Advertisement

ವರಿಷ್ಠರ ಅಪೇಕ್ಷೆಯಂತೆ ನನ್ನ ಇತಿ-ಮಿತಿಯಲ್ಲಿ ಸಂಪುಟ ವಿಸ್ತರಣೆ ಮಾಡಿದ್ದೇನೆ: ಬಿಎಸ್ ವೈ

12:55 PM Jan 14, 2021 | Team Udayavani |

ದಾವಣಗೆರೆ: ಸಚಿವ ಸ್ಥಾನ ದೊರೆಯದಿರುವ 10-12 ಜನರು ಆರೋಪ ಮಾಡುತ್ತಿರುವುದು ಕೇಳಿ ಬರುತ್ತಿದೆ. ಅವರು ಇಲ್ಲಿ ಹೇಳಿಕೆ ನೀಡುವ ಬದಲಿಗೆ ಕೇಂದ್ರದ ನಾಯಕರ ಮುಂದೆ ಹೇಳಿಕೆ ನೀಡಲಿ, ಆರೋಪ ಮಾಡಲಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

Advertisement

ಗುರುವಾರ ಜಿಎಂಐಟಿ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಯತ್ನಾಳ್ ಅವರ ಸಿಡಿ ಆರೋಪ ಕುರಿತಂತೆ ಕೇಳಲಾದ ಪ್ರಶ್ನೆಗೆ, ಯಾರು ಏನೇ ಮಾತನಾಡಿದರೂ, ಕೇಂದ್ರದ ನಾಯಕರಲ್ಲಿ ದೂರು ಕೊಡಲಿ ಎಂದರು.

ಕೇಂದ್ರದ ನಾಯಕರ ಅಪೇಕ್ಷೆಯಂತೆ ನನ್ನ ಇತಿ-ಮಿತಿಯೊಳಗೆ ಏನು ಮಾಡೋಕೋ ಸಾಧ್ಯವೋ ಅದರಂತೆ ಸಚಿವ ಸಂಪುಟ ವಿಸ್ತರಣೆ ಮಾಡಿದ್ದೇನೆ. ಯಶಸ್ವಿಯಾಗಿ ಮಂತ್ರಿ ಮಂಡಲದ ವಿಸ್ತರಣೆ ಮಾಡಲಾಗಿದೆ. ಕೇಂದ್ರ ನಾಯಕರ ಆಪೇಕ್ಷೆಯಂತೆ ಒಂದು ಸ್ಥಾನ ಖಾಲಿ ಉಳಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ನಮ್ಮನ್ನು ಮಂತ್ರಿ ಮಾಡಲಿಲ್ಲ ಎಂದು 10-12 ಜನರು ಆರೋಪ ಮಾಡುತ್ತಿದ್ದಾರೆ. ಆವರಲ್ಲಿ ವಿನಂತಿ ಮಾಡಿಕೊಳ್ಳುವುದೇನಂದರೆ ಕೇಂದ್ರದ ನಾಯಕರ ಮುಂದೆ ಆರೋಪ ಮಾಡಲು, ದೂರು ನೀಡಲು ಯಾರು ಅಡ್ಡಿ ಮಾಡಿಲ್ಲ. ಇಲ್ಲಿ ಹೇಳಿಕೆ ಕೊಡುವ ಮೂಲಕ ಗೊಂದಲದ ವಾತಾವರಣ ಉಂಟು ಮಾಡಿ ವಾತಾವರಣ ಕೆಡಿಸುವುದು, ಪಕ್ಷದ ಶಿಸ್ತಿಗೆ ಧಕ್ಕೆ ತರುವುದು ಬೇಡ ಎಂದರು.

ಇದನ್ನೂ ಓದಿ:ನಾನೇ ಒಂದು ವರ್ಷ ಕಾದಿದ್ದೆನೆ, ಮುಂದೆ ಎಲ್ಲರೂ ಸಚಿವರಾಗುತ್ತಾರೆ: ಉಮೇಶ್ ಕತ್ತಿ

Advertisement

ಇನ್ನೂ ಎರಡೂಕಾಲ ವರ್ಷ ಆಡಳಿತ ಆವಧಿಯಲ್ಲಿ ರಾಜ್ಯದ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಲಾಗುವುದು. ಕೇಂದ್ರದ ನಾಯಕರ ಆಶೀರ್ವಾದ ಇರುವುದರಿಂದ ಯಾರೂ ಸಹ ಏನು ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ. ರಾಜ್ಯದ ಅಭಿವೃದ್ಧಿಗೆ ಉತ್ತಮ ಆಡಳಿತ ಮಾಡುತ್ತೇವೆ ಎಂದು ತಿಳಿಸಿದರು.

ಈ ತಿಂಗಳ ಕೊನೆಗೆ ವಿಧಾನ ಮಂಡಲ ಅಧಿವೇಶನ ನಡೆಯಲಿದೆ. ಮಾರ್ಚ್‌ನಲ್ಲಿ ಹಣಕಾಸಿನ ಇತಿಮಿತಿ ಒಳ್ಳೆಯ, ರೈತರ ಪರ ಬಜೆಟ್ ಮಂಡನೆ ಮಾಡಲಾಗುವುದು ಎಂದು ತಿಳಿಸಿದರು

Advertisement

Udayavani is now on Telegram. Click here to join our channel and stay updated with the latest news.

Next