Advertisement

ಅಧಿಕಾರಿಗಳನು ತರಾಟೆಗೆ ತೆಗೆದುಕೊಂಡ ಸಿಎಂ

11:09 AM Jun 22, 2020 | Suhan S |

ಮುಂಬಯಿ, ಜೂ. 21: ಕೋವಿಡ್‌-19 ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಶಂಕಿತ ಸಂಪರ್ಕಗಳ ಕಳಪೆ ಪತ್ತೆಗಾಗಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಆಯಾಯ ಜಿಲ್ಲಾ ಮತ್ತು ನಗರ ಪಾಲಿಕೆಯ ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.

Advertisement

ವೈರಸ್‌ನ್ನು ಭೆನ್ನಟ್ಟಿ ತತ್ವವನ್ನು ಪಾಲಿಸಿ :  “ವೈರಸ್‌ನ್ನು ಬೆನ್ನಟ್ಟಿ’ ಎಂಬ ತತ್ವವನ್ನು ಕಟ್ಟುನಿ ಟ್ಟಾಗಿ ಪಾಲಿಸುವಂತೆ ಮತ್ತು ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ತಜ್ಞ ವೈದ್ಯರ ಕಾರ್ಯಪಡೆಗಳನ್ನು ರಚಿಸುವಂತೆ ಜಿಲ್ಲಾ ಮತ್ತು ನಾಗರಿಕ ಅಧಿಕಾರಿಗಳಿಗೆ ಠಾಕ್ರೆ ಸೂಚಿಸಿದ್ದಾರೆ ಎನ್ನಲಾಗಿದೆ. ಠಾಕ್ರೆ ಕೆಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಪುರಸಭೆ ಆಯುಕ್ತರೊಂದಿಗೆ ಹೆಚ್ಚಿನ ಮರಣ ಪ್ರಮಾಣ ಮತ್ತು ಮಾರ್ಗಸೂಚಿಗಳನ್ನು ಸರಿಯಾಗಿ ಅನುಷ್ಠಾನ ಗೊಳಿಸದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿ ಉದ್ದವ್‌ ಠಾಕ್ರೆ ಅವರು, ಮೀರಾ-ಭಾಯಂದರ್‌ ಮತ್ತು ಪುಣೆಯಲ್ಲಿ ಹೆಚ್ಚು ಮತ್ತು ಕಡಿಮೆ-ಅಪಾಯದ ಸಂಪರ್ಕಗಳನ್ನು ಪತ್ತೆಹಚ್ಚುವ ಬಗ್ಗೆ ಮತ್ತು ಧುಲೆ, ಔಂಗಾಬಾದ್‌ ಮುಂತಾದ ಜಿಲ್ಲೆಗಳಲ್ಲಿ ಹೆಚ್ಚಿನ ಸಾವು-ನೋವುಗಳ ಬಗ್ಗೆ ಠಾಕ್ರೆ ಮಾಹಿತಿ ಪಡೆದರು.

ಮುಖ್ಯ ಕಾರ್ಯದರ್ಶಿ ಅಜೋಯ್‌ ಮೆಹ್ತಾ ಮಾತನಾಡಿ, ಯಾವುದೇ ಸಕಾರಾತ್ಮಕ ರೋಗಿಯ ಸಂಪರ್ಕಗಳ ಪತ್ತೆ 10 ಜನರಿಗಿಂತ ಕಡಿಮೆ ಇರುವಲ್ಲಿ ಹರಡುವಿಕೆಯ ಪ್ರಮಾಣ ಹೆಚ್ಚಾಗಿದೆ ಎಂದಾರ್ಥ. ಸಕಾರಾತ್ಮಕ ರೋಗಿಗಳೊಂದಿಗೆ ಅಪಾರ್ಟ್‌ಮೆಂಟ್‌ ಅಥವಾ ಕಟ್ಟಡಗಳನ್ನು ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡುವಂತೆ ಅವರು ಸಂಗ್ರಾಹಕರಿಗೆ ನಿರ್ದೇಶನ ನೀಡಿದರು. ಮೀರಾ-ಭಾಯಂದರ್‌ ನಗರ ಪಾಲಿಕೆಯು 1,995 ಪ್ರಕರಣಗಳನ್ನು ವರದಿ ಮಾಡಿದ್ದು, 99 ಸಾವುಗಳು ವರದಿಯಾಗಿವೆ. ಪುಣೆಯಲ್ಲಿ 14,000 ಪ್ರಕರಣಗಳು ವರದಿಯಾಗಿದ್ದು, ಇದುವರೆಗೆ 610 ಸಾವುಗಳು ಸಂಭವಿಸಿವೆ. ಔರಂಗಾಬಾದ್‌ನಲ್ಲಿ 3,064 ಪ್ರಕರಣಗಳು ಮತ್ತು 168 ಸಾವು-ನೋವುಗಳು ವರದಿಯಾಗಿವೆ. ಇದೇ ಸಂದರ್ಭದಲ್ಲಿ ಅವರು ಕೈಗೊಂಡ ಕ್ರಮಗಳ ಬಗ್ಗೆ ಜಿಲ್ಲಾ ಮತ್ತು ನಾಗರಿಕ ಅಧಿಕಾರಿಗಳು ಸಿಎಂಗೆ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next