Advertisement
ಗೃಹ ಕಚೇರಿ ಕೃಷ್ಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಇಂದು ಹೂವು ಬೆಳೆಗಾರರಿಗೆ ಪರಿಹಾರ ನೀಡು ಕಾರ್ಯಕ್ಕೆ ಚಾಲನೆ ನೀಡಿದರು.12735 ಹೆಕ್ಟೇರ್ ನಲ್ಲಿ ಹೂವು ಬೆಳೆದ ರೈತರಿಗೆ ಪರಿಹಾರವಾಗಿ 31.83 ಕೋಟಿ ರೂ. ಪರಿಹಾರವನ್ನ ಸರ್ಕಾರ ಘೋಷಿಸಿತ್ತು, ಇಂದು ಪರಿಹಾರ ವಿತರಣೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈ ವೇಳೆ ತೋಟಗಾರಿಕೆ, ಪೌರಾಡಳಿತ, ರೇಷ್ಮೆ ಸಚಿವ ಡಾ| ನಾರಾಯಣಗೌಡ, ಗೃಹ ಸಚಿವ ಬೊಮ್ಮಾಯಿ, ಕೃಷಿ ಸಚಿವ ಬಿ.ಸಿ.ಪಾಟೀಲ್, ಕಂದಾಯ ಸಚಿವ ಆರ್ ಅಶೋಕ್ ಮತ್ತಿತರು ಉಪಸ್ಥಿತರಿದ್ದರು. ನೂರು ದಿನಗಳ ಸಾಧನೆ ಪುಸ್ತಕದಲ್ಲಿ, ಕೋವಿಡ್-19 ಸಂದರ್ಭದಲ್ಲಿ ರೈತರಿಗೆ ನೆರವಾದ ವಿಚಾರಗಳನ್ನು ವಿವರಿಸಲಾಗಿದೆ. ಮೂರು ಇಲಾಖೆ ಅಡಿಯಲ್ಲಿ ಕೈಗೊಂಡ ಕಾರ್ಯಕ್ರಮದ ಬಗ್ಗೆ ತಿಳಿಸಲಾಗಿದ್ದು, ಹೂವು, ಹಣ್ಣು, ತರಕಾರಿ ಹಾಗೂ ರೇಷ್ಮೆ ಬೆಳೆಗಾರರಿಗೆ ಸರಕಾರ ಘೋಷಿಸಿದ ಅನುದಾನದ ವಿವರವನ್ನು ನೀಡಲಾಗಿದೆ. 50083 ಹೆಕ್ಟೇರ್ ನಲ್ಲಿ ತರಕಾರಿ ಹಾಗೂ 41053 ಹೆಕ್ಟೇರ್ ನಲ್ಲಿ ಹಣ್ಣು ಬೆಳೆದ ರೈತರಿಗೆ 137 ಕೋಟಿ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಪೌರಾಡಳಿತ ಇಲಾಖೆ ಅಡಿ ರಾಜ್ಯಾದ್ಯಂತ ಕೋವಿಡ್-19 ಸಂದರ್ಭದಲ್ಲಿ ಕೈಗೊಂಡ ಕ್ರಮದ ಬಗ್ಗೆ ಪುಸ್ತಕದಲ್ಲಿ ವಿವರಣೆ ನೀಡಲಾಗಿದೆ.
Advertisement
ಕೋವಿಡ್ ನಿಂದ ಸಂಕಷ್ಟಕ್ಕೀಡಾದ ಹೂವು ಬೆಳೆಗಾರರ ಪರಿಹಾರ ಕಾರ್ಯಕ್ಕೆ ಸಿಎಂ ಚಾಲನೆ
02:37 PM Jun 02, 2020 | sudhir |
Advertisement
Udayavani is now on Telegram. Click here to join our channel and stay updated with the latest news.