Advertisement
ಪತ್ರಿಕೋದ್ಯಮದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ ಅವರು ‘ಈ ಭಾನುವಾರ’ ಎಂಬ ಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದರು. ಅಂಕಣಕಾರರು, ರಾಜಕೀಯ ವಿಶ್ಲೇಷಕರಾಗಿ ಕೂಡ ಗುರುತಿಸಿಕೊಂಡಿದ್ದರು. ಜೊತೆಗೆ ಮಾಹಿತಿ ಮತ್ತು ಪ್ರಚಾರ ಇಲಾಖೆಯಲ್ಲಿ ಮಾಹಿತಿ ಸಹಾಯಕರಾಗಿಯೂ ಅವರು ಕಾರ್ಯ ನಿರ್ವಹಿಸಿದ ಅಪಾರ ಅನುಭವ ಅವರಿಗಿತ್ತು.
Related Articles
1975ರಲ್ಲಿ ಮಾಜಿ ಮುಖ್ಯಮಂತ್ರಿ ವಿರೇಂದ್ರ ಪಾಟೀಲರು ಆರಂಭಿಸಿದ್ದ ‘ಲೋಕವಾಣಿ’ ಎಂಬ ದಿನ ಪತ್ರಿಕೆ ಮೂಲಕ ಪತ್ರಿಕೋದ್ಯಮಕ್ಕೆ ಪಾದಾರ್ಪಣೆ ಮಾಡಿದ ಮಹದೇವ ಪ್ರಕಾಶ್, ಕಾಲಾಂತರದಲ್ಲಿ ’ಈ ಭಾನುವಾರ’ ಎಂಬ ನಿಯತ ಕಾಲಿಕೆಗೆ ಸಂಪಾದಕರಾಗಿ ಕಾರ್ಯನಿರ್ವಹಿಸಿದರು. ‘ಹೊರಳು ನೋಟ’ ಎಂಬ ಅಂಕಣದ ಮೂಲಕ ಪ್ರಸ್ತುತ ರಾಜಕೀಯ ಘಟನೆಗಳನ್ನು ವಿಶ್ಲೇಷಣೆ ಮಾಡುತ್ತಿದ್ದರು. ‘ಸದನದಲ್ಲಿ ದೇವರಾಜ ಅರಸು’ ಎಂಬ ಕೃತಿಯನ್ನು ಅವರು ರಚಿಸಿದ್ದಾರೆ.
Advertisement
ಇನ್ನು, ಮುಖ್ಯಮಂತ್ರಿ ಬಿಎಸ್ ವೈ ಅವರ ಒಂದು ವರ್ಷ ಆಡಳಿತ ಕುರಿತು ‘ದಣಿವರಿಯದ ಧೀಮಂತ’ ಎಂಬ ಪುಸ್ತಕವನ್ನು ಕೂಡ ಹೊರ ತಂದಿದ್ದರು. ‘ರಾಜ್ಯೋತ್ಸವ ಪ್ರಶಸ್ತಿ’ ಪುರಸ್ಕೃತರಾಗಿದ್ದ ಪ್ರಕಾಶ್, ಈಗಿನ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರಾಗಿರುವ ಹಿನ್ನಲೆ ಲಾಬಿ ಮಾಡಿ ಈ ಪ್ರಶಸ್ತಿ ಪಡೆದೆ ಎಂಬ ಮಾತು ಸಾರ್ವಜನಿಕವಲಯದಲ್ಲಿ ಮೂಡಬಾರದು ಎಂದು ಪ್ರಶಸ್ತಿಯನ್ನು ತಿರಸ್ಕರಿಸಿದ್ದು ಅವರ ಹೆಚ್ಚುಗಾರಿಕೆ.
ಇದನ್ನೂ ಓದಿ : ಅಫ್ಘಾನಿಸ್ತಾನ್: ಕಾಬೂಲ್ ಮಸೀದಿಯೊಳಗೆ ಬಾಂಬ್ ಸ್ಫೋಟ, ಇಮಾಮ್ ಸೇರಿ 12 ಮಂದಿ ಸಾವು