ಬೆಂಗಳೂರು: ರಾಜ್ಯ ಸಚಿವ ಸಂಪುಟದ ವಿಸ್ತರಣೆಗೆ ಕಸರತ್ತುಗಳು ನಡೆಯುತ್ತಿದೆ. ಈ ಮಧ್ಯೆ ಇನ್ನು ಎರಡು- ಮೂರು ದಿನದಲ್ಲಿ ಸಚಿವರ ಪಟ್ಟಿ ಬರಬಹುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.
ಗೃಹ ಕಚೇರಿ ಕೃಷ್ಣ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಈ ಮಾಹಿತಿಯನ್ನು ನೀಡಿದರು.
ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಅನುಮತಿ ಪಡೆಯುವ ಸಲುವಾಗಿ ಬುಧವಾರ ಬೆಳಗ್ಗೆ ದಿಲ್ಲಿಗೆ ತೆರಳಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಂಜೆಯೇ ಬೆಂಗಳೂರಿಗೆ ವಾಪಸ್ ಆಗಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಸೌಹಾರ್ದಯುತ ಚರ್ಚೆ ನಡೆದಿದೆ. ಸಂಪುಟ ವಿಸ್ತರಣೆಗೆ ಅವಕಾಶ ಕೋರಿದ್ದೇನೆ. ಮುಂದಿನ 2 -3 ದಿನಗಳಲ್ಲಿ ಈ ವಿಚಾರ ಚರ್ಚಿಸಿ, ತಿಳಿಸುವುದಾಗಿ ಬಿಎಸ್ ವೈ ಬುಧವಾರ ಹೇಳಿದ್ದರು.
ಇದನ್ನೂ ಓದಿ:ರಟ್ಟಾಗದ ಸಂಪುಟ ಗುಟ್ಟು; ತರಾತುರಿಯ ದಿಲ್ಲಿ ಪ್ರವಾಸದಿಂದ ಸಿಎಂ ಬಿಎಸ್‌ವೈ ವಾಪಸ್
ಬಿಎಸ್ ವೈ ತಮ್ಮ ಪಟ್ಟಿಯನ್ನು ದಿಲ್ಲಿ ವರಿಷ್ಠರಿಗೆ ನೀಡಿ ಬಂದಿದ್ದರೂ, ಬಿಜೆಪಿ ಶಾಸಕರ ಲಾಬಿ ಮಾತ್ರ ನಿಂತಿಲ್ಲ. ಇಂದು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಕೆಲ ಶಾಸಕರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.