Advertisement
“ಬಿ ಕರಾಬು’ 9.32 ಎಕರೆ ಗೋರಕ್ಷಣಾ ನ್ಯಾಕ್ ಸಮಿತಿಗೆ, ಪೆರಿಫೆರಲ್ ಕ್ಯಾನ್ಸರ್ ಆಸ್ಪತ್ರೆ, ಕರ್ನಾಟಕ ರಾಜ್ಯ ಆಯುಷ್ ವಿಶ್ವವಿದ್ಯಾನಿಲಯ ಒಳಗೊಂಡಂತೆ ಶಿವಮೊಗ್ಗಕ್ಕೆ ಹಲವು ಯೋಜನೆಗಳಿಗೆ ಕೊನೆಕ್ಷಣದಲ್ಲಿ ಆಡಳಿತಾತ್ಮಕ ಅನುಮೋದನೆ ಪಡೆದುಕೊಳ್ಳಲಾಯಿತು. ಶಿವಮೊಗ್ಗದ ವೈದ್ಯಕೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಕ್ಯಾನ್ಸರ್ ಆಸ್ಪತ್ರೆ ಬರಲಿದೆ. ಜತೆಗೆ ಉತ್ತರ ಕನ್ನಡದ ಯಲ್ಲಾಪುರದಲ್ಲಿ ಶೈಕ್ಷಣಿಕ ಮತ್ತು ಪುಷ್ಪಕೃಷಿ ಅಭಿವೃದ್ಧಿಗೆ ವಿಶ್ವ ದರ್ಶನ ಎಜುಕೇಶನ್ ಸೊಸೈಟಿಗೆ ಐದು ಎಕರೆ ಸರಕಾರಿ ಜಮೀನು ನೀಡಲು ಮಂಜೂರಾತಿ ನೀಡಲಾಯಿತು.
Related Articles
Advertisement
ಹುಬ್ಬಳ್ಳಿಯಲ್ಲಿ ನಿತ್ಯ 200 ಟನ್ ಸಾಮರ್ಥ್ಯದ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಸಂಬಂಧದ ಘಟಕಕ್ಕೆ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ (ಎನ್‌ಟಿಪಿಸಿ)ಕ್ಕೆ ಎರಡು ಎಕರೆ ಮಂಜೂರು ಮಾಡಲಾಗಿದೆ. ಮಹದೇವಪುರದಲ್ಲಿ 180 ಕೋ.ರೂ. ವೆಚ್ಚದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಈ ಪೈಕಿ 137 ಕೋಟಿ ರೂ. ಈ ವರ್ಷದಲ್ಲೇ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಸಂಪುಟ ಸಭೆ ನಡೆದ ಸಂದರ್ಭದಲ್ಲೇ ಪೂರಕ ಕಡತಗಳನ್ನು ತರಿಸಿಕೊಂಡು ಹಲವು ಯೋಜನೆಗಳಿಗೆ ಅನುಮೋದನೆ ನೀಡಲಾಯಿತು.