ಹೊಸದಿಲ್ಲಿ: ಸಿಎಂ ಮತ್ತು ಉಪ ಮುಖ್ಯಮಂತ್ರಿಗಳ ಸಂಖ್ಯೆ ವಿಚಾರದಲ್ಲಿ ಬಹಿ ರಂಗವಾಗಿ ಮಾತನಾಡದಂತೆ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದ ನಾಯಕರಿಗೆ ಎಚ್ಚರಿಕೆ ನೀಡಿದೆ. ಮೂರು ಡಿಸಿಎಂ ವಿಚಾರವಾಗಿ ಕೆ.ಎನ್. ರಾಜಣ್ಣ ಅವರ ಹೇಳಿಕೆ ಮತ್ತು ಸಿಎಂ ಆಯ್ಕೆ ಸಂಬಂಧ ನಡೆ ಯುತ್ತಿರುವ ಚರ್ಚೆಗಳ ಬೆನ್ನಲ್ಲೇ ಹೈಕಮಾಂಡ್ ಮಧ್ಯಪ್ರವೇಶ ಮಾಡಿದೆ. ಈ ಸಂಬಂಧ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಹೇಳಿಕೆ ಹೊರ
ಡಿಸಿದ್ದು, ಪಕ್ಷ ಅಥವಾ ಸರಕಾರದ ವಿಚಾರಗಳ ಬಗ್ಗೆ ಬಹಿರಂಗವಾಗಿ ಮಾತನಾಡಬಾರದು ಎಂದು ಸೂಚಿಸಿದ್ದಾರೆ.
ಇಡೀ ದೇಶದಲ್ಲಿ ನಾವು ಕರ್ನಾಟಕ ಮಾದರಿಯಲ್ಲೇ ಚುನಾವಣೆ ಎದುರಿಸಲು ಮುಂದಾಗಿದ್ದೇವೆ. ಸದ್ಯ ಕರ್ನಾಟಕದಲ್ಲಿ ಐದು ಗ್ಯಾರಂಟಿಗಳಲ್ಲಿ ನಾಲ್ಕನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದೇವೆ. ಈ ಮೂಲಕ ದೇಶಕ್ಕೆ ಹೊಸ ಮಾದರಿ ನೀಡಿದ್ದೇವೆ. ಆದರೆ ಈ ಯಶಸ್ಸನ್ನು ಸಹಿಸದೆ ಬಿಜೆಪಿ ಮತ್ತು ಇತರ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ವಿರುದ್ಧ ವದಂತಿ ಹಬ್ಬಿಸುತ್ತಿವೆ. ಈ ವದಂತಿಗಳ ಜಾಲಕ್ಕೆ ಬೀಳಬೇಡಿ ಎಂದು ವೇಣುಗೋಪಾಲ್ ಸಲಹೆ ನೀಡಿದ್ದಾರೆ.
ಅಪಪ್ರಚಾರದ ಸುಳಿಯೊಳಗೆ ಕೆಲವು ಸಚಿವರು ಮತ್ತು ನಾಯಕರು ಬಿದ್ದಿದ್ದಾರೆ ಎಂದಿರುವ ವೇಣುಗೋಪಾಲ್, ನಿಮ್ಮ ಹೇಳಿಕೆಗಳಿಂದ ಪಕ್ಷದ ಯಶಸ್ಸಿಗೆ ಧಕ್ಕೆಯುಂಟಾಗುತ್ತದೆ ಎಂದಿದ್ದಾರೆ