎಲ್ಲರಿಗೂ ಮೈಸೂರು ಪೇಟ ತೊಡಿಸಲಾಯಿತು. ರಾಜ್ಯ ಸರಕಾರದ ಚೀಫ್‌ ಸೆಕ್ರೆಟರಿ ಡಾ| ವೇಣು ಸ್ವಾಗತಿಸಿದರು.

Advertisement

ಐಕ್ಯರಂಗ, ಬಿಜೆಪಿ ಬಹಿಷ್ಕಾರ
ನವಕೇರಳ ಸಭೆ ಕಾರ್ಯಕ್ರಮವು 19ರಂದು ಕಾಸರಗೋಡಿನಲ್ಲಿ ಜರಗಲಿದ್ದು ರಾಜ್ಯದ ಎಲ್ಲ 140 ವಿಧಾನಸಭಾ ಕ್ಷೇತ್ರಗಳಲ್ಲಿ ಜರಗಿ ಡಿ. 24ರಂದು ತಿರುವನಂತಪುರದಲ್ಲಿ ಕೊನೆಗೊಳ್ಳಲಿರುವುದು. ಇದು ಸರಕಾರದ ಕಾರ್ಯಕ್ರಮವಾಗಿದ್ದರೂ ವಿಪಕ್ಷ ಐಕ್ಯರಂಗ ಮತ್ತು ಬಿಜೆಪಿ ಬಹಿಷ್ಕರಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next