Advertisement
ಆ ಘಟನೆಯ ಕೆಟ್ಟ ಅನುಭ ವವನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪುನೀತ್ ರಾಜ್ ಕುಮಾರ್ ಅವರಿಗೆ ಹೃದಯಾಘಾತವಾದ ಸುದ್ದಿ ತಿಳಿದ ತಕ್ಷಣವೇ ಆಸ್ಪತ್ರೆಗೆ ತೆರಳಿ ಅವರ ನಿಧನದ ಸುದ್ದಿ ವೈದ್ಯರಿಂದ ಖಚಿತಪಡಿಸಿಕೊಂಡ ನಂತರ ಸಂಪೂರ್ಣ ತಾವೇ ಎಲ್ಲ ಜವಾಬ್ದಾರಿಯನ್ನು ನೇರವಾಗಿ ನಿಭಾಯಿಸಿದ್ದರು ಎಂದು ತಿಳಿದು ಬಂದಿದೆ.
Related Articles
Advertisement
ಕುಟುಂಬದೊಡನೆ ನಿರಂತರ ಚರ್ಚೆ: ಪುನೀತ್ ರಾಜಕುಮಾರ್ ಅವರ ಅಂತಿಮ ದರ್ಶನ ಮಾಡಲು ಎಷ್ಟು ಸಮಯ ನೀಡಬೇಕು. ಅಂತ್ಯ ಸಂಸ್ಕಾರ ಎಲ್ಲಿ ಮಾಡಬೇಕು. ಯಾವ ಸಮಯದಲ್ಲಿ ಮಾಡಬೇಕು ಎನ್ನುವ ಕುರಿತಂತೆ ಪ್ರತಿಯೊಂದು ನಿರ್ಧಾರ ತೆಗೆದುಕೊಳ್ಳುವ ಮುಂಚೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಡಾ.ರಾಜ್‌ಕುಮಾರ್ ಕುಟುಂಬ ಸದಸ್ಯರ ಜೊತೆಗೆ ಚರ್ಚೆ ನಡೆಸಿಯೇ ತೀರ್ಮಾನ ತೆಗೆದುಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಡಾ. ರಾಜಕುಮಾರ್ ಕುಟುಂಬದವರೂ ಕೂಡ ಸರ್ಕಾರದ ಜೊತೆಗೆ ಪ್ರತಿಯೊಂದು ಹಂತದಲ್ಲಿಯೂ ಸಹಕಾರ ನೀಡಿದ್ದು, ಸರ್ಕಾರದ ನಿರ್ಧಾರಗಳಿಗೆ ಸಹಮತ ವ್ಯಕ್ತಪಡಿಸಿ ಸಹಕರಿಸಿದ್ದು ಕೂಡ ಸುಗಮವಾಗಿ ಪುನೀತ್ ರಾಜಕುಮಾರ್ ಅವರ ಅಂತಿಮ ದರ್ಶನ ಹಾಗೂ ಅಂತ್ಯ ಸಂಸ್ಕಾರ ನೆರವಾಗಲು ಕಾರಣವಾಗಿದೆ ಎಂದ ಮಾಹಿತಿ ಲಭ್ಯವಾಗಿದೆ.
ಮಗಳನ್ನು ಕರೆತರಲು ಕೇಂದ್ರಕ್ಕೆ ಮನವಿ
ಪುನೀತ್ ರಾಜಕುಮಾರ್ ಅವರ ಮಗಳು ಅಮೇರಿಕಾದಿಂದ ಬರಬೇಕಾಗಿದ್ದರಿಂದ ಅವರನ್ನು ಶೀಘ್ರವಾಗಿ ರಾಜ್ಯಕ್ಕೆ ಕರೆತರಲು ಅನುಕೂಲವಾಗುವಂತೆ ಅಗತ್ಯ ಸಹಾಯ ಮಾಡುವಂತೆ ಕೇಂದ್ರ ವಿದೇಶಾಂಗ ಇಲಾಖೆ ಮೂಲಕ ಮುಖ್ಯಮಂತ್ರಿಗಳು ಮನವಿ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಕೊವಿಡ್ ಹಿನ್ನೆಲೆಯಲ್ಲಿ ವಿವಿಧ ರೀತಿಯ ತಪಾಸಣೆಯ ಕಾರಣ ವಿಳಂಬವಾಗದಂತೆ ನೋಡಿಕೊಂಡು ಶೀಘ್ರವಾಗಿ ಬೆಂಗಳೂರಿಗೆ ತಲುಪಲು ಅವಕಾಶ ಕಲ್ಪಿಸುವಂತೆ ಸಿಎಂ ಮನವಿ ಮಾಡಿದ್ದರು ಎಂದು ತಿಳಿದು ಬಂದಿದೆ.