ಕಾರವಾರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಮಧ್ಯಾಹ್ನ ಅರಬೈಲ್ ಘಾಟ್ ರಸ್ತೆ ಕುಸಿತ ಪ್ರದೇಶ ವೀಕ್ಷಣೆ ಮಾಡಿದರು. ಹಾಗೂ ಕಳಚೆ ಕ್ರಾಸ್ ಗೆ ಭೇಟಿ ನೀಡಿ ಅಲ್ಲಿನ ಗುಡ್ಡ ಕುಸಿತ ಪ್ರದೇಶಗಳ ವೀಕ್ಷಣೆ ಮಾಡಿದರು.
ಯಲ್ಲಾಪುರ ಶಾಸಕ, ಮಾಜಿ ಸಚಿವ ಶಿವರಾಮ ಹೆಬ್ಬಾರ್ ಅವರು ಮುಖ್ಯಮಂತ್ರಿಗಳಿಗೆ ಸಾಥ್ ನೀಡಿದರು.
ನಂತರ ಸಿಎಂ ಬೊಮ್ಮಾಯಿ ಅಂಕೋಲಾಕ್ಕೆ ಆಗಮಿಸಿಲಿದ್ದು, ಪ್ರವಾಹದಿಂದ ಉಂಟಾದ ನಷ್ಟದ ಮಾಹಿತಿ ಪಡೆಯಲಿದ್ದಾರೆ. ಅಂಕೋಲಾದ ಖಾಸಗಿ ಸಭಾ ಭವನದಲ್ಲಿ ಪ್ರವಾಹದ ಸ್ಲೈಡ್ ಶೋ ಏರ್ಪಡಿಸಲಾಗಿದೆ.
ಇದನ್ನೂ ಓದಿ:ಉತ್ತರ ಕನ್ನಡದ ನೆರೆ ಪಿಡೀತ ಪ್ರದೇಶಕ್ಕೆ ಸಿಎಂ ಬೊಮ್ಮಾಯಿ ಭೇಟಿ
30 ಸೇತುವೆ ಕುಸಿದಿದ್ದು, 250 ಕಿಮೀ ರಸ್ತೆ ಹಾಳಾಗಿದೆ. ರಾಷ್ಟ್ರೀಯ ಹೆದ್ದಾರಿ 63 ಬಂದ್ ಆಗಿದೆ. 595 ಹೆಕ್ಟೇರ್ ಬೆಳೆ, 417 ಹೆಕ್ಟೇರ್ ತೋಟಗಾರಿಕಾ ಬೆಳೆ ನಾಶವಾಗಿದೆ. ಆರು ಜನ ಮೃತಪಟ್ಟಿದ್ದು, 69 ಮನೆ ಸಂಪೂರ್ಣ ಕುಸಿದಿವೆ. 313 ಮನೆ ಭಾಗಶಃ ಹಾನಿಯಾಗಿವೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾಹಿತಿ ನೀಡಿದರು. 114 ಗ್ರಾಮ, 18421 ಜನ ನೆರೆಗೆ ಸಿಲುಕಿದ್ದರು. 16357 ಜನರನ್ನು ರಕ್ಷಿಸಲಾಗಿದೆ. 143 ಕಾಳಜಿ ಕೇಂದ್ರ ತೆರೆಯಲಾಗಿತ್ತು ಎಂದು ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ವಿವರಿಸಿದರು